ಬಂಗಾರವಾದ ಬರಡು ಭೂಮಿ
Posted onಅನ್ನದಾತನ ಸ್ಥಿತಿ ಶ್ರೀಮಂತನಾದರೂ ಬಡವ ಎಂಬಂತೆ. ಎಕರೆಗಟ್ಟಲೆ ಭೂಮಿಯಿದ್ದರೂ ಕೈಯಲ್ಲಿ ಕಾಸಿಲ್ಲ. ಕೃಷಿ ಭೂಮಿ ಅಭಿವೃದ್ಧಿಪಡಿಸಿ ಆದಾಯ ಪಡೆಯೋಣ ಎಂದರೆ ಬಂಡವಾಳವಿಲ್ಲ. ಬ್ಯಾಂಕ್ಗಳೂ ಇಂತಹ ರೈತರ ಸಹಾಯಕ್ಕೆ ಬರದಿದ್ದಾಗ ಆತ ಕಂಗಾಲಾಗಬಹುದು. ಇದೇ ಸ್ಥಿತಿಯಲ್ಲಿದ್ದ ರೈತನೊಬ್ಬನ ಸಾಧನಾಗಾಥೆ ಇಲ್ಲಿದೆ. ಹೇಳಿ ಕೇಳಿ ಕುಣಿಗಲ್ ತಾಲೂಕಿನ ಅಮೃತೂರಿನಿಂದ 10 ಕಿ.ಮೀ ದೂರದಲ್ಲಿರುವ ಕಟ್ಟಿಗೆಹಳ್ಳಿ ಗ್ರಾಮ ಬಡತನಕ್ಕೆ ಹೆಸರುವಾಸಿ. ಈ ಊರಿನಲ್ಲಿರುವ ಅನೇಕ ಬಡ ಕುಟುಂಬಗಳಲ್ಲಿ ದೇವರಾಜುರವರ ಕಡು ಬಡತನದಲ್ಲಿದ್ದ ಕುಟುಂಬವೂ ಒಂದಾಗಿತ್ತು. ಇದ್ದ ಐದು ಎಕರೆ ಬರಡು ಭೂಮಿಯಲ್ಲಿ […]