ಬದುಕಿನ ಚಕ್ರಕ್ಕೆ ವೇಗ ಕೊಟ್ಟ ಯೋಜನೆ

ಮುಸ್ಸಂಜೆ ಮತ್ತು ಬೆಳಗಿನ ಹೊತ್ತಲ್ಲಿ ರಸ್ತೆ ಬದಿಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾರುವುದನ್ನು ನೋಡಿ ಯಾರಿಗಾದರೂ ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾನಿಪುರಿ, ಗೋಬಿ ಮಂಚೂರಿ, ಚೈನೀಸ್ ಪುಡ್‍ಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಹೇಳಿದರು ಕೂಡ ಬಾಯಿಯ ಚಪಲಕ್ಕೆ ಇವು ಬೇಕೆ ಬೇಕು. ಇಲ್ಲಿ ಮುಂಜಾನೆ ಚಹಾ, ಕಾಫಿ, ಬ್ರೆಡ್‍ಗಳನ್ನು ಸೇವಿಸಲು ಪ್ರಾರಂಭವಾದರೆ ಹಸಿವಾದಾಗ ಮನೆಗೆ ನೆಂಟರು ಬಂದರೆ ದಿಢೀರನೆ ಮಾಡಿಕೊಡುವುದೇ ಟೀ.ಕಾಫೀ, ತಿಂಡಿ ತಿನಿಸುಗಳು.

ಈ ರೀತಿಯ ಟೀ, ಕಾಫಿ ಹೋಟೆಲ್‍ಗಳು ಹಾಗೂ ಮಾಂಸದ ಅಂಗಡಿಗಳು ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪ್ರತಿ 2 ಕಿ.ಮೀ ನಂತೆ ಸಾಕಷ್ಟು ಇವೆ. ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಗುತ್ತವೆ. ಅವರ ಸಂಸಾರ ನಡೆಯುವುದೇ ಈ ವ್ಯಾಪಾರದಿಂದ ಇಂತಹ ವ್ಯಾಪಾರಿಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸವಿತ ಗಂಗಾಧರ ದಂಪತಿಗಳು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಶ್ರೀ ಸಾಯಿ ಸ್ವ ಸಹಾಯ ಸಂಘ ಮಾಡಿಕೊಂಡು ಉಳಿತಾಯ ಮತ್ತು ವಾರದ ಸಭೆ ನಡೆಸಿಕೊಂಡು ಎ ಗ್ರೇಡ್ ನಲ್ಲಿ ಮುಂದುವರೆಸುತ್ತಾ ಬಂದಿರುತ್ತಾರೆ.

ಈ ಕುಟುಂಬದಲ್ಲಿ 4 ಜನ ಸದಸ್ಯರಿದ್ದು ಯೋಜನೆಗೆ ಸೇರುವ ಮುಂಚೆ ಳಿ ಎಕ್ರೆಯಲ್ಲಿ ಬೆಳೆಯುವ ಕಬ್ಬು ಕೃಷಿಯೇ ಜೀವನಾಧಾರವಾಗಿತ್ತು. ಸವಿತ ಮನೆಯಲ್ಲಿಯೇ ಸಣ್ಣ ಫ್ಯಾನ್ಸಿ ಅಂಗಡಿಯನ್ನು ನಡೆಸುತ್ತಿದ್ದಾರೆ, ಗಂಡ ಮೈಸೂರಿನ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ತಾತ್ಕಾಲಿಕವಾಗಿ ಕಾರ್ಮಿಕರಾಗಿದ್ದರು. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗದೆ ಬೇರೆ ಕೆಲಸದಲ್ಲಿ ಹೋಗಲು ಸಾಧ್ಯವಾಗದೆ ಇದ್ದಾಗ ಬದುಕು ದುಸ್ಥಿರವೆಂದು ನಿರಾಶೆ ಮನೋಭಾವನೆ ಮೂಡುತ್ತಿದ್ದಾಗ ವಲಯ ಮೇಲ್ವಿಚಾರಕ ಮುನೇಶ್‍ರಿಂದ ಮಾರ್ಗದರ್ಶನ ಪಡೆದು ಸ್ವಾವಲಂಬಿ ಬದುಕಿಗೆ ಹೊಸ ಚಿಂತನೆ ಮೂಡಿತು.
ಯೋಜನೆಯಿಂದ ವಿವಿಧ ಹಂತಗಳಲ್ಲಿ ಪ್ರಗತಿನಿಧಿಯನ್ನು ಪಡೆದುಕೊಂಡು ವಿವಿಧ ವಸ್ತುಗಳನ್ನು ಖರೀದಿಸಿ ಫ್ಯಾನ್ಸಿ ಸ್ಟೋರ್‍ನ್ನು ವಿಸ್ತರಿಸಿದರು. ಅಲ್ಲದೆ ಇದರ ಜೊತೆಗೆ ಬೇಕರಿ ಅಂಗಡಿಯೊಂದನ್ನು ತೆರೆದು ಆದಾಯಕ್ಕೆ ಹೊಸ ದಾರಿಯನ್ನು ಹುಡುಕಿದರು, ಮಾತ್ರವಲ್ಲದೆ ತನ್ನ ಗಂಡನಿಗೂ ಕೋಳಿಮಾಂಸದ ಮಾರಾಟ ಅಂಗಡಿಯನ್ನು ತೆರೆದು ದಿನನಿತ್ಯದ ಆಧಾಯಕ್ಕೆ ಬೆಳಕು ನೀಡಿದರು. ಯೋಜನೆಯಿಂದ ಫ್ಯಾನ್ಸಿ ಅಂಗಡಿ ಅಭಿವೃದ್ಧಿ ಮತ್ತು ಮಾಂಸದ ಅಂಗಡಿ ತೆರೆಯಲು ವಿವಿಧ ಹಂತಗಳಲ್ಲಿ ಒಟ್ಟು 75,000/- ಸಾಲ ಪ್ರಗತಿನಿಧಿಯನ್ನು ಪಡೆದು ಅಂಗಡಿ ಮೂಲಕ ಸ್ವಂತ ಉದ್ಯೋಗವನ್ನು ಮಾಡಿ ಬದುಕಿಗೆ ಭದ್ರ ನೆಲೆಯನ್ನು ಕಂಡುಕೊಂಡರು. ಇದರ ಪರಿಣಾಮವಾಗಿ ಇದೀಗ ಮನೆ ಖರೀದಿ, ಬೈಕು ಖರೀದಿ ಮಾಡಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ದಿನನಿತ್ಯದ ಅವಶ್ಯಕತೆಗಳಿಗೆ ಈ ಭಾಗದ ಜನರು ದೂರದ ಕ್ಯಾತನಹಳ್ಳಿಗೆ ಹೋಗುವ ಬದಲು ಸುತ್ತಮುತ್ತಲ ಹಳ್ಳಿಯ ಜನರು ಇದೇ ಅಂಗಡಿಯನ್ನು ಅವಲಂಬಿಸಿದ್ದಾರೆ. ಹೀಗೆ ನಿರಾಸೆ ಮೂಡಿದ ಬದುಕಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಭರವಸೆ ಮೂಡಿಸಿದ ಯೋಜನೆ ಎಂದು ಸತಿಪತಿಗಳಿಬ್ಬರೂ ಶ್ರೀ ಕ್ಷೇತ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *