NewsWomen Empowerment

ಮಹಿಳೆಯರು ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ – ಡಾ || ಎಲ್ ಹೆಚ್ ಮಂಜುನಾಥ್

ದಿನಾಂಕ:10.02.2020 ರಂದು ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ವಿದ್ಯಾನಗರ ಕಾರ್ಯಕ್ಷೇತ್ರದಲ್ಲಿ ದಾವಣಗೆರೆ ತಾಲೂಕು ವ್ಯಾಪ್ತಿಯ 13 ತಂಡಗಳ ಸದಸ್ಯರಿಗೆ ಹಾಗೂ ದೇವನಗರಿ ತಾಲೂಕು ಯೋಜನಾ 3 ತಂಡಗಳ ಸದಸ್ಯರಿಗೆ ಸ್ವ-ಉದ್ಯೋಗಕ್ಕೆ ಪೂರಕವಾಗಿ ಆಟೋ ಉದ್ದೇಶಕ್ಕಾಗಿ ಪ್ರಗತಿನಿಧಿ ಪಡೆದುಕೊಂಡ ಸದಸ್ಯರಿಗೆ ಮಾನ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ಮೂಲಕ 16 ಜನ ಸದಸ್ಯರಿಗೆ ಆಟೋ ವಿತರಣೆ ಮಾಡಲಾಯಿತು. ಸದ್ರಿ ಸರಳ ಕಾರ್ಯಕ್ರದಲ್ಲಿ ಮಾನ್ಯ ಪ್ರಾದೇಶಿಕ ನಿರ್ದೇಶಕರು ಧಾರವಾಡ ಪ್ರಾಧೇಶಿಕ ಕಛೇರಿ, ಮಾನ್ಯ ಜಿಲ್ಲಾ ನಿರ್ದೇಶಕರು ದಾವಣಗೆರೆ ಜಿಲ್ಲೆ, ದಾವಣಗೆರೆ ಹಾಗೂ ದೇವನಗರಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಾವಣಗೆರೆ ಶಾಖೆಯ ವ್ಯವಸ್ಥಾಪಕರು, ಗುರು ಮೋಟಾರ್ಸ್ ನ ಮಾಲೀಕರು, ದಾವಣಗೆರೆ ಹಾಗೂ ದೇವನಗರಿ ತಾಲೂಕಿನ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳ ಹಾಜರಿದ್ದರು, ಸದ್ರಿ ಕಾರ್ಯಕ್ರದಲ್ಲಿ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ಮಾತನಾಡಿ ಮಹಿಳೆಯರು ಈ ರೀತಿ ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ ಹಾಗೂ ಯೋಜನೆಯ ಅಭೀವೃದ್ದಿಯ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *