Jobs

|| ಓಂ ಶ್ರೀ ಮಂಜುನಾಥಾಯ ನಮಃ ||
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ ಟ್ರಸ್ಟ್ ಧರ್ಮಸ್ಥಳ

 

ಮುನ್ನುಡಿ:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಯು ರಾಜ್ಯದ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಸ್ಥೆಯಿಂದ ಸ್ವಸಹಾಯ ಸಂಘಗಳ ಮುಖೇನ ಹಲವಾರು ರೀತಿಯ ಜನೋಪಯೋಗಿ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿದ್ದು, ದುರ್ಬಲ ವರ್ಗದ ಜನರಿಗೆ ಸಂಘಟನೆ ಮತ್ತು ಆರ್ಥಿಕ ನೆರವನ್ನು ಒದಗಿಸುವುದಲ್ಲದೇ ಮಹಿಳಾ ಸಬಲೀಕರಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪರಿವರ್ತನೆಯನ್ನು ಸಕ್ರಿಯವಾಗಿ ಅನುಷ್ಠಾನಿಸುತ್ತಿದೆ. ಸಂಸ್ಥೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಅನುಷ್ಠಾನದ ಮೇಲ್ವೀಚಾರಣೆಗಾಗಿ ಮೇಲ್ವೀಚಾರಕರನ್ನು ನಿಯೋಜನೆ ಮಾಡಲಾಗುತ್ತದೆ.ಈ ಹುದ್ದೆಯ ವಿವರಣೆಯು ಈ ಕೆಳಗಿನಂತಿದೆ.

ಮೇಲ್ವೀಚಾರಕ ಹುದ್ದೆ:
1. ಒಂದು ತಾಲೂಕಿನ ನಾಲ್ಕರಿಂದ ಐದು ಹೋಬಳಿಗಳಲ್ಲಿ ಬರುವ ಸ್ವಸಹಾಯ ಸಂಘಗಳ ನಿಗಾವಹಿಸುವಿಕೆ ಮತ್ತು ಮೇಲ್ವಿಚಾರಣೆ.
2. ಸಮಾಜಸೇವೆಯಲ್ಲಿ ಆಸಕ್ತಿಯಿರುವ ಗ್ರಾಮೀಣ ಯುವಕ/ಯುವತಿಯರನ್ನು ಆಯ್ಕೆ ಮಾಡಿ ಇವರಿಗೆ ಸಂಸ್ಥೆಯ ಕಾರ್ಯಕ್ರಮಗಳ ಪರಿಚಯ, ಸಂಘ ರಚನೆ, ನಾಯಕತ್ವ, ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಿ ಸಂಸ್ಥೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಯಾರಿಗೊಳಿಸುವುದು.
3. ತನ್ನ ವ್ಯಾಪ್ತಿಗೆ ಬರುವ ಕಾರ್ಯಕ್ಷೇತ್ರದಲ್ಲಿ ಜನ ಸಂಘಟನೆ ಮಾಡಿ ಸೂಕ್ತ ತರ¨ಬೇತಿಯನ್ನು ನೀಡಿ ಸುಸ್ಥಿತಿಯಲ್ಲಿ ಇರಿಸುವುದು. ಚಾಲ್ತಿಯಲ್ಲಿರುವ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸೌಲಭ್ಯ ದೊರಕಿಸುವ ವ್ಯವಸ್ಥೆ ಮಾಡುವುದು.
4. ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಘಗಳಿಗೆ ಭೇಟಿ ನೀಡಿ ವಾರದ ಸಭೆ, ವಾರದ ವ್ಯವಹಾರಗಳನ್ನು ನಿರಂತರ ಕ್ರಮಬದ್ಧವಾಗಿ ನಡೆಸುತ್ತಿರುವ ಕುರಿತು ಖಾತ್ರಿಪಡಿಸಿಕೊಳ್ಳುವುದು.
5. ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸುವುದು.

ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ
ಎಸ್.ಎಸ್.ಎಲ್.ಸಿ/ಪಿಯುಸಿ(ಮೂರು ವರ್ಷದ ಅನುಭವವಿರಬೇಕು)
ವಯೋಮಿತಿ: 01.12.2019ಕ್ಕೆ ಅನ್ವಯವಾಗುವಂತೆ 30 ವರ್ಷ ಒಳಗಿನವರಾಗಿರಬೇಕು

ವೇತನ: 12000-19000

ಇತರ ಸೌಲಭ್ಯಗಳು: ರಜಾ ಸೌಲಭ್ಯ, ಪಿ.ಎಫ್, ಗ್ರಾಚ್ಯುಟಿ,
ತರಬೇತಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ನಮ್ಮ ಸಂಸ್ಥೆಯ ತರಬೇತಿ ಕೇಂದ್ರಗಳಲ್ಲಿ 2 ತಿಂಗಳು ತರಬೇತಿಯನ್ನು ನೀಡಲಿದ್ದು, ಈ ಅವಧಿಯಲ್ಲಿ ಮಾಸಿಕ ಗೌರವಧನ ನೀಡಲಾಗುವುದು ಮತ್ತು ಮೊದಲ 6 ತಿಂಗಳ ಅವಧಿ ಪ್ರೋಬೆಷನರಿ ಅವಧಿಯಾಗಿದ್ದು, ಕಾರ್ಯಕ್ಷಮತೆ ಉತ್ತಮವಾಗಿದ್ದಲ್ಲಿ ಹುದ್ದೆಯಲ್ಲಿ ಖಾಯಾಮಾತಿ ಮಾಡಲಾಗುವುದು.
ನಿಯೋಜನೆ: ಯೋಜನೆಯ ಕರ್ನಾಟಕದಾದ್ಯಂತ ಕಾರ್ಯಾಚರಿಸುತ್ತಿದ್ದು, ಬೇಡಿಕೆಯ ಅನುಗುಣವಾಗಿ ವಿವಿಧ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗುವುದು.

ನಗದು ಸಹಾಯಕ ಹುದ್ದೆ:

ಪ್ರತಿದಿನ ಗ್ರಾಮಗಳಲ್ಲಿರುವ ಸಂಗ್ರಹಣಾ ಕೇಂದ್ರಗಳಲ್ಲಿ ನಗದು ಸಂಗ್ರಹಣೆ ಮಾಡುವುದು. ಮುಂಜಾನೆ 6.00ಕ್ಕೆ ಕಛೇರಿಯಿಂದ ಸಂಸ್ಥೆಯ ವಾಹನದ ಮೂಲಕ ಹಣ ಸಂಗ್ರಹಣಾ ಕೇಂದ್ರಕ್ಕೆ ತೆರಳುವುದು. ಈ ಕೇಂದ್ರಗಳಿಗೆ ಸಂಘಗಳ ಸದಸ್ಯರು ಮೊತ್ತ ತುಂಬಲು ಬರುತ್ತಾರೆ. ಈ ಸಂಗ್ರÀಹಣಾ ಕೇಂದ್ರವು ಮುಂಜಾನೆ 7.00 ರಿಂದ ಮಧ್ಯಾಹ್ನ 2.30 ರತನಕ ತೆರೆದಿರುವುದು. ನಗದು ಸಂಗ್ರಾಹಕರು ಹಣ ಸಂಗ್ರಹಣಾ ಸಾಧನದ ಮೂಲಕ ಸಂಘಗಳಿಂದ ಮೊತ್ತ ಸಂಗ್ರಹಣೆ ಮಾಡುತ್ತಾರೆ. ಸಂಘಗಳ ಸದಸ್ಯರ ಮೊತ್ತಗಳ ವಿವರಣೆಯನ್ನು ಸಂಗ್ರಹಣಾ ಸಾಧನದಲ್ಲಿ ದಾಖಲು ಮಾಡಬೇಕಾಗುತ್ತದೆ. 2.30ರ ನಂತರ ಬ್ಯಾಂಕಿಗೆ ಮೊತ್ತ ಜಮೆ ಮಾಡಿ ಯೋಜನಾ ಕಛೇರಿಗೆ ಭೇಟಿ ನೀಡಿ ಸಂಗ್ರಹಣಾ ಸಾಧನ ಮತ್ತು ವರದಿಗಳನ್ನು ಪ್ರಬಂಧಕರಿಗೆ ಸಲ್ಲಿಸುವುದು ಮತ್ತು ಸಂಸ್ಥೆಯ ನಿಯಮದ ಪ್ರಕಾರ ವರದಿಗಳನ್ನು ದಾಖಲಿಸುವುದು.

ವಿದ್ಯಾರ್ಹತೆ: ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನವಿರಬೇಕು.
ವಯೋಮಿತಿ: 01.12.2019ಕ್ಕೆ ಅನ್ವಯವಾಗುವಂತೆ 25 ವರ್ಷ ಒಳಗಿನವರಾಗಿರಬೇಕು

ವೇತನ: 12000-16000
ಇತರ ಸೌಲಭ್ಯಗಳು: ರಜಾ ಸೌಲಭ್ಯ, ಪಿ.ಎಫ್, ಗ್ರಾಚ್ಯುವಿಟಿ,
ನಿಯೋಜನೆ: ಯೋಜನೆಯ ಕರ್ನಾಟಕದಾದ್ಯಂತ ಕಾರ್ಯಾಚರಿಸುತ್ತಿದ್ದು, ಬೇಡಿಕೆಯ ಅನುಗುಣವಾಗಿ ಸ್ವಂತ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನಿಯೋಜನೆ ಮಾಡಲಾಗುವುದು.

ಕಛೇರಿ ಸಹಾಯಕರ ಹುದ್ದೆ:
ಸದ್ರಿ ಹುದ್ದೆಯು ತಾಲೂಕು ಕಛೇರಿಯಲ್ಲಿ ನಿಗದಿತ ಜಾಬ್‍ಚಾರ್ಟ್‍ನಂತೆ ಮೇಲಾಧಿಕಾರಿಗಳ ಆಣತಿಯಂತೆ ಕಛೇರಿ ಕೆಲಸಗಳನ್ನು ನಿರ್ವಹಿಸುವುದಾಗಿದೆ.

ವಿದ್ಯಾರ್ಹತೆ: ಯಾವುದೇ ಪದವಿ ಮತ್ತು ಕಂಪ್ಯೂಟರ್ ಜ್ಞಾನ ತಿಳಿದಿರಬೇಕು
ವಯೋಮಿತಿ: 01.12.2019ಕ್ಕೆ ಅನ್ವಯವಾಗುವಂತೆ 25 ವರ್ಷ ಒಳಗಿನವರಾಗಿರಬೇಕು

ವೇತನ: 11900-15000

ಇತರ ಸೌಲಭ್ಯಗಳು: ರಜಾ ಸೌಲಭ್ಯ, ಪಿ.ಎಫ್, ಗ್ರಾಚ್ಯುಟಿ.
ನಿಯೋಜನೆ: ಯೋಜನೆಯ ಕರ್ನಾಟಕದಾದ್ಯಂತ ಕಾರ್ಯಾಚರಿಸುತ್ತಿದ್ದು, ಬೇಡಿಕೆಯ ಅನುಗುಣವಾಗಿ ಸ್ವಂತ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನಿಯೋಜನೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:-
ಅರ್ಜಿ ಸಲ್ಲಿಸಲು ಈ ಕೆಳಗೆ ಅವಕಾಶ ಮಾಡಿಕೊಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಪಟ್ಟ ಹುದ್ದೆಯ ವಿವರಣೆ ಮೇಲೆ ತಿಳಿಸಿದಂತೆ ಓದಿಕೊಂಡು ಮುಂದುವರೆಯಿರಿ.

*ಹೆಚ್ಚಿನ ಮಾಹಿತಿಗಾಗಿ 9972717169,9686580734,9535460104 ನ್ನು ಸಂಪರ್ಕಿಸಬಹುದಾಗಿದೆ.

 

(ಡಾ| ಎಲ್.ಎಚ್.ಮಂಜುನಾಥ್)
ಮುಖ್ಯ ಕಾರ್ಯನಿರ್ವಹಣಾಧಿಕಾರಿ