


NOTE :– ವಿದ್ಯಾರ್ಥಿಯು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ತಪಾವತು ರಹಿತವಾಗಿ ಅರ್ಜಿ ಭರ್ತಿಗೊಳಿಸಿ. ದಾಖಲಾತಿಗಳು ಪೂರಕವಾಗಿರದಿದ್ದರೆ, ಅಸ್ಪಷ್ಟವಾಗಿದ್ದರೆ, ತಪಾವತುಗಳಿದ್ದರೆ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುವುದು. ವಿದ್ಯಾರ್ಥಿಗಳು ಈ ಕೆಳಗಿನ ಎಲ್ಲಾ ದಾಖಲಾತಿಗಳು ದೊರೆತ ನಂತರವೇ ಸುಜ್ಞಾನನಿಧಿಗೆ ಅರ್ಜಿ ಸಲ್ಲಿಸುವುದು ವಿದ್ಯಾರ್ಥಿಯು ಸಲ್ಲಿಸಬೇಕಾದ ದಾಖಲಾತಿಗಳು. SSLC ಅಂಕಪಟ್ಟಿ. 2021-22 ನೇ ಸಾಲಿನ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ ಮತ್ತು ಶುಲ್ಕಪಾವತಿ ರಶೀದಿ( STUDY CERTIFICATE & FEES RECIEPT). ವಿದ್ಯಾರ್ಥಿಯು ಈ ಹಿಂದೆ ಅಧ್ಯಯನ ನಡೆಸಿದ ವಿದ್ಯಾಭ್ಯಾಸದ ಅಂಕಪಟ್ಟಿ (PUC /DEGREE). ವಿದ್ಯಾರ್ಥಿಯ ಹೆಸರಿನಲ್ಲಿರುವ ರಾಷ್ಟೀಕೃತ ಬ್ಯಾಂಕ್ನ ಪಾಸ್ ಬುಕ್ ಪ್ರತಿ (NATIONALIZED BANK ONLY). ಯೋಜನಾ ಕಛೇರಿಯ ಶಿಫಾರಸ್ಸು ಪತ್ರ. ವಿದ್ಯಾರ್ಥಿಯ ತಂದೆಯ ಆಧಾರ್ ಕಾರ್ಡ್ ಕಡ್ಡಾಯ. (ಒಂದು ವೇಳೆ ತಂದೆ ಇಲ್ಲದಿದ್ದಲ್ಲಿ ತಾಯಿಯ ಆಧಾರ್ ಕಾರ್ಡ್ ಒದಗಿಸುವುದು.)