ವಿಶ್ವ ಪರಿಸರ ದಿನಾಚರಣೆ – ಸಸಿ ವಿತರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ
Posted onವಿಶ್ವ ಪರಿಸರ ದಿನಾಚರಣೆ – ಸಸಿ ವಿತರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ
ವಿಶ್ವ ಪರಿಸರ ದಿನಾಚರಣೆ – ಸಸಿ ವಿತರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ
ಜಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ
ಜಲ ಸಂಪನ್ಮೂಲದ ಸದ್ಬಳಕೆ ಇಂದಿನ ಅಗತ್ಯ – ಡಾ| ಡಿ. ವೀರೇಂದ್ರ ಹೆಗ್ಗಡೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದನ್ವಯ ಅನಿಗೋಳ ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೊರಬ ತಾಲ್ಲೂಕು ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಾಯ ಇವರ ಸಹಭಾಗಿತ್ವದಲ್ಲಿ “ನಮ್ಮೂರು – ನಮ್ಮಕೆರೆ” ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದೆ “ಕೆಂಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮ” ವು ದಿನಾಂಕ: 07.08.2017 ರಂದು ಜರುಗಿತು.
ಉಡುಪಿ ತಾಲೂಕಿನ ಮಾರ್ಪಳ್ಳಿ ಗ್ರಾಮದಲ್ಲಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ದೇವರ ಕಾಡಿಗೆ ನಾಟಿ ಮಾಡುವುದರ ಮುಖೇನ ರಾಜ್ಯದ ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ,ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದಲ್ಲಿ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಬೀಜದುಂಡೆ ವಿತರಣೆ ಮತ್ತು ಸಸಿ ನಾಟಿ ಕಾರ್ಯಕ್ರಮವನ್ನು ನೆರವೇರಿ ಕೊಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದಿನಾಂಕ 22.07.2017 ಶನಿವಾರದಂದು ಪೂರ್ವಾಹ್ನ 10.00 ಗಂಟೆಗೆ ರಾಜ್ಯ ಮಟ್ಟದ ಅರಣ್ಯ ಸಂವರ್ಧನಾ ಅಭಿಯಾನ ಮತ್ತು ಶಾಲಾವನ ನಾಟಿ ಕಾರ್ಯಕ್ರಮದ ಉದ್ಗಾಟನೆ ನಡೆಯಲಿದೆ.
ಮೊಳಕೆಯೊಡೆದು ಗಿಡಗಳಾಗಿವೆ ಲಕ್ಷಾಂತರ ಬೀಜದುಂಡೆಗಳು : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಬೀಜದುಂಡೆಗಳನ್ನು ತಯಾರಿಸಿ ಬಿತ್ತುವ ಮೂಲಕ ಬೀಜದುಂಡೆ ಅಭಿಯಾನವನ್ನೇ ಧಾರವಾಡ ಪ್ರಾದೇಶಿಕ ವ್ಯಾಪ್ತಿಯಾದ್ಯಂತ ನಡೆಸಲಾಗಿತ್ತು.
ಉತ್ತರ ಕರ್ನಾಟಕ ಭಾಗಗಳಲ್ಲಿ ಗೇರು ಗಿಡಗಳ ನಾಟಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ. ‘ವೃಕ್ಷರಕ್ಷಾ ವಿಶ್ವ ರಕ್ಷಾ’ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಕಾದಲಗಾ ಗ್ರಾಮದ ಅನುರಾಧಾ ಅರುಣ ಘಾಡಿ ಹಾಗೂ ಗಂಗಾವಳಿ ಗ್ರಾಮದ ಪರಶುರಾಮ ವಿಠ್ಠಲ್ ಗೊಧೋಳಕರ್ ಇವರ ಜಮೀನಿನಲ್ಲಿ ಗೇರು ಗಿಡಗಳನ್ನು ನಾಟಿ.
ಜಯದೇವ ವೀರಶೈವ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ (ರಿ), ನೆಲಮಂಗಲ ಮತ್ತು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಇವರ ವತಿಯಿಂದ ಆಯೋಜಿಸಿದ “ಸ್ವಚ್ಛ ಪರಿಸರದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ” ಅರಿವು ಕಾರ್ಯಗಾರ ಉದ್ಘಾಟಿಸಿ ಶ್ರೀಮತಿ ಶ್ರದ್ಧಾ ಅಮಿತ್ರವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ಮುಡಾರು ಬಿ ಪ್ರಗತಿಬಂಧು ಒಕ್ಕೂಟದ ಜಂಟಿ ಆಶ್ರಯದಲ್ಲಿ ಸೇವಾಪ್ರತಿನಿಧಿ ಪ್ರಭಾರವರ ಮನೆಯಲ್ಲಿ ಮಳೆಕೊಯ್ಲು -ಬಾವಿಗೆ ನೀರಿಂಗಿಸುವ ಕಾರ್ಯಕ್ರಮವನ್ನು ದಿನಾಂಕ 02.07.17 ರಂದು ನಡೆಸಲಾಯಿತು