MJVTI Training Calendar
Posted onMJVTI Training
MJVTI Training
ದಿನಾಂಕ 06.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಸಿದ್ದ ಉಡುಪು ತಯಾರಿಕೆ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ದಿಮೆ ಕೌಶಲ್ಯಭಿವೃದ್ದಿ ತರಬೇತಿಗಳನ್ನು ಆಯೋಜಿಸಲಾಗಿದ್ದು ಧಾರವಾಡ ಜಿಲ್ಲಾ ಪಂಚಾಯತ ಕೌಶಲ್ಯಭಿವೃದ್ದಿ ಕೇಂದ್ರದ ಅಧಿಕಾರಿಗಳಾದ ಶ್ರೀ ಭೀಮಪ್ಪರವರು ಉದ್ಘಾಟಿಸಿ ಕೌಶಲ್ಯಭಿವೃದ್ದಿ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಹೊನ್ನಾಳಿ ತಾಲ್ಲೂಕಿನ ಹುಣಸಗಟ್ಟಿ ಗ್ರಾಮದ ನಿವಾಸಿ ಶ್ರೀಮತಿ ನಿರ್ಮಲಾರವರು ಗುಲಾಬಿ ಕೃಷಿಯ ಗಂಧವೇ ಇರದ ಈ ಊರಿನಲ್ಲಿ ತಮಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡವರಿಗೆ ಸಾಧ್ಯ ಎಂದು ತೋರಿಸಿಕೊಟ್ಟರು.
ಶ್ರೀ ಧಮ೯ಸ್ಥಳ ಸಿರಿ ಸಂಸ್ಥೆಯ ಗ್ರಾಮೀಣ ಜನರ ಉತ್ಪಾದನಾ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಅಪೇಕ್ಷಿತರಿಗೆ 3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ ಹಮ್ಮಿಕೊಳ್ಳಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನೂತನವಾಗಿ ನಿರ್ಮಿಸಲ್ಪಟ್ಟ ಕಟ್ಟಡವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿ.21.12.2017ರಂದು ಮುಂಜಾನೆ 10.30ಕ್ಕೆ ಲೋಕಾರ್ಪಣೆಗೊಳಿಸಿದರು.
ಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ಅವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.
‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.
ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.
ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.