NewsTraining

ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

“ಸಂಸ್ಥೆಯ ನಿಯಮಗಳನ್ನು ಅರಿತು ನಡೆದರೆ ಯಶಸ್ವಿ ಉದ್ಯೋಗಿಯಾಗಿ ಹೊರಹೊಮ್ಮಲು ಸಾಧ್ಯ, ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು. ನಿರಂತರ ಕಲಿಕೆಯಿಂದ ಮಾತ್ರ ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯ. ಆದ್ದರಿಂದ ತರಬೇತಿಯಲ್ಲಿ ನೀಡಲಾಗುವ ಮಾರ್ಗದರ್ಶನದಂತೆ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಗೊಳ್ಳಿರಿ.” ಎಂದು ಮೈಸೂರು ತಾಲೂಕು ಯೋಜನಾಧಿಕಾರಿಗಳಾಗಿರುವ ಶ್ರೀಯುತ ಆನಂದ್‍ರವರು ದೀಪ ಬೆಳಗಿಸುವ ಮೂಲಕ ತರಬೇತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಗದು ಸಹಾಯಕರಿಗೆ ಪೂರಕ ಸಲಹೆಯನ್ನು ನೀಡಿ ಶುಭಕೋರಿದರು.
“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಯೋಜನೆಯು 1982 ರಿಂದ ಹಲವಾರು ಸಮಾಜಾಭಿಮುಖ ಕಾರ್ಯಕ್ರಮಗಳನ್ನು ಯಶಸ್ಸಿಯಾಗಿ ಹಮ್ಮಿಕೊಂಡಿರುವುದು. ಕರ್ನಾಟಕದಾದ್ಯಂತ ಸಂಪೂರ್ಣ ವಿಸ್ತರಣೆಗೊಂಡಿದ್ದು, ವಿವಿಧ ಕಾರ್ಯಕ್ರಮಗಳ ವಿಸ್ತರಿಸುವುದರೊಂದಿಗೆ ಹರಿಯುವ ನದಿಯಾಂತಾಗಿದೆ. ಸಂಸ್ಥೆಯ ಬದಲಾದÀ ವಿಚಾರಗಳು, ಕಾರ್ಯಕ್ರಮಗಳು, ಹೊಸ ಅಳವಡಿಕೆ ಕುರಿತು ಸುತ್ತೋಲೆಗಳ ಅರಿವು ಅಗತ್ಯವಾಗಿದ್ದು ಈ ತರಬೇತಿಯು ತಮ್ಮೆಲ್ಲರ ವೈಯುಕ್ತಿಕ ಹಾಗೂ ಔದ್ಯೋಗಿಕ ಬದುಕಿನ ಬದಲಾವಣೆಗೆ ಮುಖ್ಯ ವೇದಿಕೆಯಾಗಿದೆ. ವಿವಿಧ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದು ಸಂದೇಹಗಳನ್ನು ಬಗೆಹರಿಸಿಕೊಂಡು ತರಬೇತಿಯಲ್ಲಿ ಉತ್ತಮವಾಗಿ ಪಾಲ್ಗೊಳ್ಳಿರಿ” ಎಂದು ತಮ್ಮ ಪ್ರಸ್ತಾವಿಕ ನುಡಿಯಲ್ಲಿ ತರಬೇತಿಯ ಉದ್ದೇಶ ಕುರಿತು ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ. ಮಲ್ಲಾಪುರ ಇವರು ತಿಳಿಸಿದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಶಿವಕುಮಾರ್ ನೆರವೆರಿಸಿಕೊಟ್ಟರು. ಮೈಸೂರಿನ ಕುವೆಂಪು ನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ 3 ದಿನಗಳ ಈ ತರಬೇತಿಗೆ ವಿವಿಧ ತಾಲೂಕುಗಳಿಂದ ಒಟ್ಟು 21 ನಗದು ಸಹಾಯಕರು ಪಾಲ್ಗೊಂಡಿರುತ್ತಾರೆ.

Leave a Reply

Your email address will not be published. Required fields are marked *