Agriculturesuccess story

ಪಾಳು ಭೂಮಿಯಲ್ಲಿ ಬಂಗಾರವಾದ ಹೆಬ್ಬೇವು

ಕೃಷಿ ಮಾಡಲು ಬೇಕಿರುವುದು ಮನಸ್ಸು,ಆಸಕ್ತಿ ಇದ್ದರೆ ಯಾವುದೇ ಹುದ್ದೆಯಲ್ಲಿದ್ದರೂ ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಬಹುದೆನ್ನುತ್ತಾರೆ ರೈತ ಹೆಚ್.ಎಲ್.ನಂಜೇಗೌಡ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ 66 ರ ವಯಸ್ಸಿನ ನಂಜೇಗೌಡ ಪರಿಸರ ಮತ್ತು ಅರಣ್ಯೀಕರಣದ ರೈತನೆಂದರೆ ತಪ್ಪಾಗಲಾರದು ನಂಜೇಗೌಡ ರ ತಂದೆಯಾದ ಲಕ್ಷ್ಮೇಗೌಡರ ಕಾಲದಿಂದಲೂ ಕೃಷಿಯನ್ನೇ ನಂಬಿದೆ, ಆದರೆ ತಂದೆಯವರು ಕೇವಲ ಭತ್ತ,ಕಬ್ಬು,ದವಸ-ಧಾನ್ಯಗಳನಷ್ಟೇ ಬೆಳೆಯುತ್ತಿದ್ದರು.10 ಎಕ್ರೆ ಕೃಷಿ ಭೂಮಿಯನ್ನು ಹೊಂದಿ ಇವರು ಒಂದೇ ಬೆಳೆಯನ್ನು ನಂಬಿದರೆ ಕೈ ಸುಟ್ಟುಕೊಳ್ಳುವುದು ಖಂಡಿತ ಎಂದು ತಿಳಿದು ಅರಣ್ಯದ ಕಡೆ ಒಲವನ್ನಿಟ್ಟು ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ಪ್ರವಾಸ ಮಾಡಿ ಹೆಬ್ಬೇವಿನ ಮಹತ್ವ ತಿಳಿದು 35 ವರ್ಷಗಳಿಂದ ಪಾಳು ಬಿದ್ದ ಬಂಜರು ಭೂಮಿಯಲ್ಲಿ 800 ಹೆಬ್ಬೇವಿನ ಗಿಡ ನಾಟಿ ಮಾಡಿದ್ದಾರೆ.

ಹೆಬ್ಬೇವು ಬಹುಪಯೋಗಿ ಮರ,ಬಂಜರು ಮತ್ತು ಅನುಪಯುಕ್ತ ಜಮೀನಿನಲ್ಲಿ ಬೆಳೆದು ಲಾಭ ತರಬಲ್ಲ ಮರ ಎಂದು ತಿಳಿದು ಗ್ರಾಮೀಣ ಭಾಷೆಯಲ್ಲಿ ಹೆಬ್ಬೇವು ಅಥವಾ ತುರುಬೇವು ಎಂದು ಕರೆಯಲಾಗುತ್ತದೆ ಎಂದು ತಿಳಿಸುತ್ತಾರೆ.

ಉಗಮ

 

ಇದರ ಉಗಮ ನಮ್ಮ ದೇಶ ಸೇರಿದಂತೆ ಶ್ರೀಲಂಕಾ ಹಾಗೂ ಕರ್ನಾಟಕದ ಒಣ ಪ್ರದೇಶಗಳಾದ ಬಳ್ಳಾರಿ,ಚಿತ್ರದುರ್ಗ,ಕೋಲಾರ,ಬೆಂಗಳೂರು,ರಾಮನಗರ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ ಎಂದು ತಿಳಿಸುತ್ತಾರೆ.

ಮರದ ವಿವರಣೆ

ಹೆಬ್ಬೇವು ಎಲೆ ಉದುರುವ,ಶಿಘ್ರ ಬೆಳೆವಣಿಗೆ ಹೊಂದುವ ಮರವಾಗಿದೆ 10-12 ವರ್ಷ ಗಳಲ್ಲಿ 16 ಮೀಟರಿಗಿಂತಲೂ ಎತ್ತರ ಬೆಳೆಯುತ್ತದೆ,ಬೇಸಿಗೆಯಲ್ಲಿ ಎಲೆಗಳುದುರಿ ಮಣ್ಣಿನಲ್ಲಿ ಸೇರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬೇಸಾಯ ಕ್ರಮ

 

ಹೆಬ್ಬೇವನ್ನು ಅಂತರ ಬೆಳೆಗಳೊಂದಿಗೆ ಬೆಳೆಯಬಹುದು.ಮಳೆಯಾಧಾರಿತ ಪ್ರದೇಶವಾದ ನಮ್ಮಲ್ಲಿ ರಾಗಿ,ದ್ವಿದಳ ಧಾನ್ಯಗಳೊಂದಿಗೆ ಬೆಳೆಯಬಹುದು,ಸಸಿಯನ್ನು ಸಾಲಿನಿಂದ ಸಾಲಿಗೆ 10 ಅಡಿ ಅಂತರ,ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನಾಟಿ ಮಾಡಬೇಕೆಂದು ತಿಳಿಸುತ್ತಾರೆ.

ಬೆಳವಣಿಗೆ ಮತ್ತು ಇಳುವರಿ

ಒಂದು ಮರವು 10-12 ವರ್ಷಗಳಲ್ಲಿ ಸರಾಸರಿ 14 ಘನ ಅಡಿಯಷ್ಟು ಮರ ಮಟ್ಟನ್ನು ಉತ್ಪಾದಿಸುತ್ತದೆ. 1 ಗಿಡವು 10-12 ನೇ ವರ್ಷಕ್ಕೆ ಸರಾಸರಿ 2 ಟನ್‍ನಷ್ಟು ಇಳುವರಿಯನ್ನ ನೀಡುತ್ತದೆ. ಇದರ ಲೆಕ್ಕಾಚಾರದ ಪ್ರಕಾರ ಒಟ್ಟು 800 ಗಿಡಕ್ಕೆ 1,600 ಟನ್ ಉತ್ಪಾದಿಸಬಹುದು ಹಾಗೂ ಪ್ರಸ್ತುತ ಸನ್ನಿವೇಶದ ಲೆಕ್ಕಾಚಾರದ ಪ್ರಕಾರ 1 ಟನ್ ಗೆ ರೂ 8,000 ರಂತೆ ಒಟ್ಟು 1,600 ಟನ್ ಗೆ ರೂ 8,000 ರಂತೆ ರೂ 1,28,00,000 ಆಧಾಯದ ನಿರಿಕ್ಷೆಯಲ್ಲಿದ್ದಾರೆ ಹಾಗೂ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *