NewsTraining

ಹೈನುಗಾರಿಕಾ ಕಾರ್ಯನಿರ್ವಾಹಕರಿಗೆ ಚೇತನಾ ಶಿಬಿರ

ಕರ್ನಾಟಕ ಹಾಲು ಮಹಾ ಮಂಡಳಿಯ ಧಾರವಾಡ ತರಬೇತಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಹಾಲು ಉತ್ಪಾದಕರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ, 3 ದಿನಗಳ ಚೇತನಾ ಶಿಬಿರವನ್ನು ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಆಯೋಜಸಲಾಯಿತು. ಶಿಬಿರವನ್ನು ತರಬೇತಿಯ ಸಂಸ್ಥೆಯ ನಿರ್ದೇಶಕ ಕೆ. ಬೂದಪ್ಪ ಗೌಡ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಧಾರವಾಡ ತರಬೇತಿ ಕೇಂದ್ರದ ಹಿರಿಯ ಉಪನಿರ್ದೇಶಕ ಡಾ||. ಎಸ್.ಎಸ್. ಹಿರೇಮಠ್, ಕೆ.ಎಂ.ಎಫ್‍ನ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್.ಹೆಗಡೆ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಚಂದ್ರಶೇಖರ್‍ರವರು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಮುಖ್ಯವಾಗಿ ಹೈನುಗಾರಿಕಾ ಸಂಘ, ಕ್ಷೇತ್ರ ಅಧ್ಯಯನ, ಹೈನುಗಾರಿಕಾ ರಂಗದಲ್ಲಿ ಇತ್ತೀಚಿಗಿನ ಬೆಳವಣಿಗೆ, ಯಶಸ್ವಿ ಹೈನುಗಾರರೊಂದಿಗೆ ಸಂದರ್ಶನ, ಯೋಗ, ಒತ್ತಡ ನಿರ್ವಹಣೆ, ಸಂಘಗಳ ಲೆಕ್ಕಪತ್ರಗಳು, ಸಂವಹನ ಕಲೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡಕೊಳ್ಳಲಿದ್ದಾರೆ. ಧಾರವಾಡ, ಶಿವಮೊಗ್ಗ, ಬೆಳಗಾವಿ ಒಕ್ಕೂಟಗಳ ವಿವಿಧ ತಾಲೂಕುಗಳ ಸುಮಾರು 40 ಜನ ಅಭ್ಯರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿರುತ್ತಾರೆ. ಕು. ಸ್ವಾತಿ ಮತ್ತು ಕು. ನಿರೀಕ್ಷಾ ಪ್ರಾರ್ಥನೆ ಹಾಡುವುದರ ಮೂಲಕ ತರಬೇತಿಗೆ ಶುಭಾರಂಭ ನೀಡಿದರು. ಕಾರ್ಯಕ್ರಮವನ್ನು ತರಬೇತಿ ಕೇಂದ್ರದ ಉಪನ್ಯಾಸಕ ರಾಜೇಶ್‍ರವರು ನಿರ್ವಹಿಸಿದರು.

Leave a Reply

Your email address will not be published. Required fields are marked *