ಶ್ರೀ  ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಪಾಂಡವಪುರ ತಾಲ್ಲೂಕಿನ್ಯಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

Posted on Posted in Communnity Development, News

ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಅತ್ಯಂತ “ಸ್ವಚ್ಛ ಧಾರ್ಮಿಕ ನಗರಿ” ಎಂಬ ಪ್ರಶಸ್ತಿಗೆ ಭಾಜನವಾದ ವಿಷಯ ನಮಗೆಲ್ಲರಿಗೂ ತಿಳಿದಿದೆ. ಈ ಸಂತೋಷವನ್ನು ಗ್ರಾಮ ಗ್ರಾಮಗಳಲ್ಲಿಯೂ ಹಂಚಿಕೊಳ್ಳುವಂತೆ ಮತ್ತು ಈ ಪ್ರಶಸ್ತಿಯು ಚಿರಸ್ಥಾಯಿಯಾಗಿ ನೆನಪಿನಲ್ಲುಳಿಯುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಇದೀಗ ನೂತನ ಕ್ರಿಯಾ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅದುವೇ ಸ್ವಚ್ಛ ಭಾರತ ನಿರ್ಮಲ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ತಾಲ್ಲೂಕ ಯೋಜನಾಧಿಕಾರಿ ಮೇದಪ್ಪ ಎನ್ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ವತಿಯಿಂದ ಕುರುಹಟ್ಟಿ ಮತ್ತು ಪಟ್ಟಸೋಮನಹಳ್ಳಿ ,ಬೇವಿನಕುಪ್ಪೆ ಗ್ರಾಮದಲ್ಲಿ 71 ನೇ ಸ್ವಾತಂತ್ಯ ದಿನಾಚರಣೆ ಪ್ರಯುಕ್ತ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಗ್ರಾಮಗಳಲ್ಲಿರುವ ಶ್ರದ್ಧಾ ಕೇಂದ್ರಗಳನ್ನು ಆಗಸ್ಟ್ 15ರ ಒಳಗಾಗಿ ಶುಚಿಗೊಳಿಸಬೇಕೆಂದು ಪೂಜ್ಯರು ಸಂಕಲ್ಪಿಸಿರುತ್ತಾರೆ. ಅವರ ಮಾರ್ಗದರ್ಶನದಂತೆ ಪಾಂಡವಪುರ ತಾಲ್ಲೂಕಿನ 82 ಗ್ರಾಮಗಳಲ್ಲಿ ಏಕಕಾಲದಲ್ಲಿ ದಾರ್ಮಿಕ ಶ್ರದ್ಧಾ ಕೇಂದ್ರಗಳ ಗರ್ಭಗೃಹ, ಶ್ರದ್ಧಾ ಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ, ಪರಿಕರಗಳ ಶುದ್ಧಗೊಳಿಸುವ ಈ ಬೃಹತ್ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಿಬೇಕೇಂದು ಕರೇ ನೀಡಿದರು.

ನಂತರ ಊರಿನ ಯಜಮಾನ ಪುಟ್ಟರಾಮು ಮಾತನಾಡಿ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಪ್ಲಾಸ್ಟಿಕ್ ಕವರ್, ಪಾನೀಯ ಬಾಟಲ್, ಶ್ರದ್ಧಾ ಕೇಂದ್ರಗಳ ಪರಿಸರದಲ್ಲಿ ಉಗುಳುವುದು, ಎಲೆ ಅಡಿಕೆ ತಿಂದು ಉಗುಳುವುದು, ನೆಗಡಿ ಸೀನುವುದನ್ನು ಮಾಡಬೇಡಿ.ಗರ್ಭಗುಡಿಯ ಹೊರ ಸುತ್ತಿನಲ್ಲಿ ಅಡುಗೆ ಮಾಡುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಬಟ್ಟೆ ಒಗೆಯುವುದು, ಒಣಗಿಸುವುದನ್ನು ಮಾಡಬೇಡಿ.ಜಾತ್ರೆಯ ಸಂದರ್ಭಗಳಲ್ಲಿ ಐಸ್‍ಕ್ರೀವ ಬಾಳೆಹಣ್ಣು, ಹಣ್ಣು ಹಂಪಲುಗಳ ಸಿಪ್ಪೆಯನ್ನು ಕಸದಬುಟ್ಟಿಗೆ ಹಾಕಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅದ್ಯಕ್ಷೆ ಶಿಲಾವತಿ,ಮೈನಾವತಿ,ಯೋಜನೆಯ ಕೃಷಿಅಧಿಕಾರಿ ಗಣೇಶ ಬಾನಪ್ಪನವರ  ಊರಿನ ಯಜಮಾನ ಸೋಮಣ್ಣ, ಈರೇಗೌಡ, ನಿಂಗೇಗೌಡ, ಕರೀಗೌಡ, ಮರಿಗೌಡ, ಗ್ರಾ.ಪಂ.ಸದಸ್ಯ ಪ್ರಕಾಶ, ವಲಯ ಮೇಲ್ವಿಚಾರಕ ಮುನೇಶ ಎಂ, ಕಾರ್ಯದರ್ಶಿ ರಮ್ಯಶ್ರೀ, ನಿಂಗೆಗೌಡ, ಪ್ರಕಾಶ, ಸೇವಾಪ್ರತಿನಿಧಿ ಪಲ್ಲವಿ, ನಾಗರತ್ನಮ್ಮ, ಪಿ ನಾರಾಯಣ, ಶಿದ್ದಲಿಂಗಸ್ವಾಮಿ, ನಾಗರಾಜು, ಯೋಜನೆಯ ಸಿಬ್ಬಂದಿಗಳು, ಮುಂತಾದವರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *