Sujnananidhi Scholarship

ಸುಜ್ಞಾನನಿಧಿ ಶಿಷ್ಯವೇತನ ನವೀಕರಣ ಅರ್ಜಿಯ ಬಗ್ಗೆ

ಸುಜ್ಞಾನನಿಧಿ ಶಿಷ್ಯವೇತನವನ್ನು ಈಗಾಗಲೇ ಪಡೆಯುತ್ತಿರುವ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವವರೆಗೆ ಪ್ರತೀ ವರ್ಷ ರಿನಿವಲ್ ಮಾಡಬೇಕಾಗಿರುತ್ತದೆ. 2020-21 ನೇ ಸಾಲಿನ ಸುಜ್ಙಾನನಿಧಿ ಶಿ಼ಷ್ಯವೇತನವನ್ನು ಕೋವಿಡ್‌-19 ಸಮಸ್ಯೆಯಿಂದ ಕಾಲೇಜುಗಳು ಪ್ರಾರಂಭವಾಗದ ಕಾರಣ ಈವರೆಗೆ website ನಲ್ಲಿ ಪ್ರಕಟಿಸಿರುವುದಿಲ್ಲ. ಪ್ರಸ್ತುತ ವಿದ್ಯಾರ್ಥಿಗಳಿಗೆ Online ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ, ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆಯ ಬಯಸುವ ವಿದ್ಯಾರ್ಥಿಗಳು website: www.skdrdpindia.orgನಲ್ಲಿ Online ಮೂಲಕ ಅರ್ಜಿ ಸಲ್ಲಿಸಿ ನವೀಕರಿಸಬಹುದು. ಬೇರೆ ಯಾವುದೇ ಕಡೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಎಲ್ಲಾ ದಾಖಲೆಗಳು ದೊರೆತ ನಂತರವೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.

website ನಲ್ಲ್ಲಿ Online ಮೂಲಕ ವಿವರಗಳನ್ನು ಭರ್ತಿಗೊಳಿಸುವಾಗ ಸದ್ರಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕೇಳಿರುವ ಅಗತ್ಯ ವಿವರಗಳನ್ನು ಭರ್ತಿಗೊಳಿಸುವುದು. ಹಾಗೂ ವಿದ್ಯಾರ್ಥಿಯು ಎಲ್ಲಾ ವಿವರಗಳನ್ನು Capital ಅಕ್ಷರಗಳಲ್ಲಿ ಭರ್ತಿಗೊಳಿಸುವುದು.

ವಿದ್ಯಾರ್ಥಿಯು website ನಲ್ಲಿ ಕೆಲವೊಂದು ದಾಖಲೆಗಳನ್ನು Upload ಮಾಡಬೇಕಾಗಿದ್ದು, ಎಲ್ಲಾ ವಿವರಗಳನ್ನು ಗಮನಿಸಿಕೊಂಡ ನಂತರವೇ Submit ಮಾಡುವುದು. Upload ಮಾಡುವ ದಾಖಲಾತಿಗಳು ಸ್ಪಷ್ಟವಾಗಿ ಕಾಣಿಸುವಂತಿರಬೇಕು. ಯಾವುದೇ ತಪಾವತುಗಳು ಬಾರದ ರೀತಿಯಲ್ಲಿ ನವೀಕರಣ ಅರ್ಜಿಯನ್ನು ಭರ್ತಿಗೊಳಿಸುವುದು. ನವೀಕರಣ ಅರ್ಜಿ ಭರ್ತಿಗೊಳಿಸಿದ ನಂತರ ಎಲ್ಲಾ ದಾಖಲಾತಿಗಳು ಸರಿಯಾಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು ಕಳುಹಿಸಿಕೊಡುವುದು. ಒಮ್ಮೆ Online ನಲ್ಲಿ ಎಂಟ್ರಿ ಮಾಡಿ ಕಳುಹಿಸಿಕೊಟ್ಟ ನಂತರ ಮತ್ತೆ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.

 ಸುಜ್ಞಾನನಿಧಿ ಶಿಷ್ಯವೇತನ ನವೀಕರಣ ಮಾಡಬೇಕಾದರೆ ವಿದ್ಯಾರ್ಥಿ/ವಿದ್ಯಾರ್ಥಿನಿ ಹಿಂದಿನ ವರ್ಷದ ಕೋರ್ಸಿನ ಎಲ್ಲಾ ವಿಷಯಗಳಲ್ಲಿ ಪಾಸಾಗಿರಬೇಕು. ಅಥವಾ ಮುಂದಿನ ವರ್ಷಕ್ಕೆ ಕಾಲೇಜಿಗೆ ಸೇರ್ಪಡೆಗೆ ಅರ್ಹತೆ/ಅವಕಾಶ ಹೊಂದಿರಬೇಕು. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ.
 ವಿದ್ಯಾರ್ಥಿಯ ಪೋಷಕರು ಧರ್ಮಸ್ಥಳದ ಸ್ವ-ಸಹಾಯ ಸಂಘವನ್ನು ಬಿಟ್ಟಿದ್ದರೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
 ಮಧ್ಯದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಕೋರ್ಸ್ ಬದಲಾವಣೆ ಮಾಡುವಂತಿಲ್ಲ. ಹಾಗೂ ಬದಲಾವಣೆ ಮಾಡಿದಲ್ಲಿ, ಪಡೆದುಕೊಂಡ ಪೂರ್ತಿ ಹಣ ಕಟ್ಟಬೇಕಾಗುತ್ತದೆ.
 ಪ್ರತೀ ವರ್ಷ ಎಲ್ಲಾ ಕೋರ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢಪತ್ರದೊಂದಿಗೆ, ಕಾಲೇಜು ಶುಲ್ಕ ಕಟ್ಟಿದ ನಂತರ ಹಾಗೂ ಹಿಂದಿನ ವರ್ಷದ ಅಂಕಪಟ್ಟಿ ದೊರೆತ ನಂತರವೇ, ನವೀಕರಣಕ್ಕೆ ಕಳುಹಿಸಿಕೊಡುವುದು.
 ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್ IFSC code ನಲ್ಲಿ ಬದಲಾವಣೆ ಇದ್ದಲ್ಲಿ ಸರಿಪಡಿಸಿ, ಬ್ಯಾಂಕ್‌ ವ್ಯವಸ್ಥಾಪಕರ ಸಹಿ ಹಾಕಿಸುವುದು ಹಾಗೂ ಸದ್ರಿ ಖಾತೆಯಲ್ಲಿ ಪ್ರಸ್ತುತ ವ್ಯವಹಾರಗಳು ಚಾಲ್ತಿಯಲ್ಲಿರಬೇಕು.
 ಬ್ಯಾಂಕ್‌ ಖಾತೆಯ ವಿವರವನ್ನು ಹಿಂದಿನ ವರ್ಷದಲ್ಲಿ ನೀಡಿದ ಖಾತೆ ಸಂಖ್ಯೆಯನ್ನೇ ನೀಡುವುದು. ಬದಲಾಯಿಸಲು ಅವಕಾಶ ಇರುವುದಿಲ್ಲ.
 ಅರ್ಜಿಯನ್ನು ಭರ್ತಿ ಮಾಡುವಾಗ ತಪಾವತು ರಹಿತವಾಗಿ ಭರ್ತಿ ಮಾಡುವುದು. ಅರ್ಜಿಯಲ್ಲಿ ನಮೂದಿಸಿದ ಎಲ್ಲಾ ದಾಖಲಾತಿಗಳು ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಿ ಅರ್ಜಿಯನ್ನು (Submit) ಕಳುಹಿಸಿಕೊಡುವುದು.
 Website ನಲ್ಲಿ ಒಮ್ಮೆ Submit ಕೊಟ್ಟ ನಂತರ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಯಾವುದೇ ಒಂದು ದಾಖಲಾತಿಯನ್ನು ಭರ್ತಿ ಮಾಡದೇ Submit ಮಾಡಿದರೆ ಅದು Submit ತೆಗೆದುಕೊಳ್ಳುವುದಿಲ್ಲ.
 ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಭರ್ತಿಗೊಳಿಸಿ ನೀಡಿದಲ್ಲಿ ಮಾತ್ರ ಶಿಷ್ಯವೇತನವನ್ನು ಶೀಘ್ರಗತಿಯಲ್ಲಿ ಪಡೆಯಲು ಸಾಧ್ಯ.
Website ನಲ್ಲಿ ವಿದ್ಯಾರ್ಥಿಗಳು ನವೀಕರಣ ಅರ್ಜಿ ಸಲ್ಲಿಸುವ ಸಂದರ್ಭ ಗಮನಿಸಬೇಕಾದ ಅಂಶಗಳು: Website ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅರ್ಜಿಯನ್ನು ಭರ್ತಿ ಮಾಡುವುದು.
• ಕ್ರ.ಸಂ1. ರಲ್ಲಿ ವಿದ್ಯಾರ್ಥಿಯ ಹೆಸರು.
• ಕ್ರ.ಸಂ 2. ರಲ್ಲಿ ವಿದ್ಯಾರ್ಥಿಯ ಪೋಷಕರ ಹೆಸರು.
• ಕ್ರ.ಸಂ3. ರಲ್ಲಿ ವಿದ್ಯಾರ್ಥಿಯ ಪೋಷಕರಿರುವ ಧರ್ಮಸ್ಥಳ ಸಂಘದ ಹೆಸರು.
• ಕ್ರ.ಸಂ 4. ರಲ್ಲಿ ಯೋಜನಾಕಛೇರಿ ಹೆಸರು.
• ಕ್ರ.ಸಂ5. ರಲ್ಲಿ ವಿದ್ಯಾರ್ಥಿಯ ಖಾಯಂ ವಿಳಾಸ.
• ಕ್ರ.ಸಂ6. ರಲ್ಲಿ ಗ್ರಾಮ.
• ಕ್ರ.ಸಂ7. ರಲ್ಲಿ ತಾಲೂಕು.
• ಕ್ರ.ಸಂ8. ರಲ್ಲಿ ದೂರವಾಣಿ ಸಂಖ್ಯೆ.
• ಕ್ರ.ಸಂ9. ರಲ್ಲಿ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕ.
• ಕ್ರ.ಸಂ 10. ರಲ್ಲಿ ಎಸ್. ಎಸ್. ಎಲ್.ಸಿ ಪರೀಕ್ಷೆಯ ಅಂಕ ಪಟ್ಟಿಯ ರಿಜಿಸ್ಟ್ರೇಷನ್‌ ನಂಬ್ರ.
• ಕ್ರ.ಸಂ11. ರಲ್ಲಿ ವಿದ್ಯಾರ್ಥಿಯು ಆಯ್ದ ಕೋರ್ಸ್.
• ಕ್ರ.ಸಂ12. ರಲ್ಲಿ ವಿದ್ಯಾರ್ಥಿಯು ಪ್ರಸ್ತುತ ಕಲಿಯುತ್ತಿರುವ ಕೋರ್ಸಿನ ಅವಧಿ.
• ಕ್ರ.ಸಂ13. ರಲ್ಲಿ ಶಿಕ್ಷಣ ಸಂಸ್ಥೆಯ ಹೆಸರು.
• ಕ್ರ.ಸಂ14. ರಲ್ಲಿ ಈ ಹಿಂದೆ ನೀಡಿದ ರಾಷ್ಟ್ರೀಕೃತ ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ . ಈ ಹಿಂದೆ ವಿಜಯಬ್ಯಾಂಕ್‌ ಪಾಸ್‌ ಪುಸ್ತಕ ನೀಡಿದ್ದು ಈಗ ಬ್ಯಾಂಕ್‌ ಆಫ್‌ ಬರೋಡಕ್ಕೆ ವಿಜಯ ಬ್ಯಾಂಕ್‌ ವಿಲೀನಗೊಂಡಿದ್ದಲ್ಲಿಈಗ ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆ ಪುಸ್ತಕವನ್ನೇ ನೀಡುವುದು.
• ಕ್ರ.ಸಂ15. ರಲ್ಲಿ ಬ್ಯಾಂಕ್‌ನ ಹೆಸರು,
• ಕ್ರ.ಸಂ 16. ರಲ್ಲಿ ಬ್ಯಾಂಕಿನ ಬ್ರಾಂಚ್‌ನ ಹೆಸರು.
• ಕ್ರ.ಸಂ17.ರಲ್ಲಿ ಬ್ಯಾಂಕಿನ IFSC code
• ಕ್ರ.ಸಂ 18.ರಲ್ಲಿ ವಿದ್ಯಾರ್ಥಿಯು ಅಂಕಪಟ್ಟಿಯ ಪ್ರತಿ Upload ಮಾಡುವುದು.
• ಕ್ರ.ಸಂ.19 ರಲ್ಲಿ ವಿದ್ಯಾರ್ಥಿಯು ಕಲಿಯುತ್ತಿರುವ ವಿದ್ಯಾಸಂಸ್ಥೆಯ ದೃಢೀಕರಣ ಪ್ರತಿ Upload ಮಾಡುವುದು.
• ಕ್ರ.ಸಂ20. ರಲ್ಲಿ ಶುಲ್ಕ ಪಾವತಿಯ ರಶೀದಿ Upload ಮಾಡುವುದು.
• ಕ್ರ.ಸಂ.21. ರಲ್ಲಿ ಬ್ಯಾಂಕ್‌ ಪಾಸ್‌ ಪುಸ್ತಕ Upload ಮಾಡುವುದು.

ವಿದ್ಯಾರ್ಥಿಯು Website ನಲ್ಲಿ Upload ಮಾಡಬೇಕಾದ ದಾಖಲಾತಿಗಳ ಬಗ್ಗೆ:
1. ಪಾಸಾಗಿರುವ ಅಂಕಪಟ್ಟಿ ಪ್ರತಿ: ಈಗಾಗಲೇ ಕಲಿಯುತ್ತಿರುವ ಕೋರ್ಸಿನ ಹಿಂದಿನ ವರ್ಷ/ಸೆಮಿಸ್ಟರ್ ಅಂಕಪಟ್ಟಿ ಪ್ರತಿಯನ್ನು Upload ಮಾಡುವುದು. ಕೋವಿಡ್-19 ಸಮಸ್ಯೆಯಿಂದಾಗಿ ಅಂಕಪಟ್ಟಿ upload  ಮಾಡಲು ಸಮಸ್ಯೆಯಾದ್ದಲ್ಲಿ ಕಾಲೇಜಿನಲ್ಲಿ ಮುಂದಿನ ತರಗತಿಗೆ ತೇರ್ಗಡೆಗೊಳಿಸಿದ ಬಗ್ಗೆ ನೀಡಿರುವ ದಾಖಲೆಯನ್ನು Upload ಮಾಡುವುದು.
2. ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ: ವಿದ್ಯಾರ್ಥಿ/ವಿದ್ಯಾರ್ಥಿನಿಯು ಈ ಹಿಂದೆ ಶಿಷ್ಯವೇತನಕ್ಕೆ ನೀಡಿದ್ದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡುವುದು. ವಿದ್ಯಾರ್ಥಿ/ವಿದ್ಯಾರ್ಥಿನಿಯು Pass book ಪ್ರತಿಯನ್ನು Upload ಮಾಡುವಾಗ Student Name, Account Number, IFSC code, Bank Branch Name ಸ್ಪಷ್ಟವಾಗಿ ಕಾಣುವಂತಿರಬೇಕು. ಸರಿಯಾಗಿ ಕಾಣದೇ ಇರುವ ಬ್ಯಾಂಕ್‌ ಪಾಸ್ ಪುಸ್ತಕದ ಪ್ರತಿಯನ್ನು ರಿಜೆಕ್ಟ್‌ ಮಾಡಲಾಗುವುದು. ಬ್ಯಾಂಕ್‌ ಪಾಸ್ ಪುಸ್ತಕ ತಿದ್ದುಪಡಿ ಅಥವಾ ಕೈಯಿಂದ ಬರೆಯುವುದಾಗಲಿ ಮಾಡಬಾರದು. ಈಗಾಗಲೇ ವಿಜಯಬ್ಯಾಂಕ್ ಹಾಗೂ ಇನ್ನೀತರ ಕೆಲವೊಂದು ಬ್ಯಾಂಕ್‌ಗಳು ಬೇರೊಂದು ಬ್ಯಾಂಕಿಗೆ ವಿಲೀನಗೊಂಡಿರುತ್ತದೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಬ್ಯಾಂಕ್ IFSC code ಬದಲಾವಣೆಯಾಗಿದ್ದಲ್ಲಿ ಸರಿಪಡಿಸಿ ವ್ಯವಸ್ಥಾಪಕರ ಸಹಿ ಹಾಕಿಸಿ upload ಮಾಡುವುದು.
3. ಶಿಕ್ಷಣ ಸಂಸ್ಥೆಯ ಶುಲ್ಕ ಪಾವತಿ ರಶೀದಿಯ ಪ್ರತಿ (Fees Receipt): ಕಾಲೇಜಿಗೆ 2020ನೇ ಸಾಲಿನಲ್ಲಿ ಶುಲ್ಕ ಪಾವತಿ ರಶೀದಿಯ ಪ್ರತಿಯನ್ನು upload ಮಾಡುವುದು. ಶುಲ್ಕ ಪಾವತಿ ರಶೀದಿಯಲ್ಲಿ ವಿದ್ಯಾರ್ಥಿ ಕಲಿಯುತ್ತಿರುವ ವರ್ಷ, ಹೆಸರು, ಪಾವತಿಸಿದ ಮೊತ್ತ ಸ್ಪಷ್ಟವಾಗಿ ಕಾಣುವಂತಿರಬೇಕು. Online ಮೂಲಕ ಶುಲ್ಕ ಪಾವತಿಸಿದ್ದಲ್ಲಿ, ಶುಲ್ಕ ವರ್ಗಾವಣೆ ಮಾಡಿದ ರಶೀದಿಯನ್ನು upload ಮಾಡುವುದು.
4. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಪತ್ರ(Study certificate): ವಿದ್ಯಾರ್ಥಿ/ನಿಯು Online ತರಗತಿಗೆ ಹಾಜರಾಗುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ‘Study certificate’ ಪಡಕೊಂಡು upload ಮಾಡುವುದು ಶಿಕ್ಷಣಸಂಸ್ಥೆಯ ಮುಖ್ಯಸ್ಥರ ದೃಢಪತ್ರ ನಮೂನೆ ನೀಡಿರುತ್ತೇವೆ. ಈ ಅರ್ಜಿಯನ್ನು ಭರ್ತಿಗೊಳಿಸಿ, ಕಾಲೇಜಿನ ಪ್ರಾಂಶುಪಾಲರ ದೃಢೀಕರಣದೊಂದಿಗೆ upload ಮಾಡಬಹುದು.
ದಾಖಲಾತಿಗಳ ಮೂಲಪ್ರತಿಯನ್ನು  ಪೋಟೋ ತೆಗೆದು ಅಥವಾ scan ಮಾಡಿಕೊಂಡು upload ಮಾಡುವುದು. ಪ್ರತಿಯೊಂದು ದಾಖಲೆ ಪ್ರತಿಯಲ್ಲಿಯೂ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡಿದ ರಿಜಿಸ್ಟ್ರೇಷನ್‌ ನಂಬ್ರ ವನ್ನು ಹಾಕಿಯೇ upload ಮಾಡುವುದು.

website ನಲ್ಲಿ ನವೀಕರಣಕ್ಕೆ online  ಮೂಲಕ ಅರ್ಜಿ ಸಲ್ಲಿಸಲು 20.12.2020 ಕ್ಕೆ ಕೊನೆಯ ದಿನಾಂಕವಾಗಿರುತ್ತದೆ.
ವಿಶೇಷ ಸೂಚನೆ: ಮೇಲೆ ತಿಳಿಸಿರುವ ಮಾಹಿತಿ, ಸೂಚನೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸುವುದು. ಅಸಮರ್ಪಕ ಅರ್ಜಿಗಳನ್ನು ರದ್ದು ಮಾಡಲಾಗುವುದು. ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ದೂ: 9591770660

study certificate copy Download here ⇒ study certificate

Click here for online application