ರಾಮದುರ್ಗ ವಲಯದ ಒಕ್ಕೂಟ ಪದಗ್ರಹಣ ಕಾರ್ಯಕ್ರಮ

Posted on Posted in News on Groups, Uncategorized

ರಾಮದುರ್ಗ:- ರಾಮದುರ್ಗ ವಲಯದ 8 ಕಾರ್ಯಕ್ಷೇತ್ರದ 8 ಒಕ್ಕೂಟ ಪದಗ್ರಹಣ ಕಾರ್ಯಕ್ರಮ ದಿನಾಂಕ 27.12.2014 ರಂದು ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಶಾಂತವೀರ ಸ್ವಾಮಿಜಿಯವರು ವಹಿಸಿದ್ದು, ಶ್ರೀ ಧರ್ಮಸ್ಥಳದ ಯೋಜನೆಯ ಪ್ರಗತಿ ಸಾಧನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುರೇಶ ಎಂ ಪತ್ತೇಪೂರ (ಪುರಸಭೆ ಅಧ್ಯಕ್ಷರು) ಇವರು ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿದರ್ೇಶಕರಾದ ಶ್ರೀ ಜಯಶಂಕರ ಶರ್ಮ ಉಪಸ್ಥಿತರಿದ್ದು, ಯೋಜನೆಯ ವವಿಧ ಅನುದಾನ ಕಾರ್ಯಕ್ರಮಗಳು ಮತ್ತು ಒಕ್ಕೂಟದ ಮಹತ್ವದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಹಾಗೂ ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿರಬೇಕು. ಸಂಘಕ್ಕೆ ಸಾವಿಲ್ಲ ಸತ್ಯಕ್ಕೆ ಸೋಲೆ ಇಲ್ಲ. & ಸಂಘಶಕ್ತಿ ಸರ್ವಶಕ್ತಿ ಮುಂತಾದ ಹಿತನುಡಿಗಳನ್ನು ನುಡಿದು, ಸಂಘಟನೆಯಲ್ಲಿ ಇದ್ದುಕೊಂಡು ತಮ್ಮ ಕುಟುಂಬ ಸದಸ್ಯರನ್ನು ದುಷ್ಚಟಗಳನ್ನು ಬಿಡಿಸಿ ಒಳ್ಳೆಯ ಮಾರ್ಗಕ್ಕೆ ತರುವಲ್ಲಿ ಶ್ರಮಿಸಬೇಕೆಂದರು. ಹಾಗೂ ಅತಿಥಿಗಳಾಗಿ ಆಗಮಿಸಿದ ಶ್ರೀ ವೆಂಕಟೇಶ ಹಿರೇರೆಡ್ಡಿ ಮಾತನಾಡುತ್ತ ವೀರ ವನಿತೆಯರು ಹುಟ್ಟಿದ ನಾಡಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಗೂ ಸಂಘದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾದ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು. ಮತ್ತು ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಶ್ರೀ ವೈ. ಪ್ರಕಾಶ ಉಪಸ್ಥಿತರಿದ್ದರು. ಮತ್ತು ಈ ಕಾರ್ಯಕ್ರದಲ್ಲಿ ಶ್ರೀ ಚೆನ್ನಬಸಪ್ಪ ಬಾಳೆಕಾಯಿ, ಪ್ರಕಾಶ ಸೂಳೆಬಾವಿ, ಶ್ರೀಮತಿ ಗಾಯತ್ರಿ ಏ ಕೊಣ್ಣೂರು, ಶಾರದಾ ಪಾಳೇಕರ, ಅಶೋಕ ಕುಲಗೋಡ, ರಮೇಶ ಜಲಗೇರಿ, ಮತ್ತು ಅನೇಕ ಊರಿನ ಗಣ್ಯರು ಉಪಸ್ಥತರಿದ್ದರು.

ಯೋಜನೆಯಿಂದ ವಿವಿಧ ಅನುದಾನಗಳಾದ ಗ್ರೀನ್ವೇ ಅಡುಗೆ ಒಲೆ, ಶಿಷ್ಯವೇತನ, ಉಚಿತವಾಗಿ ಕಾರ ಚಾಲನೆ ಪರವಾನಿಗೆ ಪತ್ರ, ಮತ್ತು ಇತ್ತಿಚಿಗೆ ರಾಮದುರ್ಗದ ಗಾಂಧಿನಗರದಲ್ಲಿ ಆಕಸ್ಮಿಕ ವಿಧ್ಯತ್ ದುರಂತದಿಂದ ಆಗಿರುವ ಮನೆ ಹಾನಿಗೆ ಪೂಜ್ಯ ಖಾವಂದರು ಕುಮಾರ ಎಮ್. ದೊಡಮನಿ ಇವರಿಗೆ ಸಹಾಯಧನವಾಗಿ ನೀಡಿದ ರೂ. 10,000/- ಮೊತ್ತವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು. 8 ಕಾರ್ಯಕ್ಷೇತ್ರದ ಒಕ್ಕೂಟಗಳ ಅಧಿಕಾರ ಹಸ್ತಾಂತರ ಕಾರ್ಯಕ್ರವನ್ನು ನಡೆಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಶಿವಲಿಂಗಯ್ಯ ಆರ್. ಹಿರೇಮಠ ಇವರು ನಡೆಸಿದರು. ವಲಯ ಮೇಲ್ವಿಚಾರಾದ ಎಮ್. ಪ್ರಶಾಂತ್ ಇವರು ಕಾರ್ಯಕ್ರಮವನ್ನು ನೀರೂಪಿಸಿದರು. ಶ್ರೀಮತಿ ಉಮಾ ಬಡಿಗೇರ ಇವರು ವಂದಿಸಿದರು.

Leave a Reply

Your email address will not be published. Required fields are marked *