ಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್
“ಎಲ್ಲಾ ಕೆಲಸ ಮಾಡಿಟ್ಟು ಬರುವಾಗ ಸ್ವಲ್ಪ ತಡ ಆಯಿತು ಕ್ಷಮಿಸಿ” ಅಂತ ವೀಣಾ ತನ್ನ ಸಹವರ್ತಿಗಳಿಗೆ ಹೇಳಿದಳು. ಅವಳು ಮತ್ತು ಊರಿನ ಸುಮಾರು ಮೂವತ್ತು ಮಹಿಳೆಯರು ಮಹಿಳಾ ಸಂಘ ಮಾಡಿಕೊಂಡು ವಾರಕ್ಕೊಂದು ಬಾರಿ ಭಜನೆಗೆ ಸೇರುತ್ತಿದ್ದರು.”ಏನ್ರೀ ನೀವು ಮನೆಯಿಂದಲೇ ಬರ್ತಾ ಇದ್ದೀರಿ, ನಾನಾದ್ರೆ ಕಚೇರಿ ಕೆಲಸ ಮುಗಿಸಿ ಇನ್ನೂ ಮನೆಗೆ ಹೋಗ ಬೆಕಷ್ಠೆ? ನಮ್ಮ ಕಥೆ ಏನಂತ ಹೇಳ್ತೀರಿ?” ಎಂದು ಸುಮನ ನಯವಾಗಿ ಪ್ರಶ್ನೆ ಮಾಡಿದಾಗ ವೀಣಾ “ಅಯ್ಯೋ ನನ್ನ ಮಗಳು ಕಾಲೇಜಿನಿಂದ ಬರ್ತಾಳೆ. ಅವಳಿಗೆ ಬಂದ ಕೂಡಲೆ ತಿಂಡಿ ರೆಡಿ ಇರಬೆಕು, ಇಲ್ಲಾಂದ್ರೆ ರಗಳೆ ಮಾಡ್ತಾಳೆ, ಅವಳಿಗೆ ದಿನಕ್ಕೊಂದು ವೆರೆಟಿ ಆಗಬೆಕು, ಹಾಗಿದ್ರೆ ಮಾತ್ರ ತಿಂತಾಳೆ, ಇಲ್ಲಾಂದ್ರೆ ಮಾಡಿದ್ದನ್ನೂ ತಿನ್ನಲ್ಲ” ಎಂದುಉತ್ತರಿಸಿದಳು. ಇದನ್ನು ಕೇಳಿದ ಅಂಬುಜಮ್ಮ “ಅಯ್ಯೋ ಹಂಗೆಲ್ಲಾ ಮಕ್ಕಳನ್ನು ತಲೇ ಮೆಲೆ ಇಟ್ಟುಕೋ ಬೆಡಿ, ಮುಂದಕ್ಕೆ ನಿಮಗೇ ತೊಂದರೆ” ಎಂದರು.
ಇವರ ಸಂಭಾಷಣೆ ಕೇಳಿದಾಗ ಮಕ್ಕಳ ಬಗ್ಗೆ ತಮ್ಮ ಆಸೆಗಳನ್ನು, ನಿರೀಕ್ಷೆ ಗಳನ್ನು ಇಟ್ಟುಕೊಂಡಿರುವ ಹಲವಾರು ತಂದೆ ತಾಯಿಗಳ ನೆನಪಾಯಿತು.
“ನನ್ನ ಮಗಳಿಗೆ ಡ್ರೆವಿಂಗ್ ಕಲಿಸಬೆಕೂಂತ ಇದ್ದೀನಿ, ಓದಿನಲ್ಲೂ ಚೆನ್ನಾಗಿದ್ದಾಳೆ, ಇಂಜಿನಿಯರಿಂಗ್ ಮಾಡಿಸ್ಬೇಕು, ನಂತರ ಜಾಬ್ ಮಾಡಿಸ್ಬೇಕು” ಎಂದೆಲ್ಲಾ ಹೇಳುವ ಅಪ್ಪ ಅಮ್ಮ ಜೀವನದಲ್ಲಿ ಮಕ್ಕಳು ಎನೆಲ್ಲಾ ತಿಳಿದುಕೊಂಡಿರಬೆಕು ಎಂಬುದನ್ನು ತಿಳಿಸಲು ವಿಫಲರಾಗುತ್ತಾರೆ. ನಾನು ಚಿಕ್ಕವಳಿರುವಾಗ ಪಟ್ಟ ಪಾಡು ನನ್ನ ಮಕ್ಕಳು ಪಡಬಾರದು ಅವರಿಗೆ ಯಾವುದೇ ಕಷ್ಠ ಬರಬಾರದು ಎಂದು ಸಂಪೂರ್ಣ ರಕ್ಷಣೆ ಮಕ್ಕಳಿಗೆ ನೀಡುತ್ತಾರೆ.
ನಿಜವಾಗಿಯೂ ಅನುಭಾವ ಎನ್ನುವುದು ಅನುಭವಿಸಿ ಬರುವುದು. ತನ್ನನು ತಾನು ಸವಾಲುಗಳಿಗೆ ತೆರೆದುಕೊಂಡಷ್ಠು ಸವಾಲುಗಳು ನಿವಾರಣೆಯಾಗುವುದು. ಸವಾಲು ನಿವಾರಣೆ ತಂತ್ರಗಳು ಅನುಭಾವಕ್ಕೆ ಬರುವುದು. ಮಗು ಎಡವಿ ಬಿದ್ದರೆ ಒಂದು ಕ್ಷಣ ನೋವಿನಿಂದ ಅಳುವುದು ಮತ್ತು ಆ ನೋವಿನ ಅನುಭವದಿಂದ ಇನ್ನೊಮ್ಮೆ ಬೀಳದಂತೆ ಜಾಗರೂಕತೆ ಮಾಡಿಕೊಳ್ಳುವುದು. ಕಷ್ಠಗಳು, ಸುಖಗಳು, ನೋವು, ನಲಿವುಗಳು ಯಾವುದೂ ನಮ್ಮಲ್ಲಿ ಹೇಳಿ ಬರುವುದಿಲ್ಲ. ಯಾವಾಗ ಬೆಕಿದ್ದರೂ ಬಿರುಗಾಳಿಯಂತೆ ಬರಬಹುದು, ಆ ಸಂದರ್ಬದಲ್ಲಿ ಅದನ್ನು ಎದುರಿಸುವಂಥಹ ದೆರ್ಯ ಇರಬೆಕು.
“ನನ್ನ ಮಗಳಿಗೆ ಒಳ್ಳೆಯ ವರ ಬಂತು ಕಣ್ರೀ, ಹುಡುಗ ಚೆನ್ನಾಗಿದ್ದಾನೆ, ಓದಿದ್ದಾನೆ, ಒಳ್ಳೇ ಕೆಲಸ, ಕೆ ತುಂಬ ಸಂಪಾದನೆ ಮಾಡುತ್ತಾನೆ, ಒಬ್ಬನೇ ಮಗ, ಮನೆ ಸ್ವಂತ ಮಾಡಿದ್ದಾನೆ, ಇವಳು ಓದಿದ್ದಾಳೆ, ಅಲ್ಲಿ ಹೋಗಿ ಜಾಬ್ ಮಾಡಿಕೊಂಡು ಚೆನ್ನಾಗಿರ್ತಾರೆ”ಎಂದು ವಿಮಲಮ್ಮ ಹೇಳಿದಾಗ ಎಲ್ಲಾರೂ ಸಂತೋಷ ಪಟ್ಟರು. ಆದರೆ ಮದುವೆಯಾದ ಮೂರು ತಿಂಗಳಲ್ಲಿ ಮಗಳು ಹಿಂದಕ್ಕೆ ಬಂದಿದ್ದಳು|. ಕಾರಣ ಹೊಂದಾಣಿಕೆ ಆಗಲಿಲ್ಲ. ಮನೆಯಲ್ಲೇ ಇರಬೆಕು, ಹೊರಗಡೆ ಎಲ್ಲೂ ಹೋಗುವಂತಿಲ್ಲ, ತಿರುಗಾಟಕ್ಕೆ ಕರೆದುಕೊಂಡು ಹೋಗೋದಿಲ್ಲ, ಕೆಲಸಕ್ಕೆ ಸಹಾಯ ಮಾಡೋದಿಲ್ಲಾ, ಅಡುಗೆನೇ ಮಾಡಬೆಕು, ಹೊರಗಡೆ ಕರೆದುಕೊಂಡು ಹೋಗುವುದಿಲ್ಲ, ಈ ರೀತಿಯಾದ ಕಾರಣಗಳು. ಇಲ್ಲಿ ಏನಾಗಿದೆ ಎಂದರೆ ವರನ ಆಸ್ತಿ ಪಾಸ್ತಿ, ಸಂಪಾದನೆ ಜೊತೆ ಹೊಂದಾಣಿಕೆ ಮಾತ್ರ ಆಗಿದೆ ಅಲ್ಲದೆ ವದು ವರರ ಹ್ರದಯದಲ್ಲಿ ಹೊಂದಾಣಿಕೆ ಆಗಿರುವುದಿಲ್ಲ. ವರ ನನ್ನಿಂದ ಏನು ಬಯಸುತ್ತಾನೆ ಎಂಬ ಕಲ್ಪನೆ ವದುವಿಗೆ ಇಲ್ಲ, ವಧು ತನ್ನಿಂದ ಏನು ಬಯಸುತ್ತಾಳೆ ಎಂಬ ಕಲ್ಪನೆ ವರನಿಗಿಲ್ಲ.ಮನಸ್ಸು ಒಂದಾಗದೆ ಆಸ್ತಿ ಪಾಸ್ತಿ ಸಂಪತ್ತುಗಳಿಂದ ಬದುಕಲು ಸಾದ್ಯವೇ? ಮೇಲೆ ತಿಳಿಸಿದ ಕಾರಣಗಳಲ್ಲಿ ಯಾವುದಾದರೂ ಕೊರತೆಯ ಕಾರಣ ವಿದೆಯೇ? ಇಲ್ಲಿ ಇರುವುದು ಹೊಂದಾಣಿಕೆಯ ಕೊರತೆ ಮಾತ್ರ. ಮಗ ಅಥವಾ ಮಗಳಿಗೆ ಜೀವನ ನಡೆಸುವ ರೀತಿಯನ್ನು ಹೇಳಿಕೊಡದೆ ಇದ್ದ ಕಾರಣದಿಂದಾಗಿ ಸ್ವತಂತ್ರವಾಗಿರುವಾಗ ಯಾವ ನಿರ್ದಾರ ತೆಗೆದುಕೊಂಡರೆ ಏನು ಪರಿಣಾಮ ವಾಗುತ್ತದೆ ಎಂಬ ಅರಿವು ಮಕ್ಕಳಿಗೆ ಇರುವುದಿಲ್ಲ.ನನ್ಗೆ ಅಪ್ಪ ಅಮ್ಮ ಯಾವಾಗಲೂ ಬೆನ್ನೆಲುಬು ಆಗಿ ಇರ್ತಾರೆ ನನಗೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿಂದ ಯಾವತ್ತಿಗೂ ತನ್ನ ಮೇಲೆ ಅಪ್ಪ ಅಮ್ಮನ ಸಂರಕ್ಷಣೆ ಎಂಬ ಛತ್ರಿ ಇರುತ್ತದೆ ಎಂಬ ದೆರ್ಯ ಮಕ್ಕಳಲ್ಲಿ.
ಇಲ್ಲಿ ಯಾರು ಸರಿ ಯಾರು ತಪ್ಪು ಎನ್ನುವ ಬದಲು ಯಾರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ ಎನ್ನುವುದು ಬಹಳ ಮುಖ್ಯ ಆಗುತ್ತದೆ. ಮಕ್ಕಳು ಯಾವಾಗಲೂ ಸ್ವಾಭಾವಿಕವಾಗಿ ಬೆಳೆಯಬೆಕು. ಮರುಳಲ್ಲಿ, ನೀರಲ್ಲಿ, ಮಣ್ಣಲ್ಲಿ, ಕೆಸರಲ್ಲಿ ಆಟ ಆಡಲು ಬಿಡಬೆಕು. ಹೊಲ ಗದ್ದೆಗಳಲ್ಲಿ, ಗುಡ್ಡಗಳಲ್ಲಿ ಅಡ್ಡಾಡಲು ಬಿಡಬೆಕು. ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆಯೋ ಅದನ್ನು ಅನುಭಾವಿಸಲು ಬಿಡಬೆಕು. ಆದರೆ ಮಕ್ಕಳು ದಾರಿ ತಪ್ಪದಂತೆ ಕಾಯುವುದು ಪೋಷಕರ ಜವಾಬ್ದಾರಿ.
“ಸಾರ್ ನನ್ನ ಮಗ ಒಂದು ಚೂರು ನಾನು ಹೇಳುವುದನ್ನು ಕೇಳ್ತಾ ಇಲಾ. ಡಿಗ್ರಿ ಓದು ಮುಗಿಸಿದ್ದಾನೆ, ಹೆಚ್ಚೇನು ಪರ್ಸಂಟೇಜ್ ಬಂದಿಲ್ಲ. ಬೆನ್ಗಳೂರಿಗೆ ಹೋಗಿ ಒಂದು ಕಂಪೆನಿಯಲ್ಲಿ ಕೆಲಸ ಮಾಡಿಕೊಡಿದ್ದ. ಈಗ ಕೆಲಸ ಬಿಟ್ಟು ಬಂದಿದ್ದಾನೆ. ಮನೆಯಲ್ಲಿಯೇ ಕೂತಿದ್ದಾನೆ. ಬೆಳಗ್ಗೆಹತ್ತುವರೆ ಘಂಟೆಗೆ ಹೋದ್ರೆ ರಾತ್ರಿ ಹನ್ನೊಂದು ಆದರೂ ಮನೆಗೆ ಬರುವುದಿಲ್ಲ, ಕೇಳಿದ್ರೆ ನಿಂಗ್ಯಾಕೆ ನಾನು ಎಲ್ಲಿ ಬೆಕಿದ್ದರೂ ಹೋಗ್ತೀನಿ ಅಂತಾನೆ” ಅಂತ ರೇಣುಕಮ್ಮ ತನ್ನ ಮಗನ ಬಗ್ಗೆ ಮೇಲಾಧಿಕಾರಿಯಲ್ಲಿ ಅಳಲನ್ನು ತೋಡಿಕೊಳ್ಳುತ್ತಾಳೆ. “ನಾನು ಬಿಸಿನೆಸ್ ಮಾಡಬೆಕು, ಬಂಡವಾಳ ಬೆಕು ದುಡ್ಡು ಕೊಡು ಅಂತ ಪೀಡಿಸುತ್ತಾನೆ. ಸಣ್ಣವನಿದ್ದಾಗ ಏನು ಬೆಕೋ ಎಲ್ಲವನ್ನೂ ಮಾಡಿದ್ದೆ, ಡಾಕ್ಟರ್ ಮಾಡಬೆಕು ಅಂತ ಆಸೆ ಇಟ್ಕೊಂಡಿದ್ದೆ ಕೇಳಿದ್ದೆಲ್ಲಾ ತೆಗೆಸಿಕೊಟ್ಟಿದ್ದೆ ಆದರೆ ಈಗ ಮಗ ನನ್ನ ಕೆಗೆ ಸಿಗ್ತಾ ಇಲ್ಲ. ದುರಾಭ್ಯಾಸ ಬೆರೆ ಶುರು ಹಚ್ಕೋಂಡಿದ್ದಾನೆ” ಎಂದ ರೇಣುಕಮ್ಮ ಕಣ್ಣೀರು ಒರೆಸಿಕೊಂಡರು. “ಇಬ್ಬರೂ ದುಡೀತೀರಿ ನನ್ನ ಬಿಸಿನೆಸ್ ಗೆ ಬಂಡವಾಳ ಕೊಡಿಸಲಿಕ್ಕೆ ನಿಮಗೆ ದೆರ್ಯ ಇಲ್ಲ. ನೀವೆಂಥಾ ಅಪ್ಪ ಅಮ್ಮ, ಮಗನಿಗೆ ನಿಮ್ಮ ಸಪೋರ್ಟ್ ಇಲ್ಲ, ಬ್ಯಾಂಕ್ ನಲ್ಲಿ ಲೋನ್ ಮಾಡಿಸಿ ಕೊಡಿ ನಾನು ಬಿಸಿನೆಸ್ ಮಾಡಿ ಲಾಭ ಗಳಿಸಿ ತೀರಿಸ್ತೇನೆ ಎಂದು ಅಬ್ಬರಿಸುತ್ತಾನೆ. ಈ ತನಕದ ನಿರೀಕ್ಷೆ ಗಳನ್ನು ಹುಸಿ ಮಾಡಿದ ಇವನನ್ನು ಹೇಗೆ ನಂಬಲಿ. ಬ್ಯಾಂಕ್ ಸಾಲಕ್ಕೆ ನಾವೇ ಶ್ಯೂರಿಟಿ ಹಾಕಬೆಕು, ಈ ಉಸಾಬರಿಯೀ ಬೆಡಾ ಅಂತ ನಾವಿಬ್ಬರೂ ಒಪ್ಪಿಗೆ ನೀಡಿಲ್ಲ. ಸಮಸ್ಯೆ ಮುಂದುವರಿತಾ ಇದೆ, ಮಗ ಕೆಲಸ ಇಲ್ಲದೆ ಹೊರಗಡೆ ದುರಾಭ್ಯಾಸ ಮಾಡುತ್ತಾ ಇದ್ದಾನೆ, ನಾವು ದುಖ: ದಿಂದ ಕೊರಗುತ್ತಾ ಇದ್ದೇವೆ” ಎಂದ ರೇಣುಕಮ್ಮನನ್ನು ” ಸಮಾದಾನ ಮಾಡಲು ಪ್ರಯತ್ನಿಸುತ್ತಾರೆ.
ಬಹುಶ: ಇಲ್ಲಿಯೂ ಅಪ್ಪ ಅಮ್ಮ ಮಗನ ಪೋಷಣೆ ಮಾಡುವಾಗ ಎಡವಿದ್ದಾರೆ. ಅತಿಯಾದ ಮುದ್ದು, ಪ್ರೀತಿ ಮಗನಲ್ಲಿ ಅಹಂ ಭಾವವನ್ನು ಬೆಳೆಸಿದೆ. ಅಪ್ಪ ಅಮ್ಮ ನನ್ನನ್ನು ಯಾವತ್ತಿಗೂ ಈ ರೀತಿಯಾಗೇ ನೋಡ್ಬೇಕು ಎಂದು ಬಯಸುತ್ತಾನೆ. ಚಿಕ್ಕವನಿದ್ದಾಗ ಕೇಳಿದ್ದನ್ನು ತೆಗೆಸಿಕೊಟ್ಟ ಅಪ್ಪ ಅಮ್ಮ ಇಂದು ತನ್ನ ವ್ಯವಹಾರಕ್ಕೆ ಬಂಡವಾಳ ಹಾಕಬೆಕೆಂದು ಬಯಸುತ್ತಾನೆ. ಅಪ್ಪ ಅಮ್ಮನೂ ಕೂಡ ಮಗನ ಮೆಲಿನ ಅಪನಂಬಿಕೆಯಿಂದ ಈ ತನಕ ಅವನಿಗೆ ಸ್ವತಂತ್ರ ವಾಗಿ ನಿರ್ದಾರ ತೆಗೆದುಕೊಳ್ಳಲು ಬಿಟ್ಟಿಲ್ಲ. ಮನೆಯ ಕಾರನ್ನೂ ಓಡಿಸುವ ಅವಕಾಶವನ್ನೂ ಈ ತನಕ ಕೊಟ್ಟಿಲ್ಲ. “ನೀವಿಬ್ರೂ ದುಡೀತೀರಲ್ಲ ಇನ್ಯಾರಿಗೆ ಅದು ನನಗೇ ಸಲ್ಲಬೆಕಿದ್ದದ್ದು, ಮತ್ಯಾಕೆ ಆಸೆ ಮಾಡ್ತೀರಿ, ನನಗೆ ಬ್ಯಾಂಕ್ ಸಾಲದ ಬದಲು ನಿಮ್ಮ ದುಡ್ಡೇ ಕೊಡಿ ಎಂದು ಹೇಳುವಾಗ ರೇಣುಕಾ ಬೆರಗು ಕಣ್ಣಿನಿಂದ “ಇದು ನನ್ನ ಮಗುವೇ” ಎಂದು ಆಶ್ಚರ್ಯದಿಂದ ಮಗನನ್ನು ನೋಡುತ್ತಾಳೆ. ಅತಿಯಾದ ಪ್ರೀತಿ ಇಂದು ವಿಷವಾಗಿ ಹೊರ ಹೊಮ್ಮುತ್ತಿರುವುದನ್ನು ನೋಡುತ್ತಾಳೆ.
ಯಾಕೆ ನನ್ನ ಮಗ ಹೀಗಾದ? ಬಹುಶ: ಗ್ರಹಚಾರ ಸರಿ ಇಲ್ಲವೇ? ಜ್ಯೋತಿಷ್ಯರಲ್ಲಿ ಹೋಗಲೇ? ಇವನಿಗೆ ಯಾರಾದರೂ ಏನಾದರೂ ಮಾಡಿದ್ದಾರೆಯೇ? ಈತನ ಗೆಳೆಯರು ಸರಿ ಇಲ್ಲ ಹಾಗಾಗಿ ಹೀಗಿದ್ದಾನೆ, ಈ ರೀತಿಯಾದ ಆಲೋಚನೆಗಳು ರೇಣುಕಾಳಿಗೆ ಬಂತು. ನನ್ನ ಮಗನಿಗೆ ಕಷ್ಟ ಕೊಡಲಿಲ್ಲ, ಚೆನ್ನಾಗಿ ಸಾಕಿದೆ, ಮುದ್ದು ಮಾಡಿದೆ, ಪ್ರತಿ ಕ್ಷಣದಲ್ಲೂ ಅವನ ಜೊತೆ ಇದ್ದೆ, ತೊಂದರೆ ಆಗದಂತೆ ಎಚ್ಚರವಹಿಸಿದೆ, ಯಾವಾಗಲೂ ಒಬ್ಬನನ್ನೆ ಬಿಟ್ಟಿರಲಿಲ್ಲ, ಅವನಿಗೆ ಇಷ್ಠ ಬಂದಿದ್ದೆಲ್ಲಾ ಮಾಡಿದೆ| ಆದರೆ ನನಗೆ ಯಾಕೆ ಈ ಶಿಕ್ಷೆ? ಈ ಎಲ್ಲಾ ವಿಚಾರಗಳು ಆಕೆಯ ಮನಸಲ್ಲಿ ಬಂತು. ಆದ್ರೆ ಎಂದಿಗೂ ಆಕೆಗೆ ತಾನು ಮಾಡಿದ ತಪ್ಪಿನ ಅರಿವು ಆಗಲಿಲ್ಲ.
ಮೊನ್ನೆ ತಾನೆ ಒಬ್ಬ ಅಪ್ರಬುದ್ದ ಹುಡುಗಿ ತನ್ನ ಪ್ರಿಯಕರ ನೊಂದಿಗೆ ಪರಾರಿಯಾಗಿ ಮದುವೆ ಆದದನ್ನು ಕೇಳಿದೆ. ವಿಚಾರ ಕೇಳಿತಿಳಿದಾಗ ಆತ ಅವರ ಮನೆಗೆ ಆಗಾಗ್ಗೆ ಬರುತಿದ್ದ ಎಂದು ಗೊತ್ತಾಯಿತು. ಆದರೆ ಹುಡುಗಿಯ ಅಮ್ಮನಿಗೆ ಯುವಕನೊಬ್ಬ ತನ್ನ ಮನೆಗೆ ಬಂದಾಗ ಮಗಳು ಯಾವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾಳೆ ಎಂಬುದನ್ನು ಗಮನಿಸಬೆಕೆಂದು ತಿಳಿಯಲಿಲ್ಲ. ಒಂದು ಸಣ್ಣ ವಸ್ತುವಿನ ಖರೀದಿ ಮಾಡುವಾಗಲೂ ಹಿಂದೆ ಮುಂದೆ ನೋಡುವ ವಯಸ್ಸಿನ ಹುಡುಗಿ ಇಂದು ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಷ್ಟು ತಾನು ಪ್ರಬುದ್ದಳೇ? ಎಂಬ ಪ್ರಶ್ನೆ ಮಗಳೂ ಕೇಳಿಕೊಳ್ಳಲಿಲ್ಲ, ಅಮ್ಮನೂ ಉತ್ತರ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ರಂಗು ರಂಗಿನ ಜೀವನ, ಇಲ್ಲಿ ಎಲ್ಲವೂ ಸುಖದ ಸೋಪಾನ ಎಂದು ತಿಳಿದಿದ್ದ ಹುಡುಗಿ ಅದನ್ನೇ ಅರಸಿಕೊಂಡು ಹೋಗಿದ್ದಳು.
ಮಕ್ಕಳಿಗೆ ಜೀವನದ ನೆತಿಕ ಶಿಕ್ಷಣ ಯಾವುದೇ ಶಾಲೆಗಳಲ್ಲಿ, ಕೋರ್ಸ್ ಗಳಲ್ಲಿ ಕೊಡಲು ಸಾದ್ಯವಿಲ್ಲ. ಜೀವನಾನುಭವದಿಂದ ಮತ್ತು ಮಾತಾ ಪಿತ್ರ ಗಳಿಂದ, ಹಿರಿಯರಿಂದ, ಗುರುಗಳ ಮಾರ್ಗದರ್ಶನದಿಂದ ಮಾತ್ರ ಸಾದ್ಯವಾಗುತ್ತದೆ. ಜೊತೆಗೆ ಮಗುವಿಗೆ ಉತ್ತಮ ಪರಿಸರ, ಒಳ್ಳೆಯ ಮಿತ್ರರು ಸಿಕ್ಕಿದಲ್ಲಿ ತನ್ನ ವ್ಯಕ್ತಿತ್ವವನ್ನು ಅದು ರೂಪಿಸಿಕೊಳ್ಳುವಲ್ಲಿ ಸಶಕ್ತವಾಗುತ್ತದೆ. ಈ ಪರಿಸರವನ್ನು ಸ್ರಷ್ಠಿಸುವ ಕೆಲಸ ಜನ್ಮದಾತೆ ತಾಯಿ ಮಾಡಬೆಕು. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ ಆ ಮಗು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ತನಕ ತಂದೆ ತಾಯಿಯ ಕರ್ತವ್ಯ ವಿದೆ. ಸಮಾಜಕ್ಕೆ ಉತ್ತಮ ಪ್ರಜೆಯನ್ನು ಕೊಡುವ ಕೆಲಸಕ್ಕಿಂತ ಉತ್ತಮ ಕೆಲಸ ಅಪ್ಪ ಅಮ್ಮನಿಗೆ ಯಾವುದಿದೆ ಹೇಳಿ?