ಸ್ವಂತ ಉದ್ಯೋಗದ ಖುಷಿ ಬಲ್ಲವನೇ ಬಲ್ಲ

Posted on Posted in Agriculture, success story

ಹುಮ್ಮಸ್ಸು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನಗಳನ್ನು ಬಳಸಿಕೊಳ್ಳುವ ಬುದ್ದಿವಂತಿಕೆ ಕಷ್ಟಕಾಲದಲ್ಲಿ ನೆರವಾಗಬಹುದು. ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಮಾದೇವಿ ಇದಕ್ಕೆ ಉತ್ತಮ ಉದಾಹರಣೆ.

ಇವರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಮೂರು ಹೆಣ್ಣು ಮಕ್ಕಳ ಸಂಸಾರದ ಒಡತಿಯಾಗಿರುವ ಮಾದೇವಿಗೆ ಏನೇ ಕಷ್ಟ ಬಂದರೂ ಹಿಂದಿರುಗಿ ನೋಡದೆ ಸಾಧಿಸುವ ಛಲವಿತ್ತು. ಮಾದೇವಿಯವರ ಛಲಕ್ಕೆ ಸ್ಫೂರ್ತಿಯಾಗಿದ್ದು ಮಂಜುಶ್ರೀ ಸ್ವ-ಸಹಾಯ ಸಂಘ ಮತ್ತು ಜ್ಞಾನಜ್ಯೋತಿ ಕೇಂದ್ರ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಬಂದ ಇವರ ಬಳಿ ಹಳೆ ಮನೆಯೊಂದನ್ನು ಬಿಟ್ಟು ಬೇರೇನೂ ಇರಲಿಲ್ಲ.

ಇವರ ಗಂಡ ಕೂಲಿಯ ಜೊತೆಗೆ ಜ್ಞಾನವಿಕಾಸ ಕೇಂದ್ರದ ಸದುಪಯೋಗ ಮಾಡಿಕೊಳ್ಳಲಾರಂಭಿಸಿದರು. ಹಂತ ಹಂತವಾಗಿ ಮಾಹಿತಿ ಮಾರ್ಗದರ್ಶನ ಹಾಗೂ ಪ್ರಗತಿನಿಧಿಯನ್ನು ಪಡೆದುಕೊಂಡು ಮನೆ ರಿಪೇರಿ, ಕಾಂಪೌಂಡ್ ರಚನೆ, ತುಳಸಿ ಕಟ್ಟೆ ರಚನೆ, ಚಿನ್ನ ಖರೀದಿ, ಮಕ್ಕಳ ಶಿಕ್ಷಣವನ್ನು ಮುಂದುವರಿಸಿಕೊಂಡು ಬಂದಿದ್ದು, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ. ಇದೀಗ 1.5 ಎಕರೆ ಜಾಗವನ್ನು ಲೀಸ್ಗೆ ಪಡೆದು, ಶುಂಠಿ ಕೃಷಿಯ ಜೊತೆಗೆ ದಿನಸಿ ವ್ಯಾಪಾರವನ್ನೂ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳ ಮದುವೆ ಈಗಾಗಲೇ ನಡೆದಿದ್ದರೆ, ಇನ್ನೊಬ್ಬ ಮಗಳು ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ.

ಅಂತೂ ಹೇಳುವುದಾದರೆ ಜ್ಞಾನವಿಕಾಸ ಕೇಂದ್ರಕ್ಕೆ ಸೇರಿದ ನಂತರ ಪಡೆದುಕೊಂಡ ರೂ. 4,50,000 ಪ್ರಗತಿನಿಧಿ ಅವರ ಬದುಕನ್ನೇ ಬದಲಿಸಿದೆ. ಮಾತನಾಡುವ ಶೈಲಿಯಿಂದ ಹಿಡಿದು, ಆತ್ಮವಿಶ್ವಾಸ, ಧೈರ್ಯ, ಮನೆಯ ಸ್ವಚ್ಛತೆ, ಹಸು ಸಾಕಾಣೆ, ಶುಂಠಿ ಕೃಷಿ, ಅಂಗಡಿ ವ್ಯಾಪಾರ ಎಲ್ಲದಕ್ಕೂ ಯೋಜನೆ ಪ್ರೇರಣೆಯಾಯಿತು ಎನ್ನುತ್ತಾರೆ.

ಜಾಗ ಖರೀದಿಸುವುದು, ಶುಂಠಿ ಕೃಷಿ, ಮಗಳಿಗೆ ಉತ್ತಮ ಶಿಕ್ಷಣ, ಮಗಳ ಮದುವೆ, ಅಂಗಡಿ ವ್ಯಾಪಾರ ಅಭಿವೃದ್ಧಿಪಡಿಸುವುದು ಹೀಗೆ ಮಾದೇವಿಯ ಮನಸ್ಸಲ್ಲಿ ಇನ್ನಷ್ಟು ಕನಸುಗಳಿವೆ. ತನ್ನ ಜೊತೆ ಯೋಜನೆಯಿದೆ ಎಂಬ ವಿಶ್ವಾಸವಿದೆ