ಹಡಿಲು ಬಿದ್ದ ಭೂಮಿ ಕಾಣುತ್ತಿರುವ ಈ ಸಂದರ್ಭದಲ್ಲಿ ಉಡುಪಿಯು ಕೂಡಾ ಹೊರತಾಗಿಲ್ಲ. ಭೂಮಿಯನ್ನು ಉತ್ತು ಬಿತ್ತಿ ಬೆಳೆ ಬೆಳೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮೊದಲು ಹೇಳುತ್ತಿದ್ದರು ಬೆಳಗಾದ ತಕ್ಷಣ ತೋಟದ ಕಡೆ ಮುಖವನ್ನು ಮಾಡುತ್ತಿದ್ದ ಜನ ಈಗ ಪೇಟೆ ಕಡೆ ಮುಖವನ್ನು ಮಾಡುತ್ತಿದ್ದಾರೆ ಎಂದು ಭೂಮಿ ಬರಡಾಗಿಯೇ ಉಳಿಯಬೇಕಾದ ಸಂದರ್ಭ ಬಂದೊದಿಗಿದೆ. ಬೆವರು ಸುರಿಸದೆ ದುಡಿಯುವ ಮನಸಿಲ್ಲದೆ ಕೊಲಿಯಾಳುಗಳ ಸಮಸ್ಯೆಯಿಂದಾಗಿ ಕೃಷಿಯೇತರ ಚಟುವಟಿಕೆ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ದೊರೆಯದೇ ಇರುವ ಸಂದರ್ಭ ಒದಗಬಹುದು. ಇದಕ್ಕೆಲ್ಲ ಪರಿಹಾರ ಒದಗಬೇಕಾದರೆ ಕೃಷಿಗೆ ಯೋಗ್ಯವಾದ ಎಲ್ಲಾ ಭೂಮಿಯೂ ಕೂಡಾ ಕೃಷಿಗೆ ಬಳಕೆಯಾಗಬೇಕು. ಇಂದಿನ ಯುವಕರಿಗ ಕೃಷಿ ಮಾಡಲು ಅಗತ್ಯ ಮಾಹಿತಿಯನ್ನು ನೀಡಬೇಕು. ಋತುಮಾನಕ್ಕೆ ಅನುಗುಣವಾಗಿ ಆಯಾ ಪ್ರದೇಶಕ್ಕನುಗುಣವಾಗಿ ಕೃಷಿ ಪದ್ದತಿಯನ್ನು ಅರಿತುಕೊಂಡು ಶ್ರಮಪಟ್ಟು ದುಡಿದರೆ ಭೂಮಿ ತಾಯಿ ಉತ್ತಮ ಪಸಲು ನೀಡುತ್ತದೆ. ಇದರಿಂದ ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗಿರಿಸಿದರು. ಶ್ರೀಮತಿ ಕೀತರ್ಿ ಚಂದ್ರಶೇಖರರವರು ಹಡಿಲು ಭೂಮಿಯಲ್ಲಿ ಭತ್ತ ಕೃಷಿಯನ್ನು ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಮಣಿಪಾಲ ವಲಯದ ಶಿವಳ್ಳಿ ಎ ಒಕ್ಕೂಟದ ಶ್ರೀಮಾತಾ ಸ್ವ ಸಹಾಯ ಸಂಘದ ಸದಸ್ಯರಾದ ಇವರು ಕಳೆದ 10 ವರ್ಷದಿಂದ ಸಕ್ರೀಯ ಪಾಲುದಾರರಾಗಿದ್ದು, ಕೇವಲ 1/2 ಏಕರೆ ಹಡಿಲು ಭೂಮಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. ಪತಿಯು ಮಣಿಪಾಲದಲ್ಲಿ ಕೆಲಸವನ್ನು ಮಾಡುತ್ತಿದ್ದು, ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಶ್ರೀ ನಾರಾಯಣರವರ ಮಾಹಿತಿ ಮತ್ತು ಪ್ರೇರಣೆಯೊಂದಿಗೆ 1/2 ಏಕರೆ ಹಡಿಲು ಭೂಮಿಯನ್ನು ಗೇಣಿಗೆ ಪಡೆದು ಭತ್ತ ಕೃಷಿಯನ್ನು ಮಾಡುತ್ತಿದ್ದಾರೆ. ಎಲ್ಲಾ ಖಚರ್ು ತೆಗೆದು ಸುಮಾರು 7,500/- ಲಾಭವಾಗುವುದರ ಜೊತೆಗೆ ಹೈನುಗಾರಿಕೆಗೆ ಬೇಕಾಗುವ ಹುಲ್ಲು ದೊರೆಯುವುದು. ಯುವಕರು ಪೇಟೆ ಕಡೆ ಮುಖವನ್ನು ಮಾಡದೆ, ಅಲ್ಪ ಸ್ವಲ್ಪ ವಿದ್ಯೆ ಕಲಿತು ಹಡಿಲುಬಿದ್ದ ಭೂಮಿಯನ್ನು ಅಲ್ಪಾವಧಿ ಕೃಷಿಯನ್ನು ಮಾಡಿ ನಮ್ಮ ಲೆಕ್ಕವನ್ನು ನಾವೇ ಮಾಡುವುದೇ ಒಳ್ಳೆಯದಲ್ಲವೇ…. ಎನ್ನುವರು ಶ್ರೀಮತಿ ಕೀತರ್ಿ ಚಂದ್ರಶೇಖರ.
ಗುರುಬಸಪ್ಪ. ವೀರಾಪೂರ
ಉಪನ್ಯಾಸಕರು, NIST, ಉಡುಪಿ