ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ಫೆಬ್ರವರಿ-2018
Posted onಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ಫೆಬ್ರವರಿ-2018
ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ಫೆಬ್ರವರಿ-2018
“ಸಿರಿಧಾನ್ಯ ಆರೋಗ್ಯ ಪೂರ್ಣ ದಾನ್ಯಗಳಾಗಿದ್ದು, ಇತ್ತೀಚೆಗೆ ಜನ ಸಾಮಾನ್ಯರ ಬೇಡಿಕೆಯ ಉತ್ಪಾದನೆ ಆಗಿದೆ. ಇದರಿಂದ ತಯಾರಿಸುವ ಖಾದ್ಯಗಳನ್ನು ವಿಶೇಷವಾಗಿ ನಿಮ್ಮ ಊರಲ್ಲಿಯೇ ಒಂದು ‘ಸಿರಿ ಕೆಫೆ’ಯನ್ನಾಗಿಸಿಕೊಂಡು ವಿಶೇಷ ಸ್ವ ಉದ್ಯೋಗವನ್ನು ಮಾಡಿಕೊಳ್ಳಲು ಸಾಧ್ಯ.
ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಕಾಯ೯ಕ್ರಮದಡಿಯಲ್ಲಿ ಉಚಿತ ಬ್ಯೂಟಿಷಿಯನ್ ತರಬೇತಿಯನ್ನು ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ದಿ.19/2/2018 ರಿಂದ 28/02/2018 ರ ವರೆಗೆ ಉಚಿತವಾಗಿ ಹಮ್ಮಿಕೊಳ್ಳಾಗಿದೆ. ಹುಬ್ಬಳ್ಳಿಯಿಂದ 28 ಜನ ಫಲಾನುಭವಿಗಳು 10 ದಿನದ ಈ ತರಬೇತಿಯ ಪ್ರಯೋಜನ ಪಡೆದುಕೊಂಡರು.
‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ದಿನಾಂಕ:19.02.2017 ರಿಂದ 23.02.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ದಿನಾಂಕ 17.02.2018ರಂದು ಗದಗ ಜಿಲ್ಲಾ ಕಛೇರಿಯಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವಿವಿಧ ಕಾಮಗಾರಿಗಳ ಪರಿವೀಕ್ಷಣೆ, ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅನುಸಾರವಾಗಿ ಹೊಸದಾಗಿ ಆಯ್ಕೆಗೊಂಡ ಅಭಯಂತರರಿಗೆ “ಸಮುದಾಯ ಅಭಿವೃದ್ಧಿ ಅಭಿಯಂತರರ ತರಬೇತಿ”ಯನ್ನು ಹಮ್ಮಿಕೊಳ್ಳಲಾಗಿತ್ತು.
ಈ Rupay ಕಾರ್ಡ್ಗಳನ್ನು ಬಳಕೆ ಮಾಡುವ ವಿಧಾನ ಹಾಗೂ ಪ್ರಸ್ತುತವಾಗಿ ಇರುವ ನಗದು ರಹಿತ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ತಾಂತ್ರಿಕ ವಿಭಾಗದ ತರಬೇತಿ ಸಹಾಯಕರಿಗೆ “ನಗದು ರಹಿತ ವ್ಯವಹಾರ ಪದ್ಧತಿ” ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಭಾಲ್ಕಿ ತಾಲೂಕಿನ ಹಲಬರ್ಗಾ ವಲಯದ ಹಲಬರ್ಗಾ ಕಾರ್ಯಕ್ಷೇತ್ರದಲ್ಲಿ ನಡೆದ ಹಣ್ಣು ಹಂಪಲು ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಡಾ|| ಸಿದ್ದೇಶ್ವರ ಸ್ವಾಮೀಜಿಗಳಿಂದ ಉದ್ಘಾಟನೆ.
ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ಐದು ದಿನಗಳ ತರಬೇತಿಗಳ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.