NewsStudy Tours

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲೀಡ್ ಪ್ರಯಾಣ ತಂಡ ಭೇಟಿ

“ಪ್ರಪಂಚವು ಜ್ಞಾನದಿಂದ ಶ್ರೀಮಂತವಾಗಿದೆ. ಜ್ಞಾನವನ್ನು ಅನೇಕ ಮೂಲಗಳಿಂದ ಪಡೆಯಬಹುದು. 50 ವರ್ಷಗಳ ಹಿಂದೆ ಜ್ಞಾನ ಸಂಪಾದಿಸಬೇಕಾದರೆ ಪುಸ್ತಕ ಮತ್ತು ಗ್ರಂಥಾಲಯ ಬಳಕೆ ಮಾಡುತ್ತಿದ್ದೆವು. ಈ ಜ್ಞಾನಕ್ಕಾಗಿ ನಾವು ಸgಸ್ವತಿಯನ್ನು ಪೂಜಿಸುತ್ತಿದ್ದೆವು. ಆದರೆ ಈಗ ಮೊಬೈಲ್ ಮತ್ತು ಟ್ಯಾಬ್‍ನಲ್ಲಿ ಬಟನ್ ಒತ್ತುವ ಮೂಲಕ ಮಾಹಿತಿ ನಮಗೆ ದೊರೆಯುತ್ತದೆ. ಮತ್ತೊಂದೆಡೆ ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕಾಗುತ್ತದೆ. ವಿಷಯದ ಬಗ್ಗೆ ಮಾಹಿತಿ ಪಡೆಯುವುದು ಜ್ಞಾನ ಪರಿಗಣಿಸಲಾಗುವುದಿಲ್ಲ. ಜ್ಞಾನ ಅನುಭವ ಮತ್ತು ಅಭ್ಯಾಸದಿಂದ ಲಭಿಸುತ್ತದೆ.”
ಮೊಬೈಲ್ ನಲ್ಲಿ ಅಥವಾ ಯಾವುದೇ ಉಪಕರಣಗಳಲ್ಲಿ ನಮಗೆ ಸಂಬಂಧಿಸದ ಮಾಹಿತಿಯನ್ನು ನಾವು ತ್ಯಜಿಸಬಹುದು. ಅಗತ್ಯವಿರುವ ಮಾಹಿತಿಯನ್ನು ಮಾತ್ರ ನಾವು ಬಟನ್ ಒತ್ತುವುದರಿಂದ ಮಾತ್ರ ಉಳಿಸಬಹುದು. ಆದರೆ ನಮ್ಮ ಮೆದುಳಿನಲ್ಲಿ ಪಡೆದ ಮಾಹಿತಿ ಅನುಭವ ಮತ್ತು ಅರ್ಥಮಾಡಿಕೊಳ್ಳುವಿಕೆಯ ಮೇಲೆ ಬಹಳ ಸಮಯ ಉಳಿಯುತ್ತದೆ. ಅದನ್ನು ಅಳಿಸಲಾಗುವುದಿಲ್ಲ. 50 ವರ್ಷಗಳ ನಂತರವೂ ನೀವು ಕಣ್ಣು ಮುಚ್ಚಿ ಮನಸ್ಸಿನಲ್ಲಿರುವ ಯಾವುದೇ ಮಾಹಿತಿಯನ್ನು ಬಯಸಿದರೆ ಎಲ್ಲವನ್ನೂ ನೆನಪಿಸಿಕೊಳ್ಳಬಹುದು. ಏಕೆಂದರೆ ಮೆದುಳಿಗೆ ದೊರೆತ ಮಾಹಿತಿಯು ಜ್ಞಾನವಾಗಿ ಪರಿವರ್ತಿತವಾಗಿರುತ್ತದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇಶ್‍ಪಾಂಡೆ ಫೌಂಡೇಶನ್ ವತಿಯಿಂದ ಲೀಡ್ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 95 ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಯುವಕರು ಯಾವುದೇ ರಾಷ್ಟ್ರದ ಭವಿಷ್ಯ. ನಮ್ಮ ಪೂರ್ವಜರು ನೀಡಿದ ಜಗತ್ತಿನಲ್ಲಿ ನಾವು ಬದುಕುವುದಿಲ್ಲ. ನಮ್ಮ ಭವಿಷ್ಯದ ಪೀಳಿಗೆಯವರು ನಮಗೆ ಕೊಟ್ಟಿರುವ ಪ್ರಪಂಚದ ಮೇಲೆ ಜೀವಿಸುತ್ತಿದ್ದೇವೆ. ಇದರರ್ಥ ನಾವು ಹಿಂದಿನ ಮತ್ತು ಭವಿಷ್ಯದಲ್ಲಿ ಜೀವಸುತ್ತಿದ್ದೇವೆ. ನಮ್ಮ ಪೂರ್ವಜರು ನಮಗೆ ಸುಂದರ ಜಗತ್ತನ್ನು ನೀಡಿದ್ದಾರೆ ಎಂದಾದರೆ ನಾವು ಅದನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್‍ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಮತ್ತು ಬಡತನ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಬಡತನ ಎನ್ನುವುದು ಎಲ್ಲರಲ್ಲೂ ಅವರವರ ನಿರ್ದಿಷ್ಟತೆಯ ಮೇಲೆ ಇರುತ್ತದೆ. ಅದನ್ನು ಗುರುತಿಸಿಕೊಳ್ಳುವ ಬಗ್ಗೆ ಜ್ಞಾನ ಮತ್ತು ಸಂಪೂರ್ಣತೆ ಹೊಂದಲು ಅವಕಾಶಗಳನ್ನು ನಮ್ಮ ಗ್ರಾಮೀಣ ಯೋಜನೆಯ ಮೂಲಕ ನೀಡುತಿದ್ದೇವೆ ಎಂದರು.
ದೇಶ್‍ಪಾಂಡೆ ಫೌಂಡೇಶನ್ ವತಿಯಿಂದ ಪ್ರತಿವರ್ಷವೂ ನಡೆಸಿಕೊಡುವ ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಆಯೋಜಿಸುತ್ತದೆ. ಲೀಡ್ ಪ್ರಯಾಣ ತಂಡವು 3 ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಳ ಹಾಗೂ ಪ್ರೇಕ್ಷಣಿಯ ಸ್ಥಳಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡ್‍ಸೆಟ್, ಸ್ವ-ಸಹಾಯ/ ಜ್ಞಾನವಿಕಾಸ ಸಂಘಗಳ ಭೇಟಿ, ಜನಜಾಗೃತಿ ವೇದಿಕೆ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *