ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ

ಕೃಷಿಯಿಂದ ಗೆದ್ದ ಶ್ರೀಮತಿ ವೇದಾವತಿ ಬಿನ್ ರಾಜಣ್ಣ. ಕುಟುಂಬಕ್ಕೆ ಆಸರೆಯಾಗಿದ್ದ ಜಮೀನನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ಹಾಕಿ ಕೃಷಿಕರಾದ ವೇದಾವತಿ ಇನ್ನೊಬ್ಬರಲ್ಲಿ ದಿನಗೂಲಿ ಆಳಾಗಿ ದುಡಿಯುತ್ತಿದ್ದರು. ಬದುಕಿನ ಬಂಡಿಯ ಭರವಸೆಯೇ ಕಮರಿ ಹೋಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ನಮ್ಮ ಜಮೀನು ನಮ್ಮ ಕೈ ಸೇರಿತು ಅಂತಾರೆ ವೇದಾವತಿಯವರು.