success storyWomen Empowerment

ದಾರಿಯಾದ ದಿನಸಿ ಅಂಗಡಿ ಮತ್ತು ಇನ್ನಿತರ ಯಶೋಗಾಥೆಗಳು

“ದಾರಿಯಾದ ದಿನಸಿ ಅಂಗಡಿ”

ಸೊರಬ ತಾಲೂಕಿನ ಮಾತೃಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದ ಛಾಯಾ ವಿ ಇವರು ಶ್ರಾವಣ ಸ್ವ-ಸಹಾಯ ಗುಂಪಿನ ಸದಸ್ಯೆ ಯಾದ ಇವರು ಯೋಜನೆಯಿಂದ 1 ಲಕ್ಷ ಸಾಲವನ್ನು ಪಡೆದು ತನ್ನ ಗಂಡನಿಗೆ ದಿನಸಿ ಅಂಗಡಿ ವ್ಯಾಪಾರಕ್ಕೆ ಸಹಾಯವನ್ನು ಮಾಡಿದ್ದು, ತನ್ನ ಕುಟುಂಬದ ನಿರ್ವಹಣೆಗೆ ಸಹಕಾರವನ್ನು ಮಾಡಿದ್ದು ತನ್ನ ಕುಟುಂಬದ ನಿರ್ವಹಣೆಗೆ ಸಹಕಾರವನ್ನು ಮಾಡಿದ್ದು, ದಿನಸಿ ಅಂಗಡಿ ವ್ಯಾಪಾರದಿಂದಲೇ ತಮ್ಮ ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದು, ಸ್ವ-ಉದ್ಯೋಗವನ್ನು ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿನಿಧಿ ಸಾಲ ಹಾಗೂ ಜ್ಞಾನವಿಕಾಸ ಕೇಂದ್ರದಿಂದ ಮಾಹಿತಿ ಮಾರ್ಗದರ್ಶನವೇ ಕಾರಣವೆಂದು ಹೆಮ್ಮೆಯಿಂದ ಹೇಳುತ್ತಾರೆ.

“ಬದುಕಿಗೆ ನೆರವಾದ ಹಾರ ತಯಾರಿಕೆ”

ಸೊರಬ ತಾಲೂಕಿನ ಸೊರಬ ಕಾರ್ಯಕ್ಷೇತ್ರದಲ್ಲಿ ಮಾತೃಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಹಾಗೂ ಭಗವಾನ್ ತಂಡದ ಸದಸ್ಯೆಯಾದ ಶ್ರೀಮತಿ ರೂಪಾ ಇವರು ಯೋಜನೆ ಪ್ರಗತಿನಿಧಿಯಿಂದ ತಮ್ಮ ಸ್ವ-ಉದ್ಯೋಗವನ್ನು ಉತ್ತಮ ರೀತಿಯಲ್ಲಿ ನೆಡೆಸಲು ಸಹಕಾರವಾಗಿದೆ. ಎಂಬುದನ್ನು ತಿಳಿಸಿರುತ್ತಾರೆ. ತಮ್ಮ ಮನೆಯಲ್ಲೇ ಉತ್ತಮ ರೀತಿಯಲ್ಲಿ ಬಾಸಿಂಗ ಹಾಗೂ ಹಾರ ತಯಾರಿಸಿ ಮದುವೆ ಸಮಾರಂಭಗಳಿಗೆ ನೀಡುವ ಮೂಲಕ ಮನೆಯಲ್ಲೇ ಮದುವೆ ಸಮಯಗಳಲ್ಲಿ ದಿನಕ್ಕೆ ರೂ. 5000/- ದಿಂದ ರೂ. 8000/- ತನಕ ಆದಾಯವನ್ನು ಗಳಿಸಿರುತ್ತಾರೆ. ಇವರು ಯೋಜನೆಯಿಂದ ರೂ.59000/- ಸಾಲವನ್ನು ಪಡೆದು ಇನ್ನೂ ಹೆಚ್ಚಿನ ಸಾಲವನ್ನು ಪಡೆದು ಇನ್ನೂ ಹೆಚ್ಚಿನ ವ್ಯಾಪಾರವನ್ನು ನಡೆಸಬೇಕು ಎಂಬುದನ್ನು ಹೆಮ್ಮೆಯಿಂದ ಹೇಳುತ್ತಾರೆ. ನಾನು ಸ್ವ-ಉದ್ಯೋಗವನ್ನು ಉತ್ತಮ ರೀತಿಯಲ್ಲಿ ನಡೆಸಲು ಜ್ಞಾನವಿಕಾಸ ಕೇಂದ್ರದ ಮಾಹಿತಿಯೇ ಆಧಾರವೆಂದು ತಿಳಿಸಿರುತ್ತಾರೆ.

“ಸೀರೆಕುಚ್ಚಿನಿಂದ ಸಿರಿಯಾದ ಬದುಕು”

ಸೊರಬ ತಾಲೂಕಿನ ಸೊರಬ ಕಾರ್ಯಕ್ಷೇತ್ರದ ಶ್ರಾವಣ ಸ್ವ-ಸಹಾಯ ಗುಂಪಿನ ಸದಸ್ಯೆ ಹಾಗೂ ಮಾತೃಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದ ಇವರು ಸೀರೆಯ ಕುಚ್ಚುಗಳನ್ನು ಕಟ್ಟುವುದರಿಂದ 1 ಸೀರೆಗೆ ರೂ. 250/- ರಿಂದ ರೂ. 500/- ತನಕ ಹಣವನ್ನು ಪಡೆಯುತ್ತಾರೆ. ದಿನಕ್ಕೆ ಇವರು 4 ರಿಂದ 5 ಸೀರೆಯ ಕುಚ್ಚನ್ನು ಕಟ್ಟುತ್ತಾರೆ. ಇವರ ಖರ್ಚುಗಳನ್ನು ಕಳೆದು ದಿನಕ್ಕೆ ರೂ. 700/- ರೂಪಾಯಿ ಲಾಭವನ್ನು ಕಳಿಸುತ್ತಾರೆ. ಕುಟುಂಬದ ನಿರ್ವಹಣೆಗೆ ಇವರ ಸಹಕಾರ ಮಹತ್ವವಾದದ್ದು, ಎಂಬಿದನ್ನು ಇವರ ಮನೆಯವರು ತಿಳಿಸಿರುತ್ತಾರೆ. ಇವರು ಯೋಜನೆಯಿಂದ ರೂ. 75000/- ಸಾಲವನ್ನು ಪಡೆದುಕೊಂಡಿರುತ್ತಾರೆ. ಇವರು ಸೀರೆ ಕುಚ್ಚನ್ನು ಕಟ್ಟಲು ಜ್ಞಾನವಿಕಾಸ ಕೆಂದ್ರದಲ್ಲಿ ನೀಡಿದ ಸ್ವ-ಉದ್ಯೋಗ ತರಬೇತಿಯ ಮಾಹಿತಿಯೇ ಕಾರಣ ಎಂಬುದನ್ನು ತಿಳಿಸಿರುತ್ತಾರೆ.

“ಜೀವನಕ್ಕೆ ಉಪಕಾರವಾದ ಉಪಹಾರ ಮಂದಿರ”

ಸೊರಬ ತಾಲೂಕಿನ ಸೊರಬ ಕಾರ್ಯಕ್ಷೇತ್ರದಲ್ಲಿ ಬಗವಾನ ಸ್ವ-ಸಹಾಯ ಗುಂಪಿನ ಸದಸ್ಯೆಯಾದ ಶ್ರೀಮತಿ ಹರ್ಷಿತಾರವರು ಯೋಜನೆಯಿಂದ 1 ಲಕ್ಷ ಪ್ರಗತಿನಿಧಿಯನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಇವರು ಜ್ಞಾನವಿಕಾಸ ಕೇಂದ್ರದ ಸದಸ್ಯೆಯೂ ಕೂಡ ಆಗಿರುತ್ತಾರೆ. ಇವರು ಸೊರಬ ಕಾರ್ಯಕ್ಷೇತ್ರದಲ್ಲಿ ಉಪಹಾರ ಮಂದಿರವನ್ನು ತೆರೆದಿದ್ದು, ಪ್ರತಿದಿನಕ್ಕೆ ರೂ. 1500/- ರಿಂದ ರೂ. 2000/- ತನಕ ಲಾಭವನ್ನು ಗಳಿಸಿತ್ತಾರೆ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿರುವಾಗ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ಮಾಹಿತಿಯಿಂದಾಗಿ ನಮಗೆ ಉಪಹಾರ ಮಂದಿರವನ್ನು ತೆರೆಯಲು ಸಹಕಾರವಾಯಿತು. ಎಂಬುದನ್ನು ಮನದಾಳದಿಂದ ನುಡಿಯುತ್ತಾರೆ.

Leave a Reply

Your email address will not be published. Required fields are marked *