News

ಲಾಕ್ ಡೌನ್ ಸಂದರ್ಭದಲ್ಲಿಯೋಜನೆಯ ವತಿಯಿಂದ ಆಹಾರದ ವ್ಯವಸ್ಥೆ

    ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಖಾವಂದರ ಆಶಯದಂತೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮಾರ್ಗದರ್ಶನದಂತೆ, ಯೋಜನೆಯ ಉಡುಪಿ ಜಿಲ್ಲಾ /ತಾಲೂಕು ಘಟಕದ ವತಿಯಿಂದ ಉಡುಪಿ ನಗರದ ಸಿಟಿ ಬಸ್ ನಿಲ್ದಾಣ, ಬ್ರಹ್ಮಗಿರಿ, ಕಿನ್ನಿಮೂಲ್ಕಿ, ಚಿತ್ತರಂಜನ್  ಸರ್ಕಲ್ ,ಕರಾವಳಿ ಬೈಪಾಸ್,ಕಲ್ಯಾಣಪುರ ಹಾಗೂ  ಕೆಮ್ಮಣ್ಣು ವ್ಯಾಪ್ತಿಯಲ್ಲಿ ನಗರ ಪ್ರದೇಶದಿಂದ  ಬಂದಿರುವ ವಲಸೆ ಕಾರ್ಮಿಕರು ನಿರಾಶ್ರಿತರು ಮತ್ತು ಲಾರಿಚಾಲಕರಿಗೆ ಸುಮಾರು 300 ಮಂದಿಗೆ ರಾತ್ರಿಯ ಆಹಾರದ ವ್ಯವಸ್ಥೆಯನ್ನು ಯೋಜನೆಯ ವತಿಯಿಂದ ದಿನಾಂಕ 15-4-2020 ರಿಂದ ದಿನಾಂಕ 27.04.2020 ರವರೆಗೆ NIST ತರಬೇತಿ ಸಂಸ್ಥೆಯ ಕ್ಯಾಂಟಿನ್ನಲ್ಲಿ ತಯಾರಿಸಿ ನೀಡಲಾಯಿತು.

          ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.),.ಯೋಜನೆಯ ಬ್ರಹ್ಮಾವರ ತಾಲ್ಲೂಕಿನ ಯೋಜನಾಧಿಕಾರಿ ಶ್ರೀದಿನೇಶ್ ಮತ್ತು ಉಡುಪಿ ತಾಲೂಕಿನ  ನಗದು ಸಹಾಯಕರಾದ ಶ್ರೀ ಲಕ್ಷ್ಮಣ್  ಮತ್ತು ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯ ಕ್ಯಾಂಟೀನ್ನ  ಶ್ರೀ ನವೀನ್ ಕೋಟ್ಯಾನ್  ಮತ್ತು ಸಿಬ್ಬಂದಿಗಳು  ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರದ  ವಿತರಣೆಯನ್ನು  ವ್ಯವಸ್ಥಿತವಾಗಿ ವಿತರಿಸಿದರು. ಇದು ತುಂಬಾ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *