ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕಾರ ನೀಡುವ ಕೆಲಸವನ್ನು ಪ್ರತಿಯೊಬ್ಬರು ನಮ್ಮ ಜವಾಬ್ದಾರಿ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿ.ವಿಜಯ್ ಕುಮಾರ್ ನಾಗನಾಳ ತಿಳಿಸಿದರು. ಕಬಿನಿ ಜಲಾಶಯದಿಂದ ದಾಖಲೆ ಪ್ರಮಾದಲ್ಲಿ ನೀರು ಬಿಟ್ಟ ಹಿನ್ನಲೆಯಲ್ಲಿ ಮುಳುಗಡೆಗೊಂಡಿರುವ ಪ್ರದೇಶದ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಸಂತ್ರಸ್ತರಿಗೆ ಅಗತ್ಯ ದಿನ ಬಳಕೆ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು ನಿಮ್ಮ ಮನೆಗಳು, ಕೃಷಿ ಭೂಮಿ ಮುಳುಗಡೆಯಾಗಿದ್ದು, ನೀವೆಲ್ಲ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ನೀವು ಯಾರು ಭಯಪಡಬೇಕಿಲ್ಲ. ಸರ್ಕಾರ ಮತ್ತು ನಮ್ಮಂತಹ ಸಂಘ ಸಂಸ್ಥೆಗಳು ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ನಿಮ್ಮ ಜೊತೆ ಇರುತ್ತೇವೆ. ಈಗ ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಧೈರ್ಯ ತುಂಬಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಕೂಡ ಮಾಡಿದ 250 ಬೆಡ್ ಶೀಟ್ಗಳು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಚ್.ಡಿ ಕೋಟೆ ತಾಲೂಕಿನ ಮಹಿಳಾ ಸ್ವ-ಸಹಾಯ ಸಂಘಗಳಿಂದ ದಾನದ ರೂಪದಲ್ಲಿ ಪಡೆದ 20 ಕ್ಷಿಂಟಾಲ್ ಅಕ್ಕಿ, 150 ಸೀರೆ, 300 ತೆಂಗಿನಕಾಯಿ, ದಿನಸಿ ಸಾಮಾಗ್ರಿಗಳಾದ ಅಡುಗೆ ಎಣ್ಣೆ, ಖಾರದ ಪುಡಿ, ಬೆಲ್ಲ, ಸಕ್ಕರೆ, ಉಪ್ಪು, ಬಿಸ್ಕೆಟ್, ಸೋಪು, ಬ್ರಷ್, ಪೇಸ್ಟ್ ಮತ್ತು ತರಕಾರಿಗಳು ವಿತರಿಸಲಾಯಿತು. ಬಿದರಹಳ್ಳಿ ಪರಿಹಾರ ಕೇಂದ್ರದ 40 ಕುಟುಂಬಗಳಿಗೆ ಮತ್ತು ಡಿ.ಬಿ ಕುಪ್ಪೆ, ಮಜ್ಜೂರು, ಆನೆಮಾಳ, ಗಿರಿಜನ ಹಾಡಿಯ ನಿರಾಶ್ರಿತರಿಗೆ ಸಾಮಾಗ್ರಿಗಳನ್ನು ಪ್ರತಿ ಮನೆಗೆ ನೀಡಲಾಯಿತು. ಯೋಜನಾಧಿಕಾರಿ ಶಶಿಧರ್, ಮೇಲ್ವಿಚಾರಕರಾದ ವಸಂತ್ ಕುಮಾರ್, ದಿನೇಶ್, ಜಯರಾಮ್, ಪವಿತ್ರ, ನೀರಿಕ್ಷಕ ಶ್ರೀನಿವಾಸ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಕನ್ನಡ ಪ್ರಮೋದ್, ಮುಖಂಡರಾದ ಮಾಯಿಗೌಡ, ಇಬ್ರಾಹಿಂ ಇದ್ದರು.
ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿ – ನಾಗನಾಳ

2 thoughts on “ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿ – ನಾಗನಾಳ”
Sir I just completed sslc and learned computer knowledge,,tally ,gst ,,is it ok
Om sri monjunath a namha