Job AlertNews

ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಚಾಲಕರಾಗಿ ದುಡಿಯಲು ಆಸಕ್ತರಿರುವ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 500ಕ್ಕೂ ಮಿಕ್ಕಿದ ಚಾಲಕರ ಅಗತ್ಯತೆಯಿದ್ದು, ಆಸಕ್ತರಿಗೆ ಯಂತ್ರಗಳ ಚಾಲನೆಯಲ್ಲಿ ತರಬೇತಿ ನೀಡಿ ನೌಕರಿಯನ್ನು ಒದಗಿಸಲಾಗುವುದು. ನಿಯಮಾವಳಿಗಳಂತೆ ಉತ್ತಮ ವೇತನ ಸೌಲಭ್ಯವನ್ನು ನೀಡಲಾಗುವುದು. 20 ರಿಂದ 30 ವರ್ಷದೊಳಗಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ನಂಬ್ರ, ಈಮೈಲ್ ವಿಳಾಸಗಳನ್ನೊಳಗೊಂಡಂತೆ ತಮ್ಮ ಅರ್ಜಿಯನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20.3.2020.

ಅರ್ಜಿಯನ್ನು ಈಮೈಲ್ ಮುಖಾಂತರ ಮಾತ್ರ ಸ್ವೀಕರಿಸಲಾಗುವುದು. ಅರ್ಜಿಯನ್ನು ಕಳುಹಿಸಿಕೊಡಬೇಕಾದ ಈಮೈಲ್ ವಿಳಾಸ skdrdp@skdrdpindia.org .ಈ ನಿಟ್ಟಿನಲ್ಲಿ ಯಾವುದೇ ಸಂದೇಹಗಳಿದ್ದರೂ. ಇದೇ ಈಮೈಲ್ ವಿಳಾಸಕ್ಕೆ ಪತ್ರ ಬರೆದು ಪರಿಹರಿಸಿಕೊಳ್ಳುವುದು.

(ಡಾ| ಎಲ್.ಎಚ್.ಮಂಜುನಾಥ್)
ಕಾರ್ಯನಿರ್ವಾಹಕ ನಿರ್ದೇಶಕರು

4 thoughts on “ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ

  1. ನಾನು ಒಬ್ಬ ಕಾನೂನು ಪದವಿಧರ, ನಿಮ್ಮ ನೇಮಕಾತಿ ಕ್ರಮದ ಬಗ್ಗೆ ಜನರಿಗೆ ಗೊತ್ತಾಗಿದೆ. ಹಿಂದೆ 2 ಸಲ ನಡೆದ ನೇಮಕಾತಿಗಳಲ್ಲಿಯೂ ಹೆಚ್ಚು ಅಂಕ ತೆಗೆದುಕೊಂಡವರನ್ನು ಬಿಟ್ಟು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಇದು ಎಷ್ಟರ ಮಟ್ಟಿಗೆ ಸರಿ, ಮೊದಲು ನೇಮಕಾತಿಯನ್ನು ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ನಡೆಸಿ, ಒಬ್ಬ ವ್ಯಕ್ತಿಯ ಪ್ರತಿಭೆ 5 ನಿಮಿಷ ಸಂದರ್ಶನದಲ್ಲಿ ಅಳೆಯಲು ಸಾಧ್ಯವಿಲ್ಲ. ಸಂಸ್ಥೆಯ ಹಿರಿಯ ಅಧಿಕಾರಿಗಳು ಇದನ್ನು ಗಮನಿಸಬೇಕು, 2 ಸಲ ಸಂದರ್ಶನ ನಡೆಸುವುದು ಉತ್ತಮ. ಭ್ರಷ್ಟಾಚಾರ ರಹಿತ ಪಾರದರ್ಶಕ ನೇಮಕಾತಿ ವ್ಯವಸ್ಥೆಯನ್ನು ಪ್ರಾರಂಭಿಸಿ.

  2. ನಿಮ್ಮ ಸಂಸ್ಥೆಯಲ್ಲಿ ನೇಮಕಾತಿ ಸುತ್ತೋಲೆ ಹೊರಡಿಸಿದಾ ಅದಕ್ಕೆ ಕೇವಲ 30 ವಷ೵ದಳೊಗಿನವರಿಗೆ ಮಾತ್ರ ಅವಕಾಶ ಕೊಡುವುದು ನನ್ನ ಪ್ರಕಾರ ಸಮಂಜಸವಲ್ಲ ಏಕೆಂದರೆ ನಿಮ್ಮ ಸಂಸ್ಥೆಯ ಕಾಯ೵ಗಳು ಸಮಾಜಕ್ಕೆ, ಸಮಾಜ ಸೇವೆ, ನಿಜವಾಗಲೂ ತುಂಬಾ ಒಳ್ಳೆಯದಾಗಿದ್ದು, ಆ ಒಂದು ಕಾಯ೵ದಲ್ಲಿ 30 ವಷ೵ ದಾಟಿದವರಿಗೋ ಸಹ ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೂ ಈ ನಿಮ್ಮ ನಿಯಮದಿಂದ ಅವರ ಆಸೆ ನೀರಾಸೆಯಾಗುತ್ತಿದೆ. ಅದಕ್ಕೆ ನನ್ನದೊಂದು ವಿನಂತಿ ಇನ್ನೂ ಮುಂದೆ ನಿಮ್ಮ ಸಂಸ್ಥೆಯಲ್ಲಿ ನೇಮಕಾತಿ ಹೊರಡಿಸಿದರೆ ದಯವಿಟ್ಟು ವಯಸ್ಸಿನ ಮಿತಿಯನ್ನು 40 ವಷ೵ವಾದರೂ ಮಾಡಿ ತಮ್ಮ ಸಮಾಜ ಸೇವಾ ಕಾಯ೵ದಲ್ಲಿ ಅವರಿಗೂ ಒಂದು ಅವಕಾಶ ಮಾಡಿ ಕೊಡುತ್ತಿರೆಂಧು ನಂಬಿರುತ್ತೇನೆ.
    ಧನ್ಯವಾದಗಳೊಂದಿಗೆ

Leave a Reply

Your email address will not be published. Required fields are marked *