success storyUncategorized

ವಿಜಯದ ಹಾದಿಯಲ್ಲಿ ವಿಜಯಲಕ್ಮ್ಷೀ

1

ವಿವಾಹ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದಘಟ್ಟ. ಮೊದಲೇ ಯಾರು ಯಾರಿಗೆ ಎಂಬುದು ನಿರ್ಧರಿತವಾಗಿರುತ್ತದೆಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಹೆಣ್ಣು ತನ್ನನ್ನು ವರಿಸುವವನಿಗೆ ಯಾವುದೇ ದುಶ್ಚಟಗಳಿರಬಾರದೆಂದು. ಒಳ್ಳೆಯ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆಂದು ಕಂಡಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಇವರ ಇಷ್ಟಕ್ಕೆ ವಿರುದ್ದವಾಗಿಏನಾದರು ಪತಿ ಸಿಕ್ಕರೆ ಜೀವನವೇ ನರಕವೆಂಬಂತೆ ಭಾಸವಾಗುತ್ತದೆ. ಆದರೆ ಅದೇ ಜೀವನವನ್ನು ಪ್ರಯತ್ನ ಮಾಡಿ ಸಾರ್ಥಕತೆಗೊಳಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ಅಂತದೊಂದು ಪ್ರಯತ್ನ ಮಾಡಿ ನೆಮ್ಮದಿಯ ನೆಲೆ ಕಂಡುಕೊಂಡ ಮಹಿಳೆ ನೂಲ್ವಿಗ್ರಾಮದ ಶ್ರೀಮತಿ ವಿಜಯಲಕ್ಷ್ಮೀ ಡೊಂಗರಗಾಮಿಯೊಬ್ಬರು.

ತಾಯಿ ತರಕಾರಿ ವ್ಯಾಪಾರ ಮಾಡಿ ಬಂದ ಹಣದಿಂದಇಬ್ಬರು ಹೆಣ್ಣು ಮಕ್ಕಳ ಮದುವೆಮಾಡಿಕೊಟ್ಟರು. ಮೊದಲನೆ ಮಗಳ ಗಂಡ ಎರಡು ಹೆಣ್ಣುಮಕ್ಕಳನ್ನು ನೀಡಿ ಇವತ್ತಿನವರೆಗೆ ಎಲ್ಲಿದ್ದಾನೆಂಬುದೇ ತಿಳಿದಿಲ್ಲ. ಎರಡೆನೆಯವಳಾದ ವಿಜಯಲಕ್ಷ್ಮೀಯನ್ನು ಬೆಳಗಾವಿ ಜಿಲ್ಲೆಯ ವರನಿಗೆ ಮದುವೆ ಮಾಡಿಕೊಟ್ಟರು. ಪತಿ ದಿನಾಲು ಕುಡಿದು ಮನೆಗೆ ಬರುತ್ತಿದ್ದ ವೈವಾಹಿಕ ಜೀವನದ ಬಗ್ಗೆ ಸುಂದರಕಲ್ಪನೆಇಟ್ಟುಕೊಂಡಿದ್ದ ವಿಜಯಲಕ್ಷ್ಮೀಗೆ ಜೀವನದ ಬಗ್ಗೆ ಜಿಗುಪ್ಸೆಉಂಟಾಯಿತು. ಜೀವನವೇ ಬೇಡವೆಂದು ಹೂರಟ ವಿಜಯಲಕ್ಷ್ಮೀಯನ್ನುತವರು ಮನೆಯವರು ಮರಳಿ ತವರೂರಾದ ನೂಲ್ವಿಗೆಕರೆದುಕೂಂಡು ಬಂದರು. ಜೊತೆಗೆ ಪತಿ,ಮಗು ಕೂಡಾ ಆಗಮಿಸಿದರು. ತಾಯಿ ಮನೆಯಲ್ಲಿ ಬಡತನ ಸ್ಥಿತಿ. ಎಲ್ಲರೂ ಕೂಲಿ ಮಾಡಿದರೆ ಹೊಟ್ಟೆತುಂಬುತ್ತಿತ್ತು. ಈಗಾಗಲೇ ಅಕ್ಕ ಕೂಡಾ ಅವಳ ಮಕ್ಕಳೊಂದಿಗೆ ತವರಿನಲ್ಲಿ ವಾಸವಾಗಿದ್ದಳು. ಇಂತಹ ಸಂದರ್ಭದಲ್ಲಿತವರು ಮನೆಯವರಿಗೆ ಭಾರವಾಗಬಾರದೆಂದು ತಾವು ಕಲಿತಿದ್ದ ಬಟ್ಟೆ ಹೊಲಿಗೆಯನ್ನು ಹೊಲಿಯಲು ಪ್ರಾರಂಭಿಸಿದರು. ಇದರಿಂದ ಆದಾಯ ಹೆಚ್ಚು ಬರುತ್ತಿರಲಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಂಯೋಜಕಿ ಇವರ ತಾಯಿ ಮನೆ ಭೇಟಿ ಸಂದರ್ಭದಲ್ಲಿ ಇವರಿಗೆ ಮಾಹಿತಿ ನೀಡಿ ಸಂಘಕ್ಕೆ ಮತ್ತು ಜ್ಞಾನವಿಕಾಸ ಕಾರ್ಯಕ್ರಮಕ್ಕೆ ವಿಜಯಲಕ್ಷ್ಮೀಯನ್ನು ಸೇರಿಸಿಕೊಂಡರು. ಮಾಹಿತಿಕಾರ್ಯಕ್ರಮದಲ್ಲಿನ ವಿಷಯಗಳು ಇವರಲ್ಲಿ ಹೊಸ ಕನಸನ್ನು ರೂಪಿಸಿದವು. ನಂತರ ಮನೆಯಲ್ಲಿಯೇ ಹೊಲಿಗೆ ತರಗತಿ ಪ್ರಾರಂಬಿಸಿದರು. ಸಂಘದಲ್ಲಿ ಸಾಲ ಪಡೆದು ಹೊಲಿಗೆ ಯಂತ್ರ ಖರೀದಿಸಿದರು. 4ಹೊಲಿಗೆ ಯಂತ್ರಗಳಲ್ಲಿ ದಿನವೊಂದಕ್ಕೆ 4 ಬ್ಯಾಚ್ಗಳನ್ನು ಮಾಡಿತರಗತಿ ಪ್ರಾರಂಭಿಸಿ, ತಿಂಗಳಿಗೆ ಒಬ್ಬರಿಗೆ 300.ರೊ ಹಣ ಪಡೆದರು.

ಕಡಿಮೆ ಮೊತ್ತ ಹಾಗೂ ಹೇಳುವ ವಿಧಾನ ತರಬೇತುದಾರರಿಗೆ ಹಿಡಿಸಿದ್ದು ಹೆಚ್ಚು ಹೆಚ್ಚು ಮಹಿಳೆಯರುಇವರಲ್ಲಿ ಬರಲು ಪ್ರಾರಂಬಿಸಿದರು. ಇದರಿಂದ ತಿಂಗಳಿಗೆ 4800.ರೊ ಆದಾಯ ಹೊಂದಿ ಮನೆಖಚರ್ು ಸಾಲ ಮರುಪಾವತಿಯಲ್ಲಾಬಿಟ್ಟು ಮಾಸಿಕ1500.ರೂ ಲಾಭಾಂಶ ಪಡೆಯುತ್ತಿದ್ದಾರೆ. ಬಿಡುವಿಲ್ಲದ ಕೆಲಸದಲ್ಲಿತೊಡಗಿದ ವಿಜಯಲಕ್ಷ್ಮೀ ಜ್ಞಾನವಿಕಾಸಕಾರ್ಯಕ್ರಮದ ಸದಸ್ಯಯಾಗಿದ್ದು ಸಂಯೊಜಕಿ ಹಾಗೂ ಸಮನ್ವಯಾಧಿಕಾರಿಗಳ ಮನೆಭೇಟಿಯಿಂದಾಗಿ ಪತಿಗೂ ಕೂಡಾ ಮಾಹಿತಿ ನೀಡಿದ ಪರಿಣಾಮವಾಗಿ ಕುಡಿಯುವದನ್ನುಕಡಿಮೆ ಮಾಡಿದ್ದು ಕೂಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದಾರೆ. ವಿಜಯಲಕ್ಷ್ಮೀ ತನ್ನ ಕುಟುಂಬದೂಂದಿಗೆ ಪ್ರತ್ಯಕವಾಗಿ ವಾಸವಾಗಿದ್ದು ತಮ್ಮದೆ ಆದ ದುಡಿಮೆಯಿಂದ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ಒಬ್ಬ ಮಹಿಳೆ ಸಮಸ್ಯೆಗಳಿದ್ದಾಗಲೂ ಶ್ರಮವಹಿಸಿ ತನ್ನನ್ನುತಾನು ತೊಡಗಿಸಿಕೊಂಡರೆ ಯಾವರೀತಿ ತನ್ನಕುಟುಂಬವನ್ನು ಮುನ್ನಡೆಸಬಹುದೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಾಯಿ ತರಕಾರಿ ಹೊತ್ತು ಮಾರಿಜೀವನ ಸಾಗಿಸುತ್ತಿದ್ದು ಕಷ್ಟಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಂಡವರಾಗಿದ್ದ ಇವರು ಛಲ ಬಿಡದೆ ಪರಿವರ್ತನೆ ಹಾದಿ ಕಂಡುಕೊಂಡರು. ಜೀವನವೇ ಬೇಡವೆಂದು ಹೊರಟವಳಿಗೆ ಜೀವನದ ಬಗ್ಗೆ ಭರವಸೆ ಆಸೆ ಮೂಡಿಸಿದ್ದು ಧರ್ಮಸ್ಥಳ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ. ಇದರಿಂದಾಗಿ ತಮ್ಮಲ್ಲಿ ಆತ್ಮವಿಶ್ವಾಸ, ಧೃಡನಂಬಿಕೆ, ಬೆಳೆದು ತಮ್ಮಜೀವನಕ್ಕೊಂದು ಹೊಸ ರೂಪ ರೂಪಿಸಿಕೂಂಡಿದ್ದಾಗಿ, ಯೋಜನೆಯ ಸಂಘ ಸೇರಿದ ಮೇಲೆ ತಾಯಿಯ ಮನೆ ಕಷ್ಟಗಳು ದೂರವಾಗಿ ಮನೆ ಪರಿಸ್ಥಿತಿ ಸುಧಾರಿಸಿರುವ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟೇ ಅಲ್ಲ ತಮ್ಮ ಅಕ್ಕನಿಗೂ ಹೊಲಿಗೆ ಕಲಿಸಿ ಅವಳ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *