ತೆಂಗಿನ ತೋಟದಲ್ಲಿ ಸಿರಿಧಾನ್ಯ ಬೆಳೆ
Posted onಹೊಲದಲ್ಲಿ ಬೆಳೆದ ತೃಣಧಾನ್ಯಗಳು ಅಸಂಖ್ಯಾತರ ಊಟದ ಬಟ್ಟಲಿಗೆ ಸೇರಬೇಕೆಂದರೆ ಧಾನ್ಯಗಳು ಪಾಕದ ರೂಪ ಪಡೆದುಕೊಳ್ಳಬೇಕು. ಅಡುಗೆಯ ಘಮಲು, ಅದನ್ನು ಆಸ್ವಾದಿಸುವಾಗ ಸಿಗುವ ವಿಶೇಷ ಅನುಭೂತಿ ಇನ್ನಷ್ಟು, ಮತ್ತಷ್ಟು ಸಿರಿಪಾಕಗಳನ್ನು ಇಷ್ಟಪಡುವಂತೆ ಮಾಡಬೇಕು. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ಧಾನ್ಯಗಳು ಒಗ್ಗಿಕೊಂಡರೆ ಸಹಜವಾಗಿಯೇ ಬೇಡಿಕೆ ಕುದುರುತ್ತಿರುತ್ತದೆ. ಬೆಳೆಯುವ ರೈತರ ಪಾಲಿಗೆ ಅದೃಷ್ಟ ಖುಲಾಯಿಸುತ್ತದೆ. ಸಿರಿಧಾನ್ಯಗಳ ಮೌಲ್ಯವನ್ನು ಜಗತ್ತು ಅರಿತುಕೊಳ್ಳುವ ಕಾರ್ಯದ ಹಿಂದೆ ಸಿರಿಧಾನ್ಯ ಪಾಕ ತಜ್ಞರ ಕೌಶಲ್ಯ ಅಡಗಿದೆ.