NewsTraining

ಸ್ವ-ಸಹಾಯ ಸಂಘಗಳಿಗೆ ತಾಂತ್ರಿಕ ತರಬೇತಿಗಾರರ ಕಾರ್ಯಗಾರ

ಸಮಾಜದಲ್ಲಿ ಇವರೆಲ್ಲರೂ ಸಮಪಾಲುಹೊಂದಿ ಬದುಕುವಂತಾಗಬೇಕು, ಜೀವನದಲ್ಲಿ ಪರಿಶ್ರಮ ಪಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು, ಕ್ಷಣಿಕ ಆಸೆಗೆ ಬಲಿಯಾದರೆ ಜೀವನವು ಅದಕ್ಕೆ ಬಲಿಯಾಗುದು ಸಂಶಯವೇ ಇಲ್ಲ. ಎಂತಹ ಸಂಧರ್ಭ ಬಂದರೂ ದೃತಿಗೆಡದೇ ಧೈರ್ಯವಾಗಿ ಎದುರಿಸುವ ಮೂಲಕ ಧನಾತ್ಮಕ ಚಿಂತನೆ ರೂಡಿಸಿಕೊಂಡು ಬದುಕಿನ ಹೆಜ್ಜೆಗಳನ್ನು ಹಾಕುವ ಮೂಲಕ ಸಜ್ಜನರಾಗಿ ಸಾಭಿಮಾನದ ಬದುಕನ್ನು ನಡೆಸಲು ತರಬೇತಿಗಳು ಅತ್ಯಗತ್ಯವಾಗಿದೆ ಎಂದು ಮೈಸೂರು ವಿವೇಕಾನಂದ ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಛೇರಿಯಲ್ಲಿ ನಡೆದ ಸ್ವ-ಸಹಾಯ ಸಂಘಗಳಿಗೆ ತಾಂತ್ರಿಕ ತರಬೇತಿಗಾರರ ಕಾರ್ಯಗಾರವನ್ನು ಮೈಸೂರು ಜಿಲ್ಲಾ ನಿರ್ದೇಶಕರಾದ ವಿ. ವಿಜಯ್ ಕುಮಾರ್ ನಾಗನಾಳರವರು ಉದ್ಘಾಟಿಸಿ ಮಾತಾನಾಡಿದರು.

ಸ್ವ-ಸಹಾಯ ಸಂಘಗಳಲ್ಲಿ ಅವಿದ್ಯಾವಂತ ಬಡ ಕುಟುಂಬಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿದ್ದು ಈ ಸದಸ್ಯರಿಗೆ ಸ್ವ-ಸಹಾಯ ಸಂಘಗಳ ನಿರ್ವಹಣೆಯೊಂದಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮ ಸಂಘದ ಏಳಿಗೆಗಾಗಿ ಬಳಸಿಕೊಳ್ಳಲು ಸಂಘದ ಸದಸ್ಯರಿಗೆ ಮಾಹಿತಿಯೂ ಅತ್ಯವಶ್ಯಕತೆ ಇರುವುದರಿಂದ ಇಂತಹ ಸದಸ್ಯರಿಗೆ ತರಬೇತಿ ಸಹಾಯಕರು ಪರಿಪೂರ್ಣ ಮಾಹಿತಿಯನ್ನು ರೂಪಿಸಿಕೊಟ್ಟರೇ ಮಾತ್ರ ಸ್ವ-ಸಹಾಯ ಸಂಘಗಳಿಗೆ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಸ್ವತಃ ಸದಸ್ಯರಿಗೆ ತೊಡಗಿಕೊಳ್ಳಲು ಮೂಲ ಪ್ರೇರಣೆ ನೀಡುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.

ಈ ತರಬೇತಿ ಕಾರ್ಯಗಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾದ ಚಂದ್ರಶೇಖರ್. ಯು.ಎನ್, ರಮೇಶ್, ಜಿಲ್ಲಾ ಪ್ರಬಂಧಕರಾದ ಪದ್ಮನಾಭ, ತಾಂತ್ರಿಕ ಪ್ರಬಂಧಕರಾದ ಧರಣಿ, ಆಂತರಿಕ ಲೆಕ್ಕಪರಿಶೋಧಕರಾದ ಭಾಸ್ಕರ್ ಮತ್ತು ಎಲ್ಲಾ ತರಬೇತಿ ಸಹಾಯಕರು ಹಾಜರಿದ್ದರು.

Leave a Reply

Your email address will not be published. Required fields are marked *