‘ನೀವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇದ್ದರೆ, ಕೆಲಸದ ಫಲ ಶ್ರೇಷ್ಠವಾಗಿ ಮೂಡುವುದು ಆದ್ದರಿಂದ ಕೆಲಸವನ್ನು ಪ್ರೀತಿಸಿರಿ, ಗೌರವಿಸಿರಿ ಅದು ನಿಮಗೆ ಗೌರವವನ್ನು ತಂದುಕೊಡುವುದು’ ಎಂದು ಮೈಸೂರು ಪ್ರಾದೇಶಿಕ ಕಛೇರಿಯ ಆಡಳಿತ ಯೋಜನಾಧಿಕಾರಿಗಳಾದ ಶ್ರೀ ಪ್ರೇಮಾನಂದ್ ರವರು ದೀಪ ಬೆಳಗಿಸುವ ಮೂಲಕ ತರಬೇತಿಗೆ ವಿದ್ಯುಕ್ತ ಚಾಲನೆ ನೀಡಿ ಶುಭಕೋರಿದರು.
ನಂತರದಲ್ಲಿ ಮಾತನಾಡಿದ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರರವರು ನಿರಂತರ ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ಯೋಜನೆಯ ಪ್ರಸ್ತುತ ಮಾಹಿತಿಯನ್ನು ತಿಳಿದುಕೊಳ್ಳಲು, ಸಂವಹನ ಕಲೆ, ವ್ಯಕ್ತಿತ್ವ ವಿಕಾಸನ, ಒತ್ತಡ ನಿರ್ವಹಣೆಗೆ ಪೂರಕವಾಗಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದು 3 ದಿನದ ತರಬೇತಿಯ ರೂಪುರೇಷೆಗಳನ್ನು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ ತಿಳಿಸಿದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾಗಿರುವ ಶ್ರೀ ಶಿವಕುಮಾರ್ರವರು ನೆರವೆರಿಸಿಕೊಟ್ಟರು. ಮೈಸೂರಿನ ಕುವೆಂಪುನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ದಿನಾಂಕ: 18.07.2019 ರಿಂದ 21.07.2019ರವರೆಗೆ ನಡೆಯಲಿರುವ 3 ದಿನಗಳ ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಗೆÀ ವಿವಿಧ ತಾಲೂಕುಗಳಿಂದ ಒಟ್ಟು 18 ನಗದು ಸಹಾಯಕರು ಪಾಲ್ಗೊಂಡಿರುತ್ತಾರೆ.
ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

One thought on “ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ”
This Training happened when interview taken date please tel