ಸಂಸಾರಕ್ಕೆ ಆಧಾರವಾದ ಬಟ್ಟೆ ವ್ಯಾಪಾರ

ಕಾರಣಾಂತರಗಳಿಂದ ತವರು ಮನೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಮದರಖಂಡಿ ಗ್ರಾಮದ ಶ್ರೀಮತಿ ಯಶೋಧಾ ವೆಂಕಪ್ಪ ಮಾಳೆದ ಸ್ವಾಭಿಮಾನಿ. ಯಾರ ಹಂಗೂ ಬೇಡ ಎಂದು ಹೊಲಿಗೆ ಮಾಡಿಕೊಂಡಿದ್ದ ಅವರಿಗೆ ಎಂಟು ಮಂದಿಯ ಕುಟುಂಬಕ್ಕೆ ಈ ಆದಾಯ ಸಾಲದೇನೋ ಅನಿಸಿತು. ಆಗ ಹೊಳೆದದ್ದೇ ಸ್ವ-ಸಹಾಯ ಸಂಘದ ಯೋಚನೆ. ಯಶೋಧಾರ 3 ವರ್ಷಗಳ ಹಿಂದೆ 10 ಮಂದಿ ಸದಸ್ಯರನ್ನು ಸೇರಿಸಿಕೊಂಡು ಶಾಂಭವಿ ಸ್ವ-ಸಹಾಯ ಸಂಘ ರಚಿಸಿ, ಗ್ರಾಮಾಭಿವೃದ್ಧಿ ಯೋಜನೆಯ ನಿಯಮದಂತೆ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಘದ ಸಂಯೋಜಕರಾಗಿ ಆಯ್ಕೆಯಾಗಿರುವ ಅವರು, ಸಂಘದ ದಾಖಲಾತಿ… Read More »

ಬಾಟಲಿ ಬಿಟ್ಟು ಬದುಕಿನತ್ತ ಚಿತ್ತ…

ಕಾಲಕ್ಕೆ ತಕ್ಕಂತೆ ಬದುಕಬೇಕು ಎಂಬ ಮಾತು ರೈತರಿಗೂ ಅನ್ವಯಿಸುತ್ತದೆ. ಈ ಮಾತನ್ನು ಪಾಲಿಸಿ ಯಶಸ್ಸು ಕಂಡವರಲ್ಲಿ ಈಶ್ವರ್ ಕೂಡ ಒಬ್ಬರು. ಅಂದಹಾಗೆ ಈ ಈಶ್ವರ್ ಯಾರು ಎಂಬ ಕುತೂಹಲ ನಿಮಗೆ ಖಂಡಿತ ಇರಬೇಕಲ್ವೆ? ಮೈಸೂರು ಜಿಲ್ಲೆಯ ನಾರಾಯಣಪುರದ ಈಶ್ವರ್ ಒಂದು ವರ್ಷದ ಹಿಂದೆ ಮಹಾ ಮದ್ಯವ್ಯಸನಿ. ಕೃಷಿಯಿಂದ ಬಂದ ಹಣವೆಲ್ಲಾ ಇರೋದು ಹೆಂಡತಿ ಮಕ್ಕಳಿಗಲ್ಲ ಬದಲಿಗೆ ಹೆಂಡದ ಅಂಗಡಿಗೆ ಎಂದು ಬಲವಾಗಿ ನಂಬಿಕೊಂಡಿದ್ದಾತ. ಕುಡಿದು ಹೊಂಡ ಸೇರುತ್ತಿದ್ದ ಇವರನ್ನು ಉದ್ಧಾರ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ… Read More »

Harvesting rainwater into the borewells

By Chandrahas Charmadi Do you hear people blaming that they don’t get water though they drill borewell up to 1,500 feet in summer? Around 50 percent of people who try for a borewell face this problem in recent days. Especially in North Karnataka, each family has one borewell. Many tried three to four borewell but… Read More »

ರೊಕ್ಕ ತಂದುಕೊಟ್ಟ ರೊಟ್ಟಿ ವ್ಯಾಪಾರ

ರಾಯಚೂರು ಜಿಲ್ಲೆಯ ಪಗಡದಿನ್ನಿ ತಾಲೂಕಿನ ಗುಡದೂರು ಗ್ರಾಮದ ಮಲ್ಕಜಮ್ಮನವರ ಸ್ವ-ಉದ್ಯೋಗದ ಕನಸು ಕನಸಾಗಿಯೇ ಉಳಿದಿತ್ತು. ಕೂಲಿ ಕೆಲಸದಿಂದ ಬರುತ್ತಿದ್ದ ಹಣದಿಂದ ಸಂಸಾರ ಸಾಗಿಸುವುದು ಕಷ್ಟವಾಗಿತ್ತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ರೊಟ್ಟಿ ವ್ಯಾಪಾರ ಅವರ ಕೈ ಹಿಡಿದಿದೆ. ಕೂಲಿ ಕೆಲಸಕ್ಕೆ ವಿರಾಮ ಹೇಳಿ ಸಂಘ ಸೇರಿದ ಮಲ್ಕಜಮ್ಮ ಅವರಿಗೆ ಪರ್ಯಾಯ ಆದಾಯ ಮೂಲ ಅನಿವಾರ್ಯವಾಗಿತ್ತು. ಆಗ ಅವರಿಗೆ ಹೊಳೆದಿದ್ದೇ ರೊಟ್ಟಿ ವ್ಯಾಪಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 50,000 ಪ್ರಗತಿನಿಧಿ ಪಡೆದು ರೊಟ್ಟಿ ವ್ಯಾಪಾರ ಆರಂಭಿಸಿದ… Read More »

ತಿಂಡಿ ಮಾರಾಟ ತಂದ ಯಶಸ್ಸು

ಕಷ್ಟದಿಂದ ಪಾರಾಗಲು ಕೈಸಾಲ ಮಾಡಿ ಕೈಸುಟ್ಟುಕೊಂಡವರೆಷ್ಟೊ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜ್ಯೋತಿ ಕೂಡ ಕೈಸಾಲದ ಸುಳಿಯಲ್ಲಿ ಸಿಲುಕಿದ್ದರು. ಪತಿ ಪಂಚಾಕ್ಷರಿಯವರು ಖಾಸಗಿ ಬಸ್ ನಿರ್ವಾಹಕರಾಗಿದ್ದರೂ ಜೀವನದ ಬಂಡಿ ಸಾಗುವುದೇ ಕಷ್ಟವಾಗಿತ್ತು. ಇಂತಹ ಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವ- ಉದ್ಯೋಗದ ಆಲೋಚನೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ವಲಯದ (ಕಾರ್ಯಕ್ಷೇತ್ರ) ಜ್ಞಾನವಿಕಾಸ ಕೇಂದ್ರದ ಕೈವಲ್ಯರಾಮೇಶ್ವರ ತಂಡದ ಸದಸ್ಯೆಯಾದ ಜ್ಯೋತಿ, ಮೊದಲು ಮಾಡಿದ ಕೆಲಸವೆಂದರೆ ಯೋಜನೆಯಿಂದ ರೂ. 5000 ಸಾಲ… Read More »

ಮನಸ್ಸಿದ್ದರೆ ಮಾರ್ಗ ಎಂದರೆ ಇದೇನಾ. . .

ಉಡುಪಿ ತಾಲೂಕಿನ ಬಬಿತಾ ಸುರೇಶ್ ಅವರ ಸ್ಥಿತಿ ಬಹುಪಾಲು ಬಡ ಮಧ್ಯಮ ವರ್ಗದ ಹೆಂಗಸರ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಬಾರ್  ಒಂದರಲ್ಲಿ ದುಡಿಯುತ್ತಿರುವ ಗಂಡ. ತನಗೋ ಟೈಲರಿಂಗ್ ನಲ್ಲಿ ಬರುವ ಆದಾಯವಷ್ಟೇ ಗತಿ. ಬೆಳೆಯುತ್ತಿರುವ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗೆ ಎಂಬ ಚಿಂತೆ ಅವರನ್ನೂ ಕಾಡದೇ ಬಿಡಲಿಲ್ಲ. ಆದರೆ ಕಷ್ಟಪಡುವವರ ಸಹಾಯಕ್ಕೆ ದೇವರು ಬರುತ್ತಾನೆ ಎಂಬ ಮಾತು ಅವರ ವಿಷಯದಲ್ಲೂ ನಿಜವಾಯಿತು. ಬಬಿತಾ ಜೀವನದಲ್ಲಿ ಪವಾಡವೇನೂ ನಡೆಯಲಿಲ್ಲ. ಆಕೆ ಮೊದಲು ಮಾಡಿದ ಕೆಲಸವೇನೆಂದರೆ ಉಡುಪಿ ವಲಯದ ಉದ್ಯಾವರ ಕಾರ್ಯಕ್ಷೇತ್ರದ… Read More »

ಕೌಟುಂಬಿಕ/ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳ ಮಹತ್ವ

Article by:ಶ್ರೀಮತಿ ಮಮತಾ ಹರೀಶ್ ರಾವ್, ನಿರ್ದೆಶಕಿ, ಮಾನವ ಸಂಪನ್ಮೂಲ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಧರ್ಮಸ್ಥಳ ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ ಬರುವ ಹಬ್ಬ ಹರಿದಿನಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪರಿ, ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬಿ ಮರೆಯಾಗುತ್ತವೆ. ಯುಗಾದಿ:… Read More »

ಬಂಗಾರವಾದ ಬರಡು ಭೂಮಿ

ಅನ್ನದಾತನ ಸ್ಥಿತಿ ಶ್ರೀಮಂತನಾದರೂ ಬಡವ ಎಂಬಂತೆ. ಎಕರೆಗಟ್ಟಲೆ ಭೂಮಿಯಿದ್ದರೂ ಕೈಯಲ್ಲಿ ಕಾಸಿಲ್ಲ. ಕೃಷಿ ಭೂಮಿ ಅಭಿವೃದ್ಧಿಪಡಿಸಿ ಆದಾಯ ಪಡೆಯೋಣ ಎಂದರೆ ಬಂಡವಾಳವಿಲ್ಲ. ಬ್ಯಾಂಕ್ಗಳೂ ಇಂತಹ ರೈತರ ಸಹಾಯಕ್ಕೆ ಬರದಿದ್ದಾಗ ಆತ ಕಂಗಾಲಾಗಬಹುದು. ಇದೇ ಸ್ಥಿತಿಯಲ್ಲಿದ್ದ ರೈತನೊಬ್ಬನ ಸಾಧನಾಗಾಥೆ ಇಲ್ಲಿದೆ. ಹೇಳಿ ಕೇಳಿ ಕುಣಿಗಲ್ ತಾಲೂಕಿನ ಅಮೃತೂರಿನಿಂದ 10 ಕಿ.ಮೀ ದೂರದಲ್ಲಿರುವ ಕಟ್ಟಿಗೆಹಳ್ಳಿ ಗ್ರಾಮ ಬಡತನಕ್ಕೆ ಹೆಸರುವಾಸಿ. ಈ ಊರಿನಲ್ಲಿರುವ ಅನೇಕ ಬಡ ಕುಟುಂಬಗಳಲ್ಲಿ ದೇವರಾಜುರವರ ಕಡು ಬಡತನದಲ್ಲಿದ್ದ ಕುಟುಂಬವೂ ಒಂದಾಗಿತ್ತು. ಇದ್ದ ಐದು ಎಕರೆ ಬರಡು ಭೂಮಿಯಲ್ಲಿ… Read More »

ಮಹಿಳಾ ಸಾಧಕಿಯರಿಗೊಂದು ನಮನ…

ಸ್ವಾವಲಂಬನೆಯ ಕನಸು ನಿಜವಾದಾಗ… ಮನಸ್ಸಿದ್ದರೆ ಮಾರ್ಗ ಎಂಬುದು ಬರೀ ಗಾದೆ ಮಾತಾಗಿ ಉಳಿದಿಲ್ಲ. ನಿದರ್ಶನಗಳು ಸಾಕಷ್ಟಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಬಸವ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಮಲ್ಲಮ್ಮ C/o ಮಹಾಲಿಂಗಪ್ಪ ಅವರಿಗೆ ತಾವೂ ಏಕೆ ಸ್ವಾವಲಂಭಿ ಜೀವನ ಸಾಗಿಸಬಾರದು ಎಂದು ಮನಸ್ಸಾಗಿದ್ದೇ ತಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯತ್ತ ಮುಖ ಮಾಡಿದರು. ಯೋಜನೆಯಿಂದ ರೂ. 70,000 ಪ್ರಗತಿನಿಧಿ ಪಡೆದು, ರೂ. 85,000 ಬಂಡವಾಳ ಹಾಕಿ ಶ್ಯಾವಗೆ ತಯಾರಿಸುವ ಯಂತ್ರ ಖರೀದಿಸಿದರು.… Read More »

Online payment facility in Shree Kshethra & other news

Online payment facility in Shree Kshethra To help devotees, Paytm facility has been introduced in Shri Kshethra Dharmasthala for online payments. Recently, D Harshendra Kumar inaugurated the new facility, where one can perform transactions online. Supriya Harshendra Kumar, Pooran Verma were present on the occasion. This facility can be utilized for payment for special worship,… Read More »

Padayatris, devotion and Shivaratri celebration

As always, Padayatris (devotees who visit religious centres by walking) are the main attraction of Shivaratri celebrations in Dharmasthala. The night which belongs to Lord Manjunatha was lighted up with their bhajans, dance with devotion. The Padayatris came from various corners of the state, all the way through Charmadi, Shiradi, Agumbe and Kodagu ghats, walking… Read More »

Sisters on a role to save Saxophone art

by Chandrahas Charmadi No doubt, everyone likes the majestic sound of this woodwind instrument. Saxophone…this single-reed mouthpiece has a history of thousands years. Though many new musical items are in the store, Saxophone still stands unique. During the era of kingdoms, the presence of Saxophone artist was must during the cultural events. Even in modern… Read More »