ಕಸೂತಿ ಕೌಶಲ್ಯ ತಂದಿತು ಆರ್ಥಿಕ ಸಾಫಲ್ಯ

Posted on 1 CommentPosted in success story, Women Empowerment

ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.

ಹೈನುಗಾರಿಕೆ: ಸ್ಮಶಾನವೂ ಸೈ, ನಗರಕ್ಕೂ ಜೈ

Posted on Posted in Agriculture, success story, Women Empowerment

ಧಾರವಾಡದ ಮಹಾಂತನಗರದ ಶಿವಕ್ಕ ಕಟ್ಟೂರಮಠ ಸ್ಮಶಾನದ ಆವರಣದಲ್ಲೇ ಹೈನುಗಾರಿಕೆ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಬೈಲಹೊಂಗಲದ ವಿದ್ಯಾನಗರದ ನಿವಾಸಿ ಸರಳ ಬೂದಿಹಾಳ ನಗರವಾದರೆ ಏನಂತೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಹೈನೋದ್ಯಮ ಆರಂಭಿಸಿ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

ಜ್ಞಾನವಿಕಾಸ ಕಾರ್ಯಕ್ರಮ ತಂದ ಧೈರ್ಯ

Posted on Posted in success story, Women Empowerment

ಜ್ಞಾನವಿಕಾಸ ಸಾವಿರಾರು ಮಹಿಳೆಯರ ಬದುಕನ್ನೇ ಬದಲಿಸಿದೆ ಎನ್ನುವುದು ಹೊಸ ವಿಷಯವಲ್ಲ. ಅದು ಹೇಗೆ ಎಂದು ಕಾರಣ ಹುಡುಕುತ್ತಾ ಹೊರಟರೆ, ಕಾರ್ಯಕ್ರಮದ ಹಲವು ಮಗ್ಗುಲುಗಳ ಪರಿಚಯವಾಗುತ್ತದೆ. ಸಂಸಾರವಷ್ಟೇ ಸಾಕು ಎಂದು ತಮ್ಮಷ್ಟಕ್ಕೆ ತಾವಿದ್ದ ಹಲವು ಮಹಿಳೆಯರಿಕೆ ಆತ್ಮವಿಶ್ವಾಸ ತುಂಬಿದ ಈ ಕಾರ್ಯಕ್ರಮ ಅವರಿಂದ ಹಲವು ಸಾಧನೆಗಳನ್ನು ಮಾಡಿಸಿದೆ. ಬೆಂಗಳೂರಿನ ಗೀತಾ ಮತ್ತು ಮಂಗಳೂರಿನ ಭವಾನಿಯವರ ಯಶೋಗಾಥೆಗಳು ಸ್ತ್ರೀ ಸಾಮಥ್ರ್ಯ ಮತ್ತು ಜ್ಞಾನವಿಕಾಸ ಒದಗಿಸುವ ಅವಕಾಶಗಳಿಗೆ ನಿದರ್ಶನಗಳಷ್ಟೆ…

ಬದುಕು ಕಟ್ಟಿಕೊಟ್ಟ ಗ್ಯಾಸ್ ಸ್ಟೋವ್, ಬಟ್ಟೆ ವ್ಯಾಪಾರ

Posted on Posted in success story

ಸ್ವ-ಉದ್ಯೋಗ ಮಾಡಬೇಕೆಂದರೆ ಮಾರ್ಗಗಳು ಹಲವು. ಗ್ರಾಮಾಭಿವೃದ್ಧಿ ಯೋಜನೆಯೂ ಇಂತವರಿಗೆ ಮಾರ್ಗದರ್ಶನ, ಹಣಕಾಸಿನ ನೆರವು ಒದಗಿಸಲು ಸದಾ ಸಿದ್ಧ. ಪ್ರಗತಿನಿಧಿ ಪಡೆದು ಗ್ಯಾಸ್ ಏಜೆನ್ಸಿ ಆರಂಭಿಸಿದ ಜಯಪ್ರದಾ ಹಾಗೂ ಬಟ್ಟೆ ವ್ಯಾಪಾರ ಮಾಡಿ ಬದುಕು ಹಸನು ಮಾಡಿಕೊಂಡ ಪುಷ್ಪಲತಾ ಎಂಬ ಇಬ್ಬರು ದಿಟ್ಟ ಮಹಿಳೆಯರ ಯಶೋಗಾಥೆ ಇಲ್ಲಿದೆ.