Category Archives: Agriculture

ಸ್ವಂತ ಉದ್ಯೋಗದ ಖುಷಿ ಬಲ್ಲವನೇ ಬಲ್ಲ

ಹುಮ್ಮಸ್ಸು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನಗಳನ್ನು ಬಳಸಿಕೊಳ್ಳುವ ಬುದ್ದಿವಂತಿಕೆ ಕಷ್ಟಕಾಲದಲ್ಲಿ ನೆರವಾಗಬಹುದು. ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಮಾದೇವಿ ಇದಕ್ಕೆ ಉತ್ತಮ ಉದಾಹರಣೆ. ಇವರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಮೂರು ಹೆಣ್ಣು ಮಕ್ಕಳ ಸಂಸಾರದ ಒಡತಿಯಾಗಿರುವ ಮಾದೇವಿಗೆ ಏನೇ ಕಷ್ಟ ಬಂದರೂ ಹಿಂದಿರುಗಿ ನೋಡದೆ ಸಾಧಿಸುವ ಛಲವಿತ್ತು. ಮಾದೇವಿಯವರ ಛಲಕ್ಕೆ ಸ್ಫೂರ್ತಿಯಾಗಿದ್ದು ಮಂಜುಶ್ರೀ ಸ್ವ-ಸಹಾಯ ಸಂಘ ಮತ್ತು ಜ್ಞಾನಜ್ಯೋತಿ ಕೇಂದ್ರ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಬಂದ ಇವರ ಬಳಿ ಹಳೆ ಮನೆಯೊಂದನ್ನು ಬಿಟ್ಟು ಬೇರೇನೂ ಇರಲಿಲ್ಲ. ಇವರ… Read More »

ಪ್ರಗತಿಪರ ಕೃಷಿಕನ ಹಿಂದಿನ ಕಥೆ

ಇದು ಎಂಟು ವರ್ಷದ ಅವಧಿಯಲ್ಲಿ ಕೃಷಿ ಕಾರ್ಮಿಕನೊಬ್ಬ ಪ್ರಗತಿಪರ ಕೃಷಿಕನಾದ ಕಥೆ. ಸೋಮವಾರಪೇಟೆಯ ದಾಸನಕೆರೆ ನಿವಾಸಿ ಕೆ ಸೋಮಾಜಿಯವರಿಗೆ 3.5 ಎಕರೆ ಕೃಷಿ ಭೂಮಿಯಿದ್ದರೂ ಅದು ಮಳೆಯಾಶ್ರಿತವಾದುದರಿಂದ ಅವರು ಕೂಲಿಯನ್ನೇ ಅವಲಂಭಿಸಿದ್ದರು. ಆದರೆ ನಂತರ ಅವರು ಸ್ವಾವಲಂಭಿ ಜೀವನದತ್ತ ಹೆಜ್ಜೆ ಹಾಕಿದ ರೀತಿ, ಅವಕಾಶಗಳನ್ನು ಬಳಸಿಕೊಂಡ ಬಗೆ ಅಚ್ಚರಿ ಹುಟ್ಟಿಸುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ತಂಡದ ಮಾಹಿತಿಯನ್ನು ಸಂಬಂಧಿಕರಿಂದ ತಿಳಿದುಕೊಂಡ ಸೋಮಾಜಿ, ಮೊದಲ ಹೆಜ್ಜೆಯಾಗಿ ಆಸಕ್ತ ಐವರು ರೈತರೊಂದಿದೆ ಸೇರಿ ‘ಸಮೃದ್ಧಿ’ ಪ್ರಗತಿಬಂಧು ತಂಡ ರಚಿಸಿಕೊಂಡರು. ಸೋಮಾಜಿ… Read More »

ಬಾಟಲಿ ಬಿಟ್ಟು ಬದುಕಿನತ್ತ ಚಿತ್ತ…

ಕಾಲಕ್ಕೆ ತಕ್ಕಂತೆ ಬದುಕಬೇಕು ಎಂಬ ಮಾತು ರೈತರಿಗೂ ಅನ್ವಯಿಸುತ್ತದೆ. ಈ ಮಾತನ್ನು ಪಾಲಿಸಿ ಯಶಸ್ಸು ಕಂಡವರಲ್ಲಿ ಈಶ್ವರ್ ಕೂಡ ಒಬ್ಬರು. ಅಂದಹಾಗೆ ಈ ಈಶ್ವರ್ ಯಾರು ಎಂಬ ಕುತೂಹಲ ನಿಮಗೆ ಖಂಡಿತ ಇರಬೇಕಲ್ವೆ? ಮೈಸೂರು ಜಿಲ್ಲೆಯ ನಾರಾಯಣಪುರದ ಈಶ್ವರ್ ಒಂದು ವರ್ಷದ ಹಿಂದೆ ಮಹಾ ಮದ್ಯವ್ಯಸನಿ. ಕೃಷಿಯಿಂದ ಬಂದ ಹಣವೆಲ್ಲಾ ಇರೋದು ಹೆಂಡತಿ ಮಕ್ಕಳಿಗಲ್ಲ ಬದಲಿಗೆ ಹೆಂಡದ ಅಂಗಡಿಗೆ ಎಂದು ಬಲವಾಗಿ ನಂಬಿಕೊಂಡಿದ್ದಾತ. ಕುಡಿದು ಹೊಂಡ ಸೇರುತ್ತಿದ್ದ ಇವರನ್ನು ಉದ್ಧಾರ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ… Read More »

ಬಂಗಾರವಾದ ಬರಡು ಭೂಮಿ

ಅನ್ನದಾತನ ಸ್ಥಿತಿ ಶ್ರೀಮಂತನಾದರೂ ಬಡವ ಎಂಬಂತೆ. ಎಕರೆಗಟ್ಟಲೆ ಭೂಮಿಯಿದ್ದರೂ ಕೈಯಲ್ಲಿ ಕಾಸಿಲ್ಲ. ಕೃಷಿ ಭೂಮಿ ಅಭಿವೃದ್ಧಿಪಡಿಸಿ ಆದಾಯ ಪಡೆಯೋಣ ಎಂದರೆ ಬಂಡವಾಳವಿಲ್ಲ. ಬ್ಯಾಂಕ್ಗಳೂ ಇಂತಹ ರೈತರ ಸಹಾಯಕ್ಕೆ ಬರದಿದ್ದಾಗ ಆತ ಕಂಗಾಲಾಗಬಹುದು. ಇದೇ ಸ್ಥಿತಿಯಲ್ಲಿದ್ದ ರೈತನೊಬ್ಬನ ಸಾಧನಾಗಾಥೆ ಇಲ್ಲಿದೆ. ಹೇಳಿ ಕೇಳಿ ಕುಣಿಗಲ್ ತಾಲೂಕಿನ ಅಮೃತೂರಿನಿಂದ 10 ಕಿ.ಮೀ ದೂರದಲ್ಲಿರುವ ಕಟ್ಟಿಗೆಹಳ್ಳಿ ಗ್ರಾಮ ಬಡತನಕ್ಕೆ ಹೆಸರುವಾಸಿ. ಈ ಊರಿನಲ್ಲಿರುವ ಅನೇಕ ಬಡ ಕುಟುಂಬಗಳಲ್ಲಿ ದೇವರಾಜುರವರ ಕಡು ಬಡತನದಲ್ಲಿದ್ದ ಕುಟುಂಬವೂ ಒಂದಾಗಿತ್ತು. ಇದ್ದ ಐದು ಎಕರೆ ಬರಡು ಭೂಮಿಯಲ್ಲಿ… Read More »

ಮಹಿಳಾ ಸಾಧಕಿಯರಿಗೊಂದು ನಮನ…

ಸ್ವಾವಲಂಬನೆಯ ಕನಸು ನಿಜವಾದಾಗ… ಮನಸ್ಸಿದ್ದರೆ ಮಾರ್ಗ ಎಂಬುದು ಬರೀ ಗಾದೆ ಮಾತಾಗಿ ಉಳಿದಿಲ್ಲ. ನಿದರ್ಶನಗಳು ಸಾಕಷ್ಟಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಬಸವ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಮಲ್ಲಮ್ಮ C/o ಮಹಾಲಿಂಗಪ್ಪ ಅವರಿಗೆ ತಾವೂ ಏಕೆ ಸ್ವಾವಲಂಭಿ ಜೀವನ ಸಾಗಿಸಬಾರದು ಎಂದು ಮನಸ್ಸಾಗಿದ್ದೇ ತಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯತ್ತ ಮುಖ ಮಾಡಿದರು. ಯೋಜನೆಯಿಂದ ರೂ. 70,000 ಪ್ರಗತಿನಿಧಿ ಪಡೆದು, ರೂ. 85,000 ಬಂಡವಾಳ ಹಾಕಿ ಶ್ಯಾವಗೆ ತಯಾರಿಸುವ ಯಂತ್ರ ಖರೀದಿಸಿದರು.… Read More »

Agri fest attracts lakh in Bailahongala

Shri Kshethra Dharmasthala Rural Development Project organised 37th state-level Kisan Mela at Bailahongala taluk of Belgaum district from January 25 to 27. This was a part of annual Krishi Melas which are being organised in various part of the state. Approximately 3 lakh farmers and women visited the mela to pick up the modern technologies… Read More »

ನರ್ಸರಿಯೊಂದಿಗೆ ಕೃಷಿ ಯಶಸ್ಸು ಕಂಡಿರುವ ಸಾವಯವ ಕೃಷಿಕ

ಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20… Read More »

(SSI) ಸುಸ್ಥಿರ ಕಬ್ಬಿನ ಬೇಸಾಯದಿಂದ ಯಶಸ್ಸು ಸಾಧಿಸಿದ ಚಿಕ್ಕೋಡಿಯ ಬಾಳಪ್ಪ

ಬೆಳಗಾವಿ : ವಿಶ್ವದಲ್ಲಿ ಭಾರತವು ಸಕ್ಕರೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ದೇಶದ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖ ಸ್ಥಾನವಹಿಸಿದೆ. ಸಾಕಷ್ಟು ಆಥರ್ಿಕ ಲಾಭವನ್ನು ಹಾಗೂ ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಹೌದು, ಕನರ್ಾಟಕ ಮಹಾರಾಷ್ಟ್ರ ತಮಿಳುನಾಡು ಉತ್ತರಪ್ರದೇಶ ಆಂದ್ರಪ್ರದೇಶ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ ಕನರ್ಾಟಕದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದು.ಅದರಲ್ಲಿ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಕಬ್ಬಿನ ಉತ್ಪಾದನೆಯನ್ನು ಮಾಡುತ್ತಿರುವುದು. ಕಬ್ಬಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಇದನ್ನು ಕೇವಲ ಸಕ್ಕರೆ ಮತ್ತು ಬೆಲ್ಲ ತಯಾರಿಕೆಯಲ್ಲದೆ… Read More »

ಅಡಿಕೆ, ಕಾಳುಮೆಣಸು,ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋಡರ್ೋ ದ್ರಾವಣ

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು,ಕಾಳುಮೆಣಸು, ಕೋಕೋಗಳಿಗೆ ಮಳೆಗಾಲದ ಸಮಯದಲ್ಲಿ ಕಪಳೆರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಬಾಧೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮುಶ್ರವಾಗಿ ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ನಷ್ಟ ತರುವ ಕೊಳೆ ರೋಗವನ್ನು ಹರಡುವ… Read More »