ಅತಿಯಾದ ರಾಸಾಯನಿಕ ಸಿಂಪಡಣೆಯಿಂದ ಮಣ್ಣು ಸತ್ವಹೀನವಾಗುತ್ತಿದ್ದು, ನಿಸರ್ಗದ ವಿರುದ್ಧ ಹೋಗುತ್ತಿರುವ ನಾವು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದೇವೆ ಎಂದು ಶ್ರೀ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಸಮಿತಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ, ಸರಕಾರಿ ಇಲಾಖೆಗಳು, ಒಕ್ಕೂಟಗಳ ಆಶ್ರಯದಲ್ಲಿ ದಿನಾಂಕ:14/12/2014 ರ ಭಾನುವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಅವರು ಮಾತನಾಡಿ, ವಿಜ್ಞಾನ ಪ್ರಕೃತಿಗೆ ಹತ್ತಿರವಾಗಬೇಕು ಆದರೆ ಅದು ಪ್ರಕೃತಿಗೆ ವ್ಯತಿರಿಕ್ತವಾಗುತ್ತಿರುವುದು ವಿಷಾದನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ, ಮದ್ಯಪಾನ ತೊರೆಯುವುದು ಇನ್ನಿತರ ಸಮಾಜಮುಖಿ ಕೆಲಸಗಳು ಆಗುತ್ತಿದೆ. ರೈತರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಕೇಂದ್ರ ಅಜ್ಜಂಪುರದಲ್ಲಿ ಸದ್ಯದಲ್ಲೇ ಆರಂಭವಾಗಲಿದ್ದು, ಹಂತ ಹಂತವಾಗಿ ತಾಲೂಕಿನ ಹಲವೆಡೆ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಕೃಷಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ, ಉತ್ಸವ ವ್ತವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ. ಶಿವಶಂಕರಪ್ಪ, ಗ್ರಾಮೀಣಾಭಿವೃದ್ಧಿಯ ಕನಸು ಮತ್ತು ಚಿಂತನೆಯನ್ನು ಸಾಕಾರಗೊಳಿಸಲು ರೂಪಿಸಿದ ಯೋಜನೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಯಾವುದೇ ಲೋಪವಿಲ್ಲದೇ ಯೋಜನೆ ಯಶಸ್ವಿಗೆ ಕಾರಣರಾದ ಧರ್ಮಸ್ಥಳ ಧಮರ್ಾಧಿಕಾರಿಗಳ ಯೋಜನೆ ಶ್ಲಾಘನೀಯವಾದದು ಎಂದರು.
ಎಪಿಎಂಸಿ ಅಧ್ಯಕ್ಷ ಗೋವಿಂದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಪಿಎಂಸಿ ಯಿಂದ ರೈತರಿಗಾಗಿ ತಾಲ್ಲೂಕಿನ ವಿವಿಧೆಡೆ ಕಣಗಳ ನಿಮರ್ಾಣ ಮತ್ತು ಉತ್ತಮ ರಸ್ತೆ ಮತ್ತಿತರ ಮೂಲ ಸೌಕರ್ಯಗಳ ನಿಮರ್ಾಣಕ್ಕೆ ಆದ್ಯತೆ ನೀಡಿದ್ದು, ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿವರ್ಾಹಕ ನಿದರ್ೇಶಕರಾದ ಡಾ||ಎಲ್.ಎಚ್. ಮಂಜುನಾಥ್ ಮಾತನಾಡಿ ಮಲೆನಾಡಿನ ಈ ಭಾಗ ಬಯಲು ಸೀಮೆಯಾಗುತ್ತಿರುವುದು ವಿಷಾಧನೀಯ. ಒಣ ಬೇಸಾಯದ ಪದ್ಧತಿ ಅಳವಡಿಕೆ ಅನಿವಾರ್ಯ ಎಂದು ಹೇಳಿದರು. ಬಹುತೇಕ ಈಗ ಹಳ್ಳಿಗಳು ಯುವಕ ಯವತಿಯರಿಲ್ಲದೇ ವ್ರದ್ಧಾಶ್ರಮಗಳಾಗಿವೆ. ಕೃಷಿ ಉದ್ಯೋಗ ಬಿಟ್ಟು ಪಟ್ಟಣಗಳಿಗೆ ಬೇರೆ ಉದ್ಯೋಗ ಅರಸಿ ಹೋಗುವ ಮಂದಿ ಹೆಚ್ಚಾಗಿದ್ದು ಈ ಪರಿಸ್ಥಿತಿಗೆ ಕಾರಣ ಎಂದು ಹೇಳಿದರು.
ತಾಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇೆಕಾಗಿದೆ. ಬಯಲು ಪ್ರದೇಶಗಳಾದ ಕೋಲಾರ, ತುಮಕೂರು ಮತ್ತಿತರ ಕಡೆಗಳಲ್ಲಿ ಹೈನುಗಾರಿಕೆ ವಹಿವಾಟು ಹೆಚ್ಚಾಗಿದ್ದು, ಅತ್ಯಧಿಕ ಲಾಭವನ್ನು ರೈತರು ಪಡೆಯುತ್ತಿದ್ದಾರೆ. ಅಡಕೆ ಬೆಳೆಗೆ ನೀಡುವ ಪ್ರಾಶಸ್ತ್ಯ ಹೈನುಗಾರಿಕೆಗೆ ನೀಡಿದರೆ ರೈತರು ಉತ್ತಮ ಲಾಭ ಕಂಡು ಕೊಳ್ಳಬಹುದು. ರಾಜ್ಯದ ಹೂವಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಧಿಕ ಬೇಡಿಕೆಯಿದ್ದು, ರೈತರಿಗೆ ಪುಪ್ಪ ಕೃಷಿಯ ಬಗ್ಗೆ ಆಸಕ್ತಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದರು. ರೈತರಿಗಾಗಿ ಕೃಷಿಗೆ ಸಂಬಂಧಪಟ್ಟ ಹಲವು ತರಬೇತಿ ಕೇಂದ್ರಗಳಿದ್ದು, ರೈತರು ಅವುಗಳ ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ತೋಟಗಾರಿಕಾ ಬೆಳೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿಂದ ಶೇ. 75ರ ಸಬ್ಸಿಡಿ ನೀಡಲಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಡಿ.ವಿ. ಪದ್ಮರಾಜ್ ಮಾತನಾಡಿ, ಸಾವಯವ ಕೃಷಿಗೆ ರೈತರು ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೂರ್ಣಕುಂಭ, ವಿವಿಧ ಜಾನಪದ ತಂಡಗಳೊಂದಿಗೆ ವೇದಿಕೆ ವರೆಗೂ ಮೆರವಣಿಗೆ ನಡೆಯಿತು. ಸುಮಾರು 70 ವಿವಿಧ ಕೃಷಿಗೆ ಸಂಬಂಧಪಟ್ಟ ಮಳಿಗೆಗಳನ್ನು ಸ್ಥಾಪಿಸಿದ್ದು, ನೂರಾರು ಸಂಖ್ಯೆಯಲ್ಲಿ ರೈತರು ವಿವಿಧ ಸಂಘ ಒಕ್ಕೂಟಗಳ ಸದಸ್ಯರು, ಸರಕಾರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಲಾಭದಾಯಕ ಹೈನುಗಾರಿಕೆ ಮಹತ್ವ ಮತ್ತು ದೇಶೀಯ ಗೋತಳಿ ಸಂರಕ್ಷಣೆ, ಲಾಭದಾಯಕ ತೋಟಗಾರಿಕೆ ಮತ್ತು ಮಿಶ್ರ ಬೆಳೆಗಳು ಮತ್ತು ಉತ್ಪತ್ತಿಯಾದ ಘನ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ಬಳಕೆ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು ನಡೆದವು.
ತಾ.ಪಂ. ಅಧ್ಯಕ್ಷೆ ಲೀಲಾವತಿ ಮಲ್ಲಿಕಾಜರ್ುನ್, ಉಪಾಧ್ಯಕ್ಷೆ ಲತಾತಮ್ಮಯ್ಯ, ಜಿ.ಪಂ. ಸದಸ್ಯರಾದ ಕೆ.ಪಿ. ಕುಮಾರ್, ಸುಧಾ ಅಮೃತೇಶ್, ಪ್ರಗತಿಪರ ಕೃಷಿಕರಾದ ಆರ್. ದೇವಾನಂದ್, ಅಸ್ಲಾಂ ಖಾನ್ ಜಿ.ಪಂ. ಮಾಜಿ ಅಧ್ಯಕ್ಷ ಕೆ. ಆರ್. ದೃವಕುಮಾರ್, ರೋಟರಿ ಅಧ್ಯಕ್ಷ ಕುಮಾರಪ್ಪ ಮತ್ತಿತರರು ಹಾಜರಿದ್ದರು.