News on GroupsUncategorized

Month in Review of Bellary District

: ಗ್ರಾಮ ಸಮಾಲೋಚನೆ ಸಭೆ :
ಗ್ರಾಮ ಸಮಾಲೋಚನ ಸಭೆ : ಜಿಲ್ಲೆಯಲ್ಲಿ ಒಟ್ಟು 6930 ಗ್ರಾಮಸಮಾಲೋಚನಾ ಸಭೆಗಳು ನಡೆದಿದ್ದು, ಯೋಜನೆಯ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ಮಾಡಲಾಯಿತು, ವಿವಿಧ ಗ್ರಾಮಗಳಲ್ಲಿ ಸುಮಾರು 209032 ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

: ಪ್ರಸ್ತುತ ತಿಂಗಳಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳು. :
CHSC ಉದ್ಘಾಟನಾ ಕಾರ್ಯಕ್ರಮ : ಪ್ರಸ್ತುತ ತಿಂಗಳು ಬಳ್ಳಾರಿ, ಸಿರುಗುಪ್ಪ, ಸಂಡೂರು ಮತ್ತು ಹೂವಿನಹಡಗಲಿ ತಾಲೂಕಿನಲ್ಲಿ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟ ಉದ್ಘಾಟನಾ ಕಾರ್ಯಕ್ರಮ : ಪ್ರಸ್ತುತ ತಿಂಗಳು ಹೂವಿನಹಡಗಲಿ ತಾಲೂಕಿನಲ್ಲಿ ಒಕ್ಕೂಟ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ : ಪ್ರಸ್ತುತ ತಿಂಗಳು ಹೂವಿನಹಡಗಲಿ ತಾಲೂಕಿನಲ್ಲಿ ಒಕ್ಕೂಟ ಪದಾಧಿಕಾರಿಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ರೈತ ಕ್ಷೇತ್ರ ಪಾಠ ಶಾಲೆ : ಪ್ರಸ್ತುತ ತಿಂಗಳು ಹಗರಿಬೊಮ್ಮನಹಳ್ಳಿ ತಾಲೂಕಿನ 5 ವಲಯದ ಕೃಷಿ, ಭತ್ತ, ಮಲ್ಲಿಗೆ ಮತ್ತು ಮೆಕ್ಕೆ ಜೋಳ ಕೃಷಿ ತರಬೇತಿಯ 3 ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 150 ಜನ ರೈತರು ಭಾಗವಹಿಸಿದ್ದು, ಕೃಷಿಯಲ್ಲಿ ಪ್ರಗತಿ ಸಾಧಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಅವಶ್ಯ ಮಾಹಿತಿಗಳನ್ನು ನೀಡಲಾಗಿದೆ.
ಕೃಷಿ ಅಧ್ಯಾಯನ ಪ್ರವಾಸ : ಪ್ರಸ್ತುತ ತಿಂಗಳು ಹೂವಿನಹಡಗಲಿ ತಾಲೂಕಿನಲ್ಲಿ 3 ಕೃಷಿ ಅಧ್ಯಾಯನ ಪ್ರವಾಸ ಹಮ್ಮಿಕೊಂಡಿದ್ದು, ಪ್ರವಾಸದಲ್ಲಿ 77 ಮಂದಿ ಫಲಾನುಭವಿಗಳು ಭಾಗವಹಿಸಿದ್ದರು.
ಜ್ಞಾನವಿಕಾಸ ಮಹಿಳಾ ಸಮಾವೇಶ ಕಾರ್ಯಕ್ರಮ : ಪ್ರಸ್ತುತ ತಿಂಗಳು ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಜ್ಞಾನವಿಕಾಸ ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೇವಾಪ್ರತಿನಿಧಿಗಳಿಗೆ ತರಬೇತಿ : ಪ್ರಸ್ತುತ ತಿಂಗಳು ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸೇವಾಪ್ರತಿನಿಧಿಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸೇವಾಪ್ರತಿನಿಧಿಗಳಿಗೆ ತರಬೇತಿ ನೀಡಲಾಯಿತು.
ಅನುದಾನ ವಿತರಣೆ : ಪ್ರಸ್ತುತ ತಿಂಗಳು ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕಿನಲ್ಲಿ ಅನುದಾನಗಳ ವಿತರಣೆ ಮಡಲಾಯಿತು.
ಕೃಷಿ ವಿಚಾರ ಸಂಕೀರ್ಣ : ಪ್ರಸ್ತುತ ತಿಂಗಳು ಸಂಡೂರು ಮತ್ತು ಹೂವಿನಹಡಗಲಿ ತಾಲೂಕಿನಲ್ಲಿ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ : ಪ್ರಸ್ತುತ ತಿಂಗಳು ಬಳ್ಳಾರಿ, ಹೂವಿನಹಡಗಲಿ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲಾ ವಿದ್ಯಾಥರ್ಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾಲೋನಿ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಡ್ರಮ್ ವಿತರಣೆ : ಪ್ರಸ್ತುತ ತಿಂಗಳು ಹೂವಿನಹಡಗಲಿ ತಾಲೂಕಿನ ಕೊಂಬಳಿ ವಲಯದ ಹಿರೇಮಲ್ಲನಕೆರೆ ಕಾರ್ಯಕ್ಷೇತ್ರದಲ್ಲಿ ಕಾಲೋನಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದ್ರಿ ಕಾರ್ಯಕ್ರಮದಲ್ಲಿ 20 ಮಂದಿ ಫಲಾನುಭವಿಗಳು ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯಕ್ರಮ : ಜನವರಿ 26 ರ ಗಣರಾಜ್ಯೋತ್ಸವ ದಿನದ ಅಂಗವಾಗಿ ಜಿಲ್ಲೆಯಲ್ಲಿ ಒಟ್ಟು 62 ಸ್ವಚ್ಛತಾ ಕಾಯಕ್ರಮವನ್ನು ನಡೆಸಿದ್ದು, 4940 ಜನ/ವಿದ್ಯಾಥರ್ಿಗಳು ಭಾಗವಹಿಸಿ, ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.
ಸಂಪೂರ್ಣ ಸುರಕ್ಷಾ ಕಾರ್ಯಕ್ರಮ : ಪ್ರಸ್ತುತ ತಿಂಗಳು ಜಿಲ್ಲೆಯ ಬಳ್ಳಾರಿ, ಸಂಡೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ 2015-16 ನೇ ಸಾಲಿನ ಸಂಪೂರ್ಣ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ

Leave a Reply

Your email address will not be published. Required fields are marked *