ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ

ಕುಟುಂಬಕ್ಕೆ ಆಶಾಕಿರಣವಾದ ಧರ್ಮಸ್ಥಳ ಯೋಜನೆ ಯಡವನಹಳ್ಳಿ ವಲಯದ ತಳಲುತೊರೆ ಗ್ರಾಮದ ಆಂಜನೇಯ ಸ್ವಾಮಿ ಸ್ವಸಹಾಯ ಸಂಘದ ಸದಸ್ಯರಾದ ಅನುಷಾರವರು ತಾಲೂಕಿಗೆ ಯೋಜನೆಯು ಬಂದಾಗ ಸಂಘಕ್ಕೆ ಸೇರಿದರು. ಮೊದಲನೇ ಪ್ರಗತಿ ನಿಧಿ ಸಾಲ 10,000 ರೂಗಳನ್ನು ಬೈಕ್ ಖರೀದಿಗೆ ಸಾಲವನ್ನು ಪಡೆದರು, ನಂತರ ಸಂಪೂರ್ಣ ಸುರಕ್ಷ ಅವಧಿಯಲ್ಲಿ ಸುರಕ್ಷಾ ಮಾಹಿತಿ ಪಡೆದು ಮನೆಯಲ್ಲಿರುವ ಮೂರು ಸದಸ್ಯರಿಗು ಸುರಕ್ಷಾ ವಿಮೆ ಮಾಡಿಸಿದರು, ಆದರೆ ಅದೇ ವರ್ಷ ಮಗನ ಅನಾರೋಗ್ಯದ ಕಾರಣ ಅರುಣೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ಎಲ್ಲಾ ದಾಖಲೆಗಳನ್ನು ಯೋಜನಾ ಕಛೇರಿಗೆ ನೀಡಿ, ಸಂಪೂಣ್ ಸುರಕ್ಷಾ ಕೇಂದ್ರ ಕಛೇರಿಯಿಂದ 17,500 ರೂ ಅನುದಾನ ಮಂಜೂರಾಗಿ ಬಂದಿತು ನಂತರ ಎರಡನೇ ಸಾಲ ಮೂವತ್ತು ಸಾವಿರ ಹಾಗೂ  ಐವತ್ತು ಸಾವಿರ ಪ್ರಗತಿನಿಧಿ ಕೊಟ್ಟಿಗೆ ರಚನೆ ಪಡೆದು ಕೊಟ್ಟಿಗೆ ರಚನೆ ಮಾಡಿ ಯೋಜನೆಯಿಂದ ಕೊಟ್ಟಿಗೆ ರಚನೆ ಅನುದಾನ 2000.00 ರೂ ಪಡೆದುಕೊಂಡಿರುತ್ತಾರೆ. ಜ್ಞಾನ ವಿಕಾಸ ಕಾರ್ಯಕ್ರದಲ್ಲಿ ಸ್ವ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಸ್ವತಃ ತಾವೇ ಮನೆಯಲ್ಲಿ ಅಕ್ಕಿ ಹಪ್ಪಳ ತಯಾರಿಸಿ ಮದುವೆ, ಗೃಹಪ್ರವೇಷ ಮುಂತಾದ ಕಾರ್ಯಕ್ರಮಗಳಿಗೆ ಕೊಡುತ್ತಿದ್ದು ಇದರಿಂದ ಉತ್ತಮ ಆದಾಯ ಪಡೆದಿದ್ದು ಸಾಲ ಮರುಪಾವತಿಗೂ ಕೂಡ ಅನುಕೂಲವಾಗಿದೆ. ಈ ರೀತಿ ಮಂಜುನಾಥ ಸ್ವಾಮಿಯ ಕೃಪೆ ನಮ್ಮ ಕುಟುಂಬದ ಉನ್ನತಿಗೆ ಕಾರಣವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿರುತ್ತಾರೆ. 

Leave a Reply

Your email address will not be published. Required fields are marked *