ಉಡುಪಿ ತಾಲೂಕಿನ ಮಾರ್ಪಳ್ಳಿ ಗ್ರಾಮದಲ್ಲಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ದೇವರ ಕಾಡಿಗೆ ನಾಟಿ ಮಾಡುವುದರ ಮುಖೇನ ರಾಜ್ಯದ ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ,ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದಲ್ಲಿ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಬೀಜದುಂಡೆ ವಿತರಣೆ ಮತ್ತು ಸಸಿ ನಾಟಿ ಕಾರ್ಯಕ್ರಮವನ್ನು ನೆರವೇರಿ ಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶ್ರೀ ವಸಂತ ಬಂಗೇರವರು ಶಾಲಾವನ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಕರಿಕಲನ್ರವರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ| ಎಲ್.ಹೆಚ್ ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ರಾಜ್ಯದ ಸಾವಿರಾರು ಗ್ರಾಮಗಳಲ್ಲಿ ಪಾರಂಪರಿಕ ವೃಕ್ಷಗಳಾದ ಮಾವು, ಬೇವು, ಹುಣಸೆ, ನೇರಳೆ, ಪೇರಳೆ ಮುಂತಾದ ಹತ್ತು ಹಲವು ಬೀಜಗಳ ಉಂಡೆಗಳನ್ನು ತಯಾರಿಸಿ ಅರಣ್ಯದಲ್ಲಿ ಬಿತ್ತುವ ಮೂಲಕ ಕಾರ್ಯಕ್ರಮನ್ನು ಯಶಸ್ವಿ ಗೊಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೃಹತ್ ವನಸಂವರ್ಧನಾ ಅಭಿಯಾನಕ್ಕೆ ಚಾಲನೆ
