AgricultureNews

ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಶ್ರಮದಾನ

ಬೆಳ್ತಂಗಡಿ: ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಘಟಕ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಶ್ರಮದಾನದ ಮೂಲಕ ಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ ನೆರವೇರಿಸಿದರು. ಗಿಡನಾಟಿ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಗಿಡನೆಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀ ಜಯಕರ ಶೆಟ್ಟಿ ಯವರು ನೆರವೇರಿಸಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಶ್ರೀ ಅಶೋಕ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಧರ ಗಿಡನಾಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಾಟಿ ಮಾಡಿರುವ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ಪಡೆದುಕೊಂಡು ಗಿಡಗಳ ಉಳಿವಿಗೆ, ಪ್ರಕೃತಿಯ ಸೌಂದರ್ಯ ವೃದ್ಧಿಗೆ, ವಿಪತ್ತುಗಳು ದೂರವಾಗುವ ನಿಟ್ಟಿನಲ್ಲಿ ಎಲ್ಲರೂ ಗಿಡನಾಟಿಯಂತಹ ಕಾರ್ಯಕ್ಕೆ ಮುಂದಾಗಬೇಕು. ಇಂತಹ ಮಹತ್ ಕಾಯಕ್ಕೆ ವಿಪತ್ತು ನಿರ್ವಹಣೆ ಘಟಕ ಮುಂದಾಗಿರುವುದು ಉತ್ತಮ ನಡೆಯಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಶ್ರೀ ಅಶೋಕ್ ಅವರು ಹೇಳಿದರು.

ವಲಯ ಮೇಲ್ವಿಚಾರಕರಾದ ಶ್ರೀ ಸಚಿನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಅಶ್ವಿನಿ, ಸಂಯೋಜಕರಾದ ಶ್ರೀಮತಿ ಗಿರಿಜಾ, ರೆಖ್ಯಾ ಸೇವಾಪ್ರತಿನಿಧಿ ಶ್ರೀಮತಿ ಸಂಧ್ಯಾ ಪ್ರಜ್ವಲ್, ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ಪ್ರಕಾಶ್ ರೆಖ್ಯಾ, ಜಗದೀಶ್, ನಾರಾಯಣ, ಗುರುಪ್ರಸಾದ್, ಶೀನಪ್ಪ, ಪ್ರಕಾಶ್ ಶ್ರಮದಾನ ನಡೆಸಿದರು.

Leave a Reply

Your email address will not be published. Required fields are marked *