News

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಸಿದ್ಧ ಉಡುಪು ತಯಾರಿಕಾ’ ತರಬೇತಿ

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದು ತತ್ಸಂಬಂಧ ದಿನಾಂಕ:26.03.2017 ರಿಂದ 30.03.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

success story

ಬುಟ್ಟಿ ಹೆಣೆದು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿದ ಈರಮ್ಮ

Posted on

ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.

Community Health

ಆರೋಗ್ಯ ಮಾಹಿತಿ ಕಾರ್ಯಕ್ರಮ

Posted on

ಮಹಿಳೆಯರ ವೈಯಕ್ತಿಕ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ಸಮುದಾಯದ ಬಗೆಗಿನ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ತಿ.ನರಸೀಪುರ ತಾಲ್ಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ತಿಮ್ಮಮ್ಮ ಉದ್ಘಾಟನೆ ಮಾಡಿ ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು. 

success story

‘ಆತ್ಮವಿಶ್ವಾಸವೇ ಆರ್ಥಿಕ ಮುನ್ನಡೆಗೆ ಸಾಕ್ಷಿ’

Posted on

“ಮೊದಲು ನಾವು ಮನೆಯಲ್ಲಿ ಕುಳಿತು ಮನೆ ಕೆಲಸ ಮುಗಿಸಿ ನೆರೆ ಹೊರೆಯವರೊಟ್ಟಿಗೆ ಕಾಲಾಹರಣ ಮಾಡ್ತಿದ್ವಿ. ಮೊದ್ಲು ಗೊತ್ತಿದ್ದಂಗ ಖಾನವಳಿಗೆ ರೊಟ್ಟಿ ಅಗತ್ತ ಐತಿ ಎಚಿದು ಈ ಉದ್ಯೋಗ ಮಾಡಾಕ ಮನಸ್ಸ ಮಾಡಿದ್ವಿ. ಧರ್ಮಸ್ಥಳ ಸಂಸ್ಥೆಯಿಚಿದ ನಮಗೆ ತುಂಬು ಸಹಕಾರ ಸಿಕ್ಕೈತಿ”
“ನಾವು ತಯಾರ ಮಾಡೋ ರೊಟ್ಟಿ ಹಿಟ್ಟಿನಲ್ಲಿ ಅಕ್ಕಿ ಹಿಟ್ಟು ಸೇರಿಸಲ್ಲ. ಹಿಂಗಾಗಿ ಎಲ್ರೂ ನಮ್ಮ ರೊಟ್ಟಿ ತೊಗೊಳ್ಳಾಕ ಬಾಳ ಇಷ್ಟ ಪಡ್ತಾರ್ರೀ. ” ಎನ್ನುವರು ಹೆವ್ಮ್ಮೆಯಿಚಿದ ಶ್ರೀಮತಿ ತೋಟಮ್ಮ.

News

ಮಹಿಳಾ ದಿನಾಚರಣೆ -ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಹಾಗೂ ಸಿರಿಧಾನ್ಯಗಳ ಪದ್ಧತಿಯನ್ನು ಅರಿವು ಮೂಡಿಸುವ ಕಾರ್ಯಕ್ರಮ

Posted on

ಮಹಿಳೆಯರ ದಿನಾಚರಣೆಗಳು ಸಬಲೀಕರಣದ ಬೆಳವಣಿಗೆಗೆ ದಾರಿಮಾಡಿಕೊಡುತ್ತದೆ. ಇಂದು ಪ್ರಗತಿಯ ಪಥದೆಡೆಗೆ ಸಾಗಲು ಮಹಿಳೆಯರೂ ಕೂಡ ಪುರುಷರಿಗೆ ಸಮಾನವಾಗಿ ಸಾಗಬೇಕಾಗಿದೆ. ಇದು ಈ ವರ್ಷದ ‘ಮಹಿಳಾ ದಿನದಂದು’ ನಮ್ಮೆಲ್ಲರ ಪ್ರತಿಜ್ಞೆಯಾಗಬೇಕು.

success story

‘ಜ್ಞಾನ ದೀವಿಗೆ ಜೀವನಕ್ಕೆ ಬೆಳಕ ತಂದಿತು’

Posted on

ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು.