ತಂತ್ರಜ್ಞಾನ ಆಧಾರಿತ ಹೈನುಗಾರಿಕೆ ಒಂದು ಮಾದರಿ
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀರಾಂಪುರ ಕಾಲೋನಿಯ 23 ವರ್ಷದ ವಯಸ್ಸಿನ ಸಾಗರ್ ಎಂಬಾತ ಆಧುನಿಕ ಪದ್ದತಿಯಲ್ಲಿ ಹೈನುಗಾರಿಕೆಯನ್ನು ನಡೆಸಿ ಸೈ ಎನಿಸಿಕೊಂಡಾತ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚುಂಚನಕಟ್ಟೆ ವಲಯದ ಶ್ರೀರಾಂಪುರ ಕಾಲೋನಿಯಲ್ಲಿ “ಜೋಡಿ ಎತ್ತು ಪ್ರಗತಿ ಬಂಧು” ತಂಡಕ್ಕೆ ಸೇರಿಕೊಂಡು ಹೈನುಗಾರಿಕೆಯನ್ನು ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು ಯಶಸ್ಸನ್ನು ಸಾಧಿಸಿದಾತ.