ಕುಷ್ಠ ರೋಗಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
Posted onಯಾದಗಿರಿ ತಾಲ್ಲೂಕಿನ ಚಿರಂಜೀವಿ ನಗರ ಸಮೀಪವಿರುವ ಕುಷ್ಠರೋಗಿ ಕಾಲೊನಿಯಲ್ಲಿ ವಾಸವಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿತರಿಸಲಾಯಿತು. ಕಾಲೊನಿಯಲ್ಲಿ ಒಟ್ಟು ಹನ್ನೆರಡು ಕುಟುಂಬಗಳು ವಾಸವಾಗಿದ್ದು ಹೆಚ್ಚಿನ ಕುಟುಂಬಗಳು ಭಿಕ್ಷೆ ಬೇಡಿ ಹೊತ್ತಿನ ಊಟ ಗಳಿಸಿಕೊಳ್ಳುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದ್ದರಿಂದ ಜನರ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಶ್ರದ್ಧಾ ಕೇಂದ್ರಗಳಿಗೆ ಜನರು ಬಾರದೇ ಕುಷ್ಠರೋಗಿಗಳ ಭಿಕ್ಷಾಪಾತ್ರೆ ಬರಿದಾಗಿಯೇ ಉಳಿದಿತ್ತು . ದೇವಸ್ಥಾನಕ್ಕೆ ಬಂದವರು ನೀಡುವ ಹಣ್ಣು […]