ಕುಟುಂಬದಲ್ಲಿ ನಡೆಯುವ ದೈಹಿಕ & ಮಾನಸಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣೆ ಅಗತ್ಯ ಎಂದು ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಶಶಿಕಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
ಙ.ಓ.ಹೊಸಕೋಟೆ ಸಿದ್ಧಾರೂಢಾಶ್ರಮದಲ್ಲಿ ನಡೆದ ನೇತ್ರಾವತಿ ನೇತ್ರಾವತಿ ಜ್ಞಾನವಿಕಾಸ ವಾಷರ್ಿಕೋತ್ಸವವನ್ನು ಉದ್ಘಾಟಿಸಿದ ಶಶಿಕಲಾ ಅವರು ಮಹಿಳೆಯರಿಗೆ ಕುಟುಂಬದಲ್ಲಾಗುವ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಮುಕ್ತಿ ಪಡೆಯಲು ಸಕರ್ಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಪಾವಗಡ ತಾಲ್ಲೂಕಿನ ಯೋಜನಾಧಿಕಾರಿ ದಿನೇಶ್.ಹೆಚ್ ರವರು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿದ್ದು ಈ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ 27 ಲಕ್ಷ ಮಹಿಳೆಯರಿಗೆ 1,53,000 ತರಬೇತಿ ನೀಡಿದ್ದು ಕೇಂದ್ರದ ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ವಕೀಲರಾದ ರಾಮಂಜಿರವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು ಅದರ ನಿರ್ವಹಣೆ ತುಂಬಾ ಅಗತ್ಯ ಎಂದು ಹೇಳಿದರು. ಹಾಗೆ ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಅಧ್ಯಕ್ಷತೆ ವಹಿಸಿದರು. ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ಆಟೋಟ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರ ಸಾಧನಾ ವರದಿಯನ್ನು ಸೇವಾಪ್ರತಿನಿಧಿ ಪದ್ಮಾವತಿ ಮಂಡಿಸಿದರು.ಸದಸ್ಯರ ಪ್ರಾರ್ಥನೆಯೊಂದಿಗೆ ಆರಂಭದ ಕಾರ್ಯಕ್ರಮಕ್ಕೆ ಮಂಜುಳ ಸ್ವಾಗತಿಸಿದದರು. ಮೇಲ್ವಿಚಾರಕರಾದ ಜಗನ್ನಾಥಶೆಟ್ಟಿ ನಿರೂಪಿಸಿದ ಕಾರ್ಯಕ್ರಮಕ್ಕೆ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರತಿಭ.ಆರ್ ವಂದನಾರ್ಪಣೆ ಮಾಡಿದರು