ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ತರಬೇತಿ

Posted on Posted in Agriculture, News, Training

ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ತರಬೇತಿಯ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾನವಿ ತಾಲೂಕಿನ ಆಯ್ದ ಪ್ರಗತಿಬಂಧು ಸಂಘಗಳ ರೈತರಿಗೆ, JLG ಸದಸ್ಯರಿಗೆ ದೇಶೀ ಧಾನ್ಯಗಳಾದ ತೊಗರಿಬೀಜ, ಶೇಂಗ ಹಾಗೂ ಸಾವಯವ ಗೊಬ್ಬರವನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞೆ ಶ್ವೇತಾ, ಇಲಾಖೆಯ ಅಧಿಕಾರಿ ಗೀತಾಂಜಲಿ, ಮಾನವಿ ತಾಲೂಕಿನ ಯೋಜನಾಧಿಕಾರಿ ಕೆ. ವಿನಾಯಕ ಪೈ ಉಪಸ್ಥಿತರಿದ್ದರು.

ಹೈನುಗಾರಿಕೆ: ಸ್ಮಶಾನವೂ ಸೈ, ನಗರಕ್ಕೂ ಜೈ

Posted on Posted in Agriculture, success story, Women Empowerment

ಧಾರವಾಡದ ಮಹಾಂತನಗರದ ಶಿವಕ್ಕ ಕಟ್ಟೂರಮಠ ಸ್ಮಶಾನದ ಆವರಣದಲ್ಲೇ ಹೈನುಗಾರಿಕೆ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಬೈಲಹೊಂಗಲದ ವಿದ್ಯಾನಗರದ ನಿವಾಸಿ ಸರಳ ಬೂದಿಹಾಳ ನಗರವಾದರೆ ಏನಂತೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಹೈನೋದ್ಯಮ ಆರಂಭಿಸಿ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

ರಾಂಪುರದಲ್ಲಿ ವಿಶ್ವ ತಂಬಾಕು ದಿನಾಚರಣೆ

Posted on Posted in News

ವಿಶ್ವ ಆರೋಗ್ಯ ಇಲಾಖೆಯ ಪ್ರಕಾರ ತಂಬಾಕಿನ ಚಟಕ್ಕೆ ಪ್ರತಿ ವರ್ಷ 6 ಮಿಲಿಯನ್ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಧೂಮಾಪಾನಕ್ಕೆ ಒಗ್ಗಿಕೊಂಡ ಶೇ. 90 ರಷ್ಟು ಜನ ಒಂದಿಲ್ಲೊಂದು ಖಾಯಿಲೆಗೆ ತುತ್ತಾಗುತ್ತಾರೆ. ಇದನ್ನೆಲ್ಲಾ ಮೆಲುಕು ಹಾಕುವ ಸಮಯ ಬಂದಿದ್ದು ನಂಜನಗೂಡಿನ ಹುಲ್ಲಹಳ್ಳಿ ವಲಯದ ರಾಂಪುರ ಕಾರ್ಯಕ್ಷೇತ್ರದಲ್ಲಿ ನಡೆದ ವಿಶ್ವ ತಂಬಾಕು ದಿನಾಚರಣೆಯಲ್ಲಿ.

‘ರೈತ ಕೃಷಿಯಿಂದ ವಿಮುಖನಾಗಬಾರದು’

Posted on Posted in Agriculture, News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೊರಬ ಯೋಜನಾ ಕಛೇರಿ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಆನವಟ್ಟಿ ವಲಯದ ನೆಲ್ಲಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ವನಮಹೋತ್ಸವ ಮತ್ತು ಪರಿಸರ ದಿನಾಚರಣೆ

Posted on Posted in News

ದೊಡ್ಡಬಳ್ಳಾಪುರ ವಲಯದ ಶಿವಪುರ ಅಮಾನಿಕೆರೆಯಲ್ಲಿ ‘ವನಮಹೋತ್ಸವ ಮತ್ತು ಪರಿಸರ ದಿನಾಚರಣೆ 2017- 18’ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಚರಿಸಲಾಯಿತು. ಯಳಂದೂರು ಹಾಗೂ ನಾಗಮಂಗಲ ತಾಲೂಕುಗಳಲ್ಲೂ ವಿಶ್ವ ಪರಿಸರ ದಿನಾಚರಣೆ ನಡೆಯಿತು

ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜದುಂಡೆ ತಯಾರಿ ಕಾರ್ಯಕ್ರಮ

Posted on Posted in News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಗುಬ್ಬಿ ತಾಲ್ಲೂಕಿನ ಕಲ್ಲೂರು ಕಾರ್ಯಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜದುಂಡೆ ತಯಾರಿ ಕಾರ್ಯಕ್ರಮ ನಡೆಯಿತು. ಸಸಿಗಳನ್ನು ನೆಡುವುದರ ಜೊತೆಗೆ ಸುಮಾರು 1,000 ಬೀಜದುಂಡೆಗಳನ್ನು ತಯಾರಿಸಲಾಯಿತು. ಕೃಷ್ಣರಾಜಪೇಟೆಯ ಸರಕಾರಿ ಮಹಿಳಾ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲೂ ಜೂನ್ 5 ರಂದು ವನಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಪ್ಲಾಸ್ಟಿಕ್ ಮಹಾಮಾರಿಯ ಕುರಿತು ಜಾಗೃತಿ

Posted on Posted in Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸದ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಮತ್ತು ಕಸ ವಿಲೇವಾರಿಯ ಕುರಿತು ನಡೆದ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಹೆಕ್ಕುತ್ತಿರುವ ಮಹಿಳೆಯರು. ಯೋಜನೆ ಈ ವರ್ಷ ತಾಲೂಕಿನಲ್ಲಿ ಇಂತಹ 15 ಕಾರ್ಯಕ್ರಮಗಳನ್ನು ನಡೆಸಿದೆ.

ಆಂದೋಲನ ಸ್ವರೂಪ ಪಡೆದ ಬೀಜದುಂಡೆ ತಯಾರಿ

Posted on Posted in News

ಜ್ಞಾನವಿಕಾಸ ಕಾರ್ಯಕ್ರಮದ ಆಧ್ಯಕ್ಷೆ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಎಪ್ರಿಲ್ ತಿಂಗಳಲ್ಲಿ ನಡೆದ ಧಾರವಾಡ ಜಿಲ್ಲಾ ಮೇಲ್ವಿಚಾರಕ ಮಟ್ಟದ ಸಭೆಯಲ್ಲಿ ಭಾಗವಹಿಸಿ, ಪರಿಸರ ಉಳಿಸಲು ಬೀಜದುಂಡೆ ಸಿದ್ಧಾಂತ ಪಾಲಿಸುವಂತೆ ತಿಳಿಸಿದ್ದರು. ಧಾರವಾಡ ಜಿಲ್ಲೆಯಲ್ಲಿ ಆರಂಭಗೊಂಡ ಬೀಜದುಂಡೆ ತಯಾರಿ ಕಾರ್ಯಕ್ರಮ ದಿನ ಕಳೆದಂತೆ ಇತರ ಜಿಲ್ಲೆಗಳಿಗೂ
ಪಸರಿಸಿ ಆಂದೋಲನ ಸ್ವರೂಪ ಪಡೆಯಿತು…

ವಾಹನ ಅಪಘಾತದಲ್ಲಿ ಕಾಲು ಮುರಿದ ಶೀನರಿಗೆ ಸಂಪೂರ್ಣ ಸುರಕ್ಷಾ ವತಿಯಿಂದ ಚೆಕ್‍

Posted on Posted in News

ವಾಹನ ಅಪಘಾತದಲ್ಲಿ ಕಾಲು ಮುರಿದುಕೊಂಡು ಒಂದು ವರ್ಷ ನಡೆಯಲಾಗದ ಸ್ಥಿತಿಯಲ್ಲಿರುವ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ನೆಲ್ಲಿಕಾರು ಕಾರ್ಯಕ್ಷೇತ್ರದ ಶೀನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವತಿಯಿಂದ ಚೆಕ್‍.