ಅನಾರೋಗ್ಯ ಅಡ್ಡಿಯಾಗಲಿಲ್ಲ ಆತ್ಮವಿಶ್ವಾಸದ ನಡಿಗೆಗೆ
‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.