success storyWomen Empowerment

” ರಾಗಿ ಗಿರಣಿ, ಬದುಕು ಬಂಗಾರದ ಭರಣಿ “

“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ. ಇವರು ಚೌಡೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಾಗಿದ್ದು, ಇವರ ಕುಟುಂಬದಲ್ಲಿ ಒಟ್ಟು 3 ಜನ ಇರುತ್ತಾರೆ. ಗಂಡ ಸ್ವಾಮಿಗೌಡ ಸಿವಿಲ್ ಗುತ್ತಿಗೆದಾರನಾಗಿದ್ದು, ಮಗ ಭರತ್ ಮೈಸೂರು ವಿಕ್ರಾಂತ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ತನ್ನ ಕಾಲಿನ ಮೇಲೆ ತಾನು ನಿಲ್ಲುವ ಮಾತಿನಂತೆ ಭಾಗ್ಯಮ್ಮ ಗ್ರಾಮದಲ್ಲಿ ರಾಗಿ ಹಿಟ್ಟಿನ ಗಿರಣಿಯನ್ನು ಪ್ರಾರಂಬಿಸಿದರು. ಇವರು 1 ಎಕರೆ ಜಮೀನು ಹೊಂದಿದ್ದಾರೆ ಆದಾಗಿಯೂ ಇವರು ಆದಾಯವನ್ನು ಒಂದು ವರ್ಷದಲ್ಲಿ ಒಂದು ಬಾರಿ ಮಾತ್ರ ಗಳಿಸಲು ಆಗುತ್ತಿತ್ತು ಆದರೆ ಇವರು ಸ್ವ-ಉದ್ಯೋಗ ಕೈಗೊಂಡಲ್ಲಿ ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗಬಹುದು ಎಂಬ ಆಲೋಚನೆಯೊಂದಿಗೆ ರಾಗಿ ಹಿಟ್ಟಿನ ಸಣ್ಣ ಉಧ್ಯಮವನ್ನು ಪ್ರಾರಂಭಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾರಂಭದಲ್ಲಿ ರೂ 10000/- ಪ್ರಗತಿನಿಧಿ ವ್ಯವಾಯಕ್ಕೆ ಪಡೆದು ದ್ವಿತೀಯ ಹಂತದಲ್ಲಿ ರೂ 25000/- ಪ್ರಗತಿನಿಧಿ ಪಡೆದು ಗಿರಣಿ ಅಳವಡಿಸಿದರು ಇದಕ್ಕೆ ಪೂರಕವಾಗಿ ಸಂಸ್ಥೆಯಿಂದ 2500/- ಪ್ರೋತ್ಸಹಧನವನ್ನು (ಅನುದಾನ) ನೀಡಲಾಯಿತು. ಇವರ ರಾಗಿ ಮಿಲ್‍ಗೆ ಶಿಂಡಬೋಗನಹಳ್ಳಿ, ಹೊನಗನಹಳ್ಳಿ, ಕಣಿವೆಕೊಪ್ಪಲು, ಗ್ರಾಮಗಳಿಂದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನರು ಬರುತ್ತಿದ್ದು ದಿನವೊಂದಕ್ಕೆ ರೂ 400 ಗಳಿಸುವ ಇವರು ತಿಂಗಳಿಗೆ ರೂ 12000/- ಆದಾಯವನ್ನು ಗಳಿಸುತ್ತಿದ್ದಾರೆ. ವಾರದ ಕಂತನ್ನು ಕ್ರಮವಾಗಿ ಕಟ್ಟುತ್ತಾ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಈವರೆಗೆ ಯೋಜನೆಯ ವತಿಯಿಂದ ರೂ 75000/- ಪ್ರಗತಿನಿಧಿ ಸಾಲ ಪಡೆದಿದ್ದು ಆರ್ಥಿಕವಾಗಿ ನಾನು ಮುಂದೆ ಬರಲು ಧರ್ಮಸ್ಥಳ ಸಂಘವು ಸಹಹಕಾರಿಯಾಗಿದೆ ಇಲ್ಲದಿದ್ದಲ್ಲಿ ತಾನು ಈಗಲೂ ಸಹಿತ ಹಣಕಾಸಿಗಾಗಿ ಮಗ ಅಥವಾ ಗಂಡನನ್ನು ಅವಲಂಬಿಸಬೇಕಾಗಿತ್ತು. ಆದರೆ ಈಗ ನನಗೆ ಬೇಕಾದ ಸಂಪಾದನೆ ತಾನೆ ಮಾಡುತ್ತಿದ್ದೇನೆಂದು ಭಾಗ್ಯಮ್ಮರವರು ಸಂತಸದ ನಗೆ ಬೀರುತ್ತಾರೆ. ಇದರಿಂದ ಪ್ರೇರಿತಗೊಂಡ ಇವರ ಸ್ವಸಹಾಯ ಸಂಘದ ಸದಸ್ಯರು ಇದೆ ಮಾದರಿಯಲ್ಲಿ ಕುರಿ. ಕೋಳಿ ಸಾಕಣೆ ಮಾಡಿ ಸ್ವಾವಲಂಬಿ ಬದುಕಿಗೆ ನಾಂದಿ ಹಾಡುತ್ತಿದ್ದಾರೆ.

Leave a Reply

Your email address will not be published. Required fields are marked *