success story

‘ಬಾಲ್ಯದ ಕಲಿಕೆ ಬದಲಾಯಿಸ ಬಲ್ಲದು ತರುತ ಗಳಿಕೆ’

Posted on

“ಬೇರೆಯವರು ಮಕ್ಕಳು ಇಂಜನಿಯರಿಂಗ್ ಓದಿಸುವುದನ್ನು ನೋಡಿ ಆಶ್ಚರ್ಯ ಪಡೆಯುತ್ತಿದ್ದೆ ಆದರೆ ನಾನೇ ಮುಂದೊಂದು ದಿನಾ ನನ್ನ ಮಗಳಿಗೆ ಇಂಜನಿಯರ್ ಓದಿಸಬಹುದು ಎನ್ನುವ ಕಲ್ಪನೆ ನನಗೆ 6 ವರ್ಷದ ಹಿಂದೆ ಇರಲಿಲ್ಲ.” – ಗಾಯಿತ್ರಿ.

Agriculture

ಬಾಳು ಬೆಳಗಿತು ಬಾಳೆ

Posted on

ಬಾಳೆ ಕೃಷಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ. ಇತ್ತೀಚೆಗೆ ಮನೆ ನಿರ್ಮಾಣ ಮಾಡುತ್ತಿದ್ದು ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ನೆರವು ಪಡೆದಿದ್ದಾರೆ.

success story

ಬುಟ್ಟಿ ಹೆಣೆದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿದ ಈರಮ್ಮ

Posted on

ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.

success story

‘ಆತ್ಮವಿಶ್ವಾಸವೇ ಆರ್ಥಿಕ ಮುನ್ನಡೆಗೆ ಸಾಕ್ಷಿ’

Posted on

“ಮೊದಲು ನಾವು ಮನೆಯಲ್ಲಿ ಕುಳಿತು ಮನೆ ಕೆಲಸ ಮುಗಿಸಿ ನೆರೆ ಹೊರೆಯವರೊಟ್ಟಿಗೆ ಕಾಲಾಹರಣ ಮಾಡ್ತಿದ್ವಿ. ಮೊದ್ಲು ಗೊತ್ತಿದ್ದಂಗ ಖಾನವಳಿಗೆ ರೊಟ್ಟಿ ಅಗತ್ತ ಐತಿ ಎಚಿದು ಈ ಉದ್ಯೋಗ ಮಾಡಾಕ ಮನಸ್ಸ ಮಾಡಿದ್ವಿ. ಧರ್ಮಸ್ಥಳ ಸಂಸ್ಥೆಯಿಚಿದ ನಮಗೆ ತುಂಬು ಸಹಕಾರ ಸಿಕ್ಕೈತಿ”
“ನಾವು ತಯಾರ ಮಾಡೋ ರೊಟ್ಟಿ ಹಿಟ್ಟಿನಲ್ಲಿ ಅಕ್ಕಿ ಹಿಟ್ಟು ಸೇರಿಸಲ್ಲ. ಹಿಂಗಾಗಿ ಎಲ್ರೂ ನಮ್ಮ ರೊಟ್ಟಿ ತೊಗೊಳ್ಳಾಕ ಬಾಳ ಇಷ್ಟ ಪಡ್ತಾರ್ರೀ. ” ಎನ್ನುವರು ಹೆವ್ಮ್ಮೆಯಿಚಿದ ಶ್ರೀಮತಿ ತೋಟಮ್ಮ.

success story

‘ಜ್ಞಾನ ದೀವಿಗೆ ಜೀವನಕ್ಕೆ ಬೆಳಕ ತಂದಿತು’

Posted on

ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.

Agriculture

ತೆಂಗಿನ ತೋಟದಲ್ಲಿ ಸಿರಿಧಾನ್ಯ ಬೆಳೆ

Posted on

ಹೊಲದಲ್ಲಿ ಬೆಳೆದ ತೃಣಧಾನ್ಯಗಳು ಅಸಂಖ್ಯಾತರ ಊಟದ ಬಟ್ಟಲಿಗೆ ಸೇರಬೇಕೆಂದರೆ ಧಾನ್ಯಗಳು ಪಾಕದ ರೂಪ ಪಡೆದುಕೊಳ್ಳಬೇಕು. ಅಡುಗೆಯ ಘಮಲು, ಅದನ್ನು ಆಸ್ವಾದಿಸುವಾಗ ಸಿಗುವ ವಿಶೇಷ ಅನುಭೂತಿ ಇನ್ನಷ್ಟು, ಮತ್ತಷ್ಟು ಸಿರಿಪಾಕಗಳನ್ನು ಇಷ್ಟಪಡುವಂತೆ ಮಾಡಬೇಕು. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ಧಾನ್ಯಗಳು ಒಗ್ಗಿಕೊಂಡರೆ ಸಹಜವಾಗಿಯೇ ಬೇಡಿಕೆ ಕುದುರುತ್ತಿರುತ್ತದೆ. ಬೆಳೆಯುವ ರೈತರ ಪಾಲಿಗೆ ಅದೃಷ್ಟ ಖುಲಾಯಿಸುತ್ತದೆ. ಸಿರಿಧಾನ್ಯಗಳ ಮೌಲ್ಯವನ್ನು ಜಗತ್ತು ಅರಿತುಕೊಳ್ಳುವ ಕಾರ್ಯದ ಹಿಂದೆ ಸಿರಿಧಾನ್ಯ ಪಾಕ ತಜ್ಞರ ಕೌಶಲ್ಯ ಅಡಗಿದೆ.

Agriculture

ಬೀಜ ಬಿತ್ತದೆ ಭರ್ಜರಿ ಫಸಲು.

Posted on

ಮಳೆ ಬಿದ್ದು ಬೆಳೆದು ನಿಂತ ಫಸಲೆಲ್ಲಾ ಭೂಮಿ ಪಾಲಾದರೆ ರೈತರಿಗಾಗುವ ಸಂಕಷ್ಟ ಅಷ್ಟಿಷ್ಟಲ್ಲ. ಶ್ರಮವಹಿಸಿ ದುಡಿದು ಕಾಲಕಾಲಕ್ಕೆ ಗೊಬ್ಬರ, ಔಷಧಿಗಳನ್ನು ಸಿಂಪಡಿಸಿ ಫಸಲು ಕೊಯ್ಲಿಗೆ ಬಂದಾಗ ಹಾನಿಯಾದರೆ ದುಖಃ ಸಹಜವೇ. ಆದರೆ ಸಿರಿಧಾನ್ಯ ಬೆಳೆದರೆ ಇಂತಹ ದುಃಖ ಪಡುವ ಅಗತ್ಯವೇ ಎದುರಾಗುವುದಿಲ್ಲ ಎನ್ನುತ್ತಾರೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಮಂಜುನಾಥ ಹೆಗ್ಗಣ್ಣನವರ್. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಇವರು ಯೋಜನೆಯ ನೆರವಿನಿಂದ ಸಿರಿಧಾನ್ಯ ಕೃಷಿ ಮಾಡುತ್ತಿದ್ದಾರೆ.