AgricultureNewsTraining

ನಾವು ಮೊದಲು ಪರಿವರ್ತನೆಯಾದರೆ, ನಮ್ಮ ಕೆಲಸದಲ್ಲಿ ಬದಲಾವಣೆ ಸಾಧ್ಯ- ಪಿ. ಗಂಗಾಧರ ರೈ

“ನಾವು ಮೊದಲು ಪರಿವರ್ತನೆಯಾದರೆ, ನಮ್ಮ ಕೆಲಸದಲ್ಲಿ ಬದಲಾವಣೆ ಸಾಧ್ಯ, ಮನೋ-ದೌರ್ಬಲ್ಯವನ್ನು ಸರಿಪಡಿಸಿಕೊಂಡರೆ ಉತ್ತಮ ಕೆಲಸದ ಮೂಲಕ ಗುರಿಮುಟ್ಟಲು ಸಾಧ್ಯ. ಬಡವರ ಕಲ್ಯಾಣಕ್ಕೆ, ಸಣ್ಣ-ಅತಿ ಸಣ್ಣ ರೈತರು ಹಾಗೂ ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಪೂಜ್ಯರು ಹಲವಾರು ಕಾರ್ಯಕ್ರಮದೊಂದಿಗೆ ಈ ಕಾರ್ಯಕ್ರಮವನ್ನು ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿಕರಿಗೆ ಸೇವೆಸಲ್ಲಿಸುವ ನಿಟ್ಟಿನಲ್ಲಿ ಅನುಷ್ಠಾನಿಸಿದ್ದಾರೆ. ಪೂಜ್ಯರ ಆಶಯವನ್ನು ಸಾಕಾರಗೊಳಿಸುವಲ್ಲಿ ನಮ್ಮನ್ನು ಚಟುವಟಿಕೆಯಿಂದ ತೊಡಗಿಸಿಕೊಂಡು ಕಠಿಣ ಶ್ರಮ, ಸೇವಾ ಮನೋಭಾವ, ನಾಯಕತ್ವದ ಗುಣಗಳೊಂದಿಗೆ ಈ ಯೋಜನೆಯ ಸೌಲಭ್ಯವನ್ನು ಅಗತ್ಯ ಕೃಷಿಕರಿಗೆ ದೊರಕಿಸುವಲ್ಲಿ ಸನ್ನದ್ಧರಾಗಿಸಿಕೊಳ್ಳೋಣ.” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ನ ಮೈಸೂರಿನ ಪ್ರಾದೇಶಿಕ ನಿರ್ದೇಶಕರಾಗಿರುವ ಗೌರವಾನ್ವಿತ ಪಿ. ಗಂಗಾಧರ ರೈ ಇವರು ಕೃಷಿ ಯಂತ್ರಧಾರೆ ಬಾಡಿಗೆ ಸೇವಾ ಕೇಂದ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಉತ್ತಮ ಸೇವೆಯನ್ನು ನೀಡುವಲ್ಲಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ನ ಸಿ.ಎಚ್.ಎಸ್.ಸಿ. ನಿರ್ದೇಶಕರಾಗಿರುವ ಶ್ರೀ ಅಬ್ರಹಾಂ, ಮಂಡ್ಯ ಜಿಲ್ಲಾ ನಿರ್ದೇಶಕರಾಗಿರುವ ಶ್ರೀ ವಿನಯ್ ಕುಮಾರ್, ರಾಮನಗರ ಜಿಲ್ಲಾ ನಿರ್ದೇಶಕರಾಗಿರುವ ಶ್ರೀ ಬಾಬು ನಾಯಕ್, ಚಾಮರಾಜನಗರ ಜಿಲ್ಲಾ ನಿರ್ದೇಶಕರಾಗಿರುವ ಶ್ರೀಮತಿ ಲೀಲಾವತಿ, ಹಾಸನ ಜಿಲ್ಲಾ ನಿರ್ದೇಶಕರಾಗಿರುವ ಶ್ರೀ ಜಯರಾಂ, ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಾಪುರ ಹಾಗೂ ಮೈಸೂರು, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ CHSC ಸಮನ್ವಯಾಧಿಕಾರಿಗಳು, ಮೆಕನೀಕಲ್ ಅಭಿಯಂತರರು ಉಪಸ್ಥಿತರಿದ್ದರು.
ಪ್ರಗತಿ ಪರಿಶೀಲನಾ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಮತ್ತು ಧನ್ಯಾವಾದ ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ CHSC ಸಮನ್ವಯಾಧಿಕಾರಿಯಾದ ಶ್ರೀ ದಿನೇಶ್‍ರವರು ನೆರವೇರಿಸಿಕೊಟ್ಟರು. ಮೈಸೂರಿನ ಕುವೆಂಪುನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ದಿನಾಂಕ: 19.07.2019 ರಂದು 1 ದಿನದ ಪ್ರಗತಿ ಪರಿಶೀಲನಾ ಸಭೆಗೆ ತರಬೇತಿಗೆ ಮೈಸೂರು, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ವಿವಿಧ ತಾಲೂಕುಗಳಿಂದ ಒಟ್ಟು 40 CHSC ಪ್ರಬಂಧಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *