ಮಹಿಳಾ ಸಬಲೀಕರಣ ಡಿಪ್ಲೋಮಾ ತರಬೇತಿಯ ಉದ್ಘಾಟನಾ ಸಮಾರಂಭ
Posted onಮಹಿಳೆಯರಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಆಶಾಕಿರಣ ಮೂಡಿಸುತ್ತಿದೆ – ಡಾ.ಪ್ರಕಾಶ್ ಭಟ್
ಮಹಿಳೆಯರಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಆಶಾಕಿರಣ ಮೂಡಿಸುತ್ತಿದೆ – ಡಾ.ಪ್ರಕಾಶ್ ಭಟ್
ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ನವೆಂಬರ್-2017. ಹಿರಿಯೂರು ತಂಪು ಪಾನೀಯ ಮತ್ತು ಹಣ್ಣಿನ ಜಾಮ್ ತಯಾರಿಕಾ ತರಬೇತಿ, ಹೀಗೆ ಇನ್ನಿತರ ಕಾರ್ಯಕ್ರಮಗಳ ವರದಿ.
ಅಕ್ಟೋಬರ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಗಳು.
ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತುರುಗನೂರು ಗ್ರಾಮ, ತಿ.ನರಸೀಪುರ ತಾಲೂಕಿನಲ್ಲಿ 16.10.2017ರಂದು ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯ ಮೈಸೂರು ಜಿಲ್ಲಾ ಕಛೇರಿಯಲ್ಲಿ ನಡೆದ ಮಕ್ಕಳ ಸಂರಕ್ಷಣೆಯ ಕುರಿತು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪುತ್ರಿಯಾದ ಶ್ರದ್ಧಾ ಅಮಿತ್ರವರು ಉದ್ಘಾಟಿಸಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ 5 ಕೇಂದ್ರಗಳಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ.ನಂಜನಗೂಡು ತಾಲ್ಲೂಕಿನಲ್ಲಿ ದಿನಾಂಕ 14.08.2017 ರಂದು ಕಳಲೆ ಜ್ಞಾನವಿಕಾಸ ಕೇಂದ್ರದಲ್ಲಿ ಹಾಗೂ ದೇವಿರಮ್ಮನಹಳ್ಳಿ ವಲಯದ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಎರಡು ಕೇಂದ್ರದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಆಗಷ್ಟ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ.ಶಿಕಾರಿಪುರ ಯೋಜನಾ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಬಿ.ಪಿ. ಮತ್ತು ಶುಗರ್ ಕಾಯಿಲೆಯ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬಂದಿರುತ್ತದೆ.
ಬಾಗಲಕೋಟ ತಾಲೂಕಿನ ಚಿಕ್ಕಶೆಲ್ಲಿಕೇರಿ ಗ್ರಾಮದ ಪಡಿ ಮಲ್ಲೆಶ್ವರ ದೇವಸ್ಥಾನ ಸಭಾ ಭವನದಲ್ಲಿ ಒಕ್ಕೂಟ ಪದ ಗ್ರಹಣ ಮತ್ತು ಮಹಿಳಾ ಜ್ಞಾನ ವಿಕಾಸ ವಿಚಾರ ಗೋಷ್ಠಿ ಕಾರ್ಯಕ್ರಮ. ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಎಸ್. ಜಿ. ಮೋರೆ ಆರ್ಥಿಕ ಸಾಕ್ಷರತಾ ಸಲಹೆಗಾರರು ಮಾಹಿತಿ ನೀಡಿದರು.
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಸುದ್ದಿಗಳು. ಕಾರ್ಕಳ ಕೆಸರ್ದ ಗೊಬ್ಬು ಕಾರ್ಯಕ್ರಮ. ಯಲಬುರ್ಗಾ ಕಲ್ಲೂರು ಕಾರ್ಯಕ್ಷೇತ್ರ ವರಮಹಾಲಕ್ಷ್ಮಿ ಪೂಜಾ.
“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ.