ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ, ಕೈ ಮಗ್ಗ ಮತ್ತು ಜವಳಿ ಇಲಾಖೆ ಇದರ ಸಹಯೋಗದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆದ ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ (ಸಿದ್ದ ಉಡುಪು ತಯಾರಿ) ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಮೀಣ ಶೇಷ್ಠತಾ ಕೇಂದ್ರದ ನಿರ್ದೇಶಕರಾದ ಶ್ರೀ ಕೆ.ಬೂದಪ್ಪ ಗೌಡರವರು ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸ್ವಾವಲoಬಿಗಳಾಗಬೇಕು. ಜೀವನದಲ್ಲಿ ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಗ್ರಾಮೀಣ ಶೇಷ್ಠತಾ ಕೇಂದ್ರದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ರವರು ಉಪಸ್ಥಿತರಿದ್ದು, ವರದಿ ವರ್ಷದಲ್ಲಿ 3 ತರಬೇತಿಗಳು ನಡೆಯಲಿದ್ದು, 75 ಮಂದಿಗೆ ತರಬೇತಿ ಪಡೆಯಲು ಅವಕಾಶವಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಟೈಲರಿಂಗ್ ಶಿಕ್ಷಕಿ ಉಷಾ ಉಪಸ್ಥಿತರಿದ್ದರು.
ಈ ತರಬೇತಿಯು ಆರ್ಥಿಕ ವರ್ಷದ ಪ್ರಥಮ ತರಬೇತಿಯಾಗಿದ್ದು, 45 ದಿನ ನಡೆಯಲಿದೆ. ತರಬೇತಿಯ ಪ್ರಾತ್ಯಕಿಕೆಯು ಸಿರಿ ಗ್ರಾಮೊದ್ಯೋಗ ಸಂಸ್ಥೆ ರಾಜಮಹಲ್ ಲಾೈಲದಲ್ಲಿ ನಡೆಯಲಿದೆ. ತರಬೇತಿಯಲ್ಲಿ 25 ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದಾರೆ.
ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತರಬೇತಿಯಲ್ಲಿ ನಾಯಕತ್ವ ಗುಣಗಳು, ಸಂವಹನ ಕೌಶಲ್ಯಗಳು, ಗುಂಪಿನಲ್ಲಿ ಕೆಲಸ ಮಾಡುವುದು, ಧನಾತ್ಮಕ ವರ್ತನೆ, ಸಮಯ ನಿರ್ವಹಣೆ, ಬಿಕ್ಕಟ್ಟು ನಿರ್ವಹಣೆ ಹಾಗೂ ಬ್ಯಾಂಕ್ ಸವಲತ್ತುಗಳ ಕುರಿತು ತರಬೇತಿ ನೀಡಲಾಗುವುದು. ಬಳಿಕ ವಿವಿಧ ಗಾರ್ಮೆಂಟ್ಸ್ಗಳ ಭೇಟಿ ಮಾಡಿಸಲಾಗುವುದು. ತರಬೇತಿಯ ಕೊನೆಯಲ್ಲಿ ಮೌಲ್ಯಮಾಪನ ನಡೆಸಿ ಪ್ರಮಾಣ ಪತ್ರವನ್ನು ನೀಡಲಾಗುವುದು.
ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಉದ್ಘಾಟನೆ

One thought on “ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಉದ್ಘಾಟನೆ”
Non woven bag making machine