AgricultureNewsTraining

ಹಾಲು ಉತ್ಪಾದಕರ ಸಂಘಗಳ ಕಾರ್ಯನಿರ್ವಾಹಕರಿಗೆ ಮೂರು ದಿನಗಳ ಚೇತನಾ ಶಿಬಿರ

ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ದಿನಾಂಕ: 29.7.2019 ರಿಂದ 31.07.2019 ರವೆರೆಗೆ ಆಯೋಜಿಸಲಾಗಿತ್ತು. ಕರ್ನಾಟಕ ಹಾಲು ಮಹಾ ಮಂಡಳಿಯ ಧಾರವಾಡ ತರಬೇತು ಕೇಂದ್ರದಿಂದ ಆಯೋಜಿಸಲ್ಪಟ್ಟಿದ್ದು, ಈ ತರಬೇತಿಯಲ್ಲಿ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಧಾರವಾಡ ಮತ್ತು ಗುಲ್ಬರ್ಗಾ ಹಾಲು ಒಕ್ಕೂಟಗಳ 50 ಜನ ಹಿರಿಯ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಧಾರವಾಡ ತರಬೇತಿ ಕೇಂದ್ರದ ಅಪರ ನಿರ್ದೇಶಕ ಡಾ|. ಶಿವ ಶಂಕರ್, ಹಿರಿಯ ಉಪವ್ಯವಸ್ಥಾಪಕ ಡಾ|. ಎಸ್ ಎಸ್, ಹಿರೇಮಠ್, ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ ಬೂದಪ್ಪ ಗೌಡ ಮತ್ತು ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆ.ಎಂ.ಎಫ್‍ನ ನಿವೃತ್ತ ಜಂಟಿ ನಿರ್ದೇಶಕ ಶ್ರೀ ಡಿ.ಎಸ್. ಹೆಗಡೆ ತರಬೇತಿ ಸಂಯೋಜಕರಾಗಿ ಕಾರ್ಯನಿರ್ವಹಿಸಿ ಶಿಬಿರಾರ್ಥಿಗಳನ್ನು ತಣ್ಣೀರುಪಂತ ಹಾಲು ಉತ್ಪಾದಕರ ಸಂಘ, ಯಶಸ್ವಿ ಹೈನುಗಾರ ಶ್ರೀ ವಿಲಿಯಂ ಲೋಬೋ ಮತ್ತು ಖಾದರ್‍ರವರ ಫಾರ್ಮ್‍ಗಳಿಗೆ ಭೇಟಿ ಮಾಡಿಸಲಾಯಿತು ಹಾಗೂ ಹೈನುಗಾರಿಕೆ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ತಜ್ಞರಿಂದ ತರಬೇತಿ ನೀಡಲಾಯಿತು. ಪ್ರತಿದಿನ ಬೆಳಗ್ಗೆ ಯೋಗ ಮತ್ತು ಪ್ರಕೃತಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಿಂದ ಯೋಗ ಮತ್ತು ಪ್ರಾಣಾಯಾಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹೊಸಬಗೆಯ ಚಿಂತನೆ, ಕ್ರಿಯಾತ್ಮಕತೆಯಿಂದ ಸಂತಸಗೊಂಡ ಶಿಬಿರಾರ್ಥಿಗಳು ತಮ್ಮ ತಮ್ಮ ಸಂಘ, ಒಕ್ಕೂಟಗಳ ಅನುಭವ ಹಂಚಿ ಕೊಂಡರು.

Leave a Reply

Your email address will not be published. Required fields are marked *