ಮುಸ್ಸಂಜೆ ಹೋತ್ತಲಿ ರಸ್ತೆ ಬದಿಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು ಮಾರುವುದನ್ನು ನೋಡಿ ಯಾರಿಗಾದರು ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾನಿಪೂರಿ, ಗೋಬಿ ಮಂಚುರಿ, ಚೈನಿಸ್ ಫುಡ್ಗಳ ಅತೀಯಾದ ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಹೇಳಿದರು ಕೂಡಾ ಬಾಯಿಯ ಚಪಲಕ್ಕೆ ಇವು ಬೇಕೆ ಬೇಕು, ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಹೆಸರಿನಿಂದ ತಿಂಡಿತಿನಿಸುಗಳನ್ನು ಕರೆಯುವುದನ್ನು ಕಾಣುತ್ತೆವೆ. ಚುರುಮುರಿಗೆ ಮಂಡಕ್ಕಿ, ಪೂರಿ ಎಂಬ ಹೆಸರಿನಿಂದ ವಿವಿದ ಪ್ರದೇಶಗಳಲ್ಲಿ ಕರೆಯುತ್ತಾರೆ, ಚುರುಮರಿಯಿಂದ ತಯಾರಿಸುವ ತಿಂಡಿಗಳಲ್ಲಿ ವಿಶಿಸ್ಟವಾದವುಗಳೆಂದರೆ ಗಿಮರ್ಿಟ್ಟಿ, ಒಗ್ಗರಣೆ ಚುರುಮುರಿ, ಖಾರಾಮಂಡಕ್ಕಿ, ಡಾಣಿಚುರುಮರಿ, ಈ ತಿನಿಸುಗಳು ಉತ್ತರ ಕನರ್ಾಟಕ ಭಾಗದ ಮನೆಗಳಲ್ಲಿ ವಾರದಲ್ಲಿ ಒಮ್ಮೆಯಾದರು ಇರಲೇಬೇಕು, ಓಣಿಯಲ್ಲಿ ಹೋಗುವಾಗ ಈ ತಿನಿಸುಗಳ ವಾಸನೆ ಗಂಮ್ ಎಂದು ಮೂಗಿಗೆ ಬರದೆ ಇರದು, ಅಸ್ಟೋಂದು ಪ್ರಚಲಿತವಾದುದು ಈ ಚುರುಮುರಿ ತಿನಿಸು, ಚುರುಮುರಿಗೆ ಚೌಚೌಮಂಡಕ್ಕಿ ಎಂಬ ಹೆಸರಿನಿಂದ ಚಿತ್ರದುರ್ಗಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೇರೆ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ಕರೆಯುತ್ತಾರೆ.
ಇಲ್ಲಿ ಮುಂಜಾನೆ ಚಹಾ,ಕಾಫಿ ಜೊತೆಗೆ ಚೌಚೌಮಂಡಕ್ಕಿ ಸೇವಿಸಲು ಪ್ರಾರಂಭವಾದರೆ ಹಸಿವೆಯಾದಾಗ, ಸಂಜೆ ಹೋತ್ತಲ್ಲಿ ಮನೆಗೆ ನೆಂಟರು ಬಂದರೆ ಧೀಡಿರನೆ ಮಾಡಿ ಕೂಡುವುದೇ ಈ ಚೌಚೌ ಮಂಡಕ್ಕಿ, ಯಾಕೆ ಹೀಗೆ ಕರಯುತ್ತಾರೆಂದರೆ ಹುಬ್ಬಳ್ಳಿಯ ಗಿಮರ್ಿಟ್ಟಿ ಹೆಸರಿನಂತೆ ಅಂದರೆ ಮಂಡಕ್ಕಿ ಮತ್ತು ಮಂಡಕ್ಕಿಗೆ ಬೇಕಾದ ಮಸಾಲೆ ಒಗ್ಗರಣೆಯನ್ನು ಒಂದು ದುಂಡಗಿನ ಪಾತ್ರೆಯಲ್ಲಿ ಹಾಕಿ ಗೀರ ಗೀರನೆ ಚಮಚದಿಂದ ತಿರುಗಿಸಿ ತಟ್ಟೆಯಲ್ಲಿ ಹಾಕಿ ಮೇಲೆ ಸಣ್ಣದಾಗಿ ಹೆಚ್ಚಿದ ಟೊಮೆಟೊ, ಈರುಳ್ಳಿ, ಕೋತ್ತಂಬರಿ ಸೊಪ್ಪು ಸ್ವಲ್ಪ ಪುಟಾಣಿ ಹಿಟ್ಟು ಉದುರಿಸಿ ಕೊಡುವುದರಿಂದ ಗೀರ್ರಮಿಟ್ಟಿ ಎಂದು ಕರೆಯುವಂತೆ ಇಲ್ಲಿ ಖಾರಮಂಡಕ್ಕಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಒಣ ಕೊಬ್ಬರಿ, ಸಣ್ಣದಾಗಿ ಹೆಚ್ಚಿದ ಕೋತ್ತಂಬರಿಸೊಪ್ಪು, ಮೇಲೆ ಒಂದಿಸ್ಟು ಮಿಸ್ಚರ್ ಖಾರ (ಡಾಣಿ)ಹಾಕಿ ತಯಾರಿಸಲಾಗುತ್ತದೆ, ಇದು ನೋಡಲು ಚಂದವಾಗಿ ಸವಿಯಲು ಸ್ವಾಧಿಸ್ಟವಾಗಿರುವುದರಿಂದ ಇದಕ್ಕೆ ಚೌಚೌಮಂಡಕ್ಕಿ ಎಂದು ಹೆಸರು.
ಈ ರೀತಿಯ ಮಂಡಕ್ಕಿ ಅಂಗಡಿಗಳು ಚಳ್ಳಕೆರೆಯಲ್ಲಿ ಸಾಕಸ್ಟು ಇರುವುದನ್ನು ಕಾಣುತ್ತೆವೆ. ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಕ್ಕುತ್ತವೆ. ಅವರ ಸಂಸಾರ ನಡೆಯುವುದೆ ಈ ವ್ಯಾಪಾರದಿಂದ, ಇಂತಹ ವ್ಯಾಪಾರಿಗಳಲ್ಲಿ ಶ್ರೀಮತಿ ಸವಿತಾ ರವರು ವಿಶಿಸ್ಟ ಸಾಧನೆ ಮಾಡಿದ್ದನ್ನು ನಾವು ಗಮನಿಸಲೇ ಬೇಕು, ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಶ್ರೀಮತಿ ಸವಿತಾ ಪತಿಯೊಂದಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು ಸ್ಥಳಿಯವಾಗಿ ಮತ್ತು ಹೊರ ಜಿಲ್ಲೆಗಳಲ್ಲೂ ಮದುವೆ, ಹಾಗೂ ಶುಭ ಸಮಾರಂಭಗಳಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು, ಆದರೆ ಇದು ಸೀಮಿತ ತಿಂಗಳುಗಳಲ್ಲಿ ಮಾತ್ರ ಇರುತ್ತಿತ್ತು. ಮನೆಯ ನಿರ್ವಹಣೆಗೆ ಮಕ್ಕಳ ವ್ಯಾಸಾಂಗಕ್ಕೆ ಹಣದ ಅಡಚಣೆ ಆಗುತ್ತಿತ್ತು. ಮೂರು ಜನ ಹೆಣ್ಣು ಮಕ್ಕಳಿದ್ದು ಮಕ್ಕಳನ್ನು ಬೆಳೆಸುವುದು ಕುಟುಂಬವನ್ನು ಸಾಗಿಸುವುದು ಕಸ್ಟಕರವಾಗಿತ್ತು, ಪತಿಯೊಂದಿಗೆ ಕ್ಯಾಟರಿಂಗ್ ಕೆಲಸ ಬಿಟ್ಟು ಒಬ್ಬರೆ ಬೇರೆ ಕೆಲಸ ಮಾಡುವುದು ಸವಿತಾರಿಗೆ ಗೋತ್ತಿರಲಿಲ್ಲ. ಮನೆ ಬಿಟ್ಟು ಒಬ್ಬರೆ ಹೊರಗಡೆ ಹೊಗದವರು ಯೋಜನೆ ಪ್ರಾರಂಭವಾದ ಹೊಸತರಲ್ಲಿ ಓಣಿಯ ಸದಸ್ಯರೊಟ್ಟಿಗೆ ಇವರು ಸಂಘದಲ್ಲಿ ಸೆರ್ಪಡೆ ಗೊಂಡರು, ಪ್ರತಿವಾರ ವಾರದಸಭೆ, ಒಕ್ಕೂಟಸಭೆ, ಜ್ಞಾನವಿಕಾಸ ಮಾಸಿಕ ಕೇಂದ್ರ ಸಭೆಯಲ್ಲಿ ಪಾಲ್ಗೊಂಡು ಯೋಜನೆಯ ಕಾರ್ಯಕ್ರಮಗಳು, ಶಿಸ್ತುಬದ್ಧ ವ್ಯವಹಾರ, ದೈರ್ಯ, ಆತ್ಮವಿಶ್ವಾಸಗಳನ್ನು ಮೈಗೂಡಿಸಿಕೊಂಡರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಲ್ಲಿ ಸೇರಿದ ಮೇಲೆ ಉಳಿತಾಯ, ಸಾಲದ ವ್ಯವಹಾರಗಳು ಸವಿತಾರವರಿಗೆ ತಿಳಿಯ ತೋಡಗಿದವು, ಪ್ರಥಮ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಸ್ವ ಉದ್ಯೊಗ ಮಾಡಬೇಕೆಂಬ ನಿಧರ್ಾರ ಮಾಡಿ 5000,ರೂ ಸಾಲ ಪಡೆದು ಸಣ್ಣ ಪ್ರಮಾಣದ ಹೊಟೆಲ್ ಪ್ರಾರಂಭಿಸಿದರು. ಪತಿಗೆ ಕ್ಯಾಟರಿಂಗ್ ಕೆಲಸದಲ್ಲಿ ಸಹಾಯ ಮಾಡಿ ಗೂತ್ತಿತ್ತೆ ವಿನಹ ವ್ಯವಹಾರವಲ್ಲ. ಇಂದರಿಂದಾಗಿ ಆದಾಯಕ್ಕಿಂತ ಖಚರ್ು ಹೆಚ್ಚಾಗಿ ಹೊಟೆಲ್ ಉದ್ಯಮ ಲಾಭ ತರಲಿಲ್ಲವಾದ್ದರಿಂದ ಅದನ್ನು ಸ್ಥಗಿತಗೊಳಿಸಿದರು, ಆದರೆ ಏನಾದರು ಮಾಡಬೇಕೆಂಬ ಹಂಬಲದಿಂದ ಮತ್ತೆ ಸಂಘದಲ್ಲಿ ಎರಡನೆ ಸಾಲವಾಗಿ 20.000,ರೂ ಸಾಲ ಪಡೆದು ಬೇಕರಿ ಮತ್ತು ಚಹಾ ಅಂಗಡಿಯನ್ನು “ಕಳೆದುಕೊಂಡಲ್ಲಿಯೇ ಹುಡುಕಿ“ ಎಂಬ ಗಾದೆಯಂತೆ ಅದೇ ಸ್ಥಳದಲ್ಲಿ ಪ್ರಾರಂಭಿಸಿದರು. ಮಾರುಕಟ್ಟೆಗೆ ಹತ್ತಿರವಾದರಿಂದ ಹೆಚ್ಚು ಜನರು ಇವರ ಅಂಗಡಿಗೆ ಬರಲು ಪ್ರಾರಂಭಿಸಿದರು, ಇವರು ತಯಾರಿಸುವ ಚೌಚೌ ಮಂಡಕ್ಕಿ ಮೆಣಸಿನಕಾಯಿ ಮಿಚರ್ಿಗೆ ತುಂಬಾನೆ ಬೇಡಿಕೆ, ಮಾಡುವ ವಿಧಾನ ಸ್ವಾದಿಸ್ಟತೆಗೆ ಎಲ್ಲರು ಇಲ್ಲಿಯೇ ಆಗಮಿಸುತ್ತಾರೆ.
ಗಿರಾಕಿಗಳೊಂದಿಗೆ ವ್ಯವಹರಿಸುವ ಬಗೆ, ಮಾತನಾಡುವ ಕೌಶಲ್ಯ, ಗಿರಾಕಿಗಳ ಬೇಡಿಕೆಗೆ ತಕ್ಕಂತೆ ತಯಾರಿಸುವ ಸಿಹಿ ತಿಂಡಿ-ತಿನಿಸುಗಳಿಂದಾಗಿ ಸವಿತಾರವರ ಬೇಕರಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಇವರ ಪತಿ ಬಿಡುವಿನ ಸಮಯದಲ್ಲಿ ಸಹಾಯ ಮಾಡುವುದರ ಜೊತೆಗೆ ಕ್ಯಾಟರಿಂಗ್ ಕೆಲಸದ ಸಾಮಗ್ರಿಗಳನ್ನು ಬೇಕರಿಯ ಪಕ್ಕದ ಅಂಗಡಿಯಲ್ಲಿ ಇಟ್ಟು ಅಲ್ಲಿಯೇ ತಮ್ಮ ಕೆಲಸ ಮಾಡುವದರಿಂದ ಸವಿತಾರವರಿಗೆ ಅನುಕೂಲವಾಗಿದೆ, ಹಾಗೂ ಬೇಕರಿಗೆ ಬರುವ ಗಿರಾಕಿಗಳು ಇವರು ಕ್ಯಾಟರಿಂಗ್ ಮಾಡುವುದನ್ನು ವಿಕ್ಷೀಸಿ ತಮ್ಮ ಮನೆಯ ಅಥವಾ ಪರಿಚಯಸ್ಥರಿಗೆ ಇವರ ಕ್ಯಾಟರಿಂಗ್ ಪರಿಚಯಿಸುವುದರಿಂದ ಎರಡು ಉದ್ಯಮಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ತಮ್ಮ ಸಂಘದಲ್ಲಿನ ಸಾಲ ಮರುಪಾವತಿ ಮಾಡಿಕೊಂಡು ಇವರ ಪರಿಶ್ರಮದ ಫಲವಾಗಿ ಪತಿಯ ಕ್ಯಾಟರಿಂಗ್ ಕೆಲಸ ಹಾಗೂ ಇವರ ಬೇಕರಿ ಆದಯದಲ್ಲಿ ಉಳಿತಾಯ ಮಾಡಿ ತಮ್ಮ ಸ್ವಂತ ಜಾಗದಲ್ಲಿ ಆರು ಹೂಸ ಮನೆ ರಚನೆ ಮಾಡಿ ಬಾಡಿಗಿಗೆ ನೀಡಿರುತ್ತಾರೆ, ಮೂರು ಜನ ಹೆಣ್ಣು ಮಕ್ಕಳಿರುವ ಸವಿತಾ ದಂಪತಿಗಳು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವಲ್ಲಿ ಹೆಚ್ಚು ಕಾಳಜಿ ತೋರಿಸುತ್ತಾರೆ.
ಹೀಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಲ್ಲಿ ಸೇರಿದ ಮೇಲೆ ವ್ಯವಹಾರ ಜ್ಞಾನ, ಮಾತುಗಾರಿಕೆ, ಸಮಯವನ್ನು ವ್ಯರ್ಥ ಮಾಡದೆ ಸದಾ ಕ್ರಿಯಾಶೀಲರಾಗಿರುವುದುನ್ನು ಅಳವಡಿಸಿಕೊಂಡು ಸಾಮರಸ್ಯೆದೊಂದಿಗೆ ತಮ್ಮ ಸುಂದರ ಜೀವನ ನಿರ್ವಹಣೆಗಾಗಿ ಒಟ್ಟಾಗಿ ದುಡಿದು ಸಮನಾಗಿ ಜೀವನ ನಡೆಸಿಕೊಂಡು ಹೊಗುವುದೆ ದಾಂಪತ್ಯೆ, ಎಂಬುದನ್ನು ಇತರರಿಗೂ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ. ಕೇವಲ ಪುರುಷ ದುಡಿದರೆ ಸಾಲದು ಪತಿಗೆ ಸಹಾಯವಾಗಲು ಮನೆಯ ಖಚರ್ು ಸಮನಾಗಿ ನಿರ್ವಹಿಸಲು ಇಬ್ಬರು ದುಡಿದರೆ ಕುಟುಂಬದ ಆಥರ್ಿಕ ಮಟ್ಟವನ್ನು ಉತ್ತಮ ಪಡಿಸಲು ಸಾಧ್ಯವೆಂದು ಶ್ರೀಮತಿ ಸವಿತಾ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಹಾಗೂ ಯೋಜನೆಗೆ ಸೇರಿದ ಮೇಲೆ ಸ್ವಾವಲಂಬಿಗಳಾಗಿ ದುಡಿಯುವದನ್ನು ಕಲಿತಿರುವದಾಗಿ ತಮ್ಮಂತೆ ಇತರರು ಕೂಡಾ ಉತ್ತಮ ಕೆಲಸ ಮಾಡಿ ನೆಮ್ಮದಿಯ ಜೀವನ ನಡೆಸಬೇಕೆಂಬುದೆ ಇವರ ಆಶಚಿು.