Agriculturesuccess story

“ಮಂದಹಾಸ ಮೂಡಿಸಿದ ಸಾವಯವ ಕೃಷಿ”

ಸುತ್ತ ಬರಡು ಜಮೀನು, ಸುತ್ತ ಹೊಲಗಳು ಅವುಗಳಲ್ಲಿ ದ್ವಿದಳಧಾನ್ಯ ಬೆಳೆಗಳಾದ ಹುರುಳಿ, ತಡಣೆ , ಅವರೆ, ಹೊಲದ ಸುತ್ತ ನಳನಳಿಸುವ ಅರ್ಕಿಲೇಸ ಮರ, ಅದರ ಮಧ್ಯ ತೆಂಗು,ಮಧ್ಯ ತೊಂಡೆ ಕೃಷಿ ಹಾಗೂ ಅಲ್ಲಲ್ಲಿ ಪುಪ್ಟ ಕೃಷಿ ಇದೆಲ್ಲವೂ ಬೆಳೆದಿರುವುದು ಸಾವಯವ ಕೊಟ್ಟಿಗೆ ಗೊಬ್ಬರದಲ್ಲಿ.

ಸಕ್ಕರೆ ನಾಡಿಗೆ ಪ್ರಸಿದ್ಧವಾದ ಮಂಡ್ಯ ಜೆಲ್ಲೆಯ ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಒಣ ಭೂಮಿಯಲ್ಲಿ ಇಂಥ ಕೃಷಿ ವೈವಿಧ್ಯತೆಯಲ್ಲಿ ಸಂತಸ ಕಾಣುವುದು ಎಂ.ಪಿ.ನೀಲಕಂಠಬಾಬು & ಪ್ರಭಾವತಿ ದಂಪತಿ ಕುಟುಂಬ ನೀಲಕಂಠಬಾಬು ಸರಕಾರಿ ಶಾಲೆಯಲ್ಲಿ 9ನೇ ಕ್ಲಾಸ್ ವರೆಗೆ ವಿದ್ಯಾಭ್ಯಾಸ ಮುಗಿಸಿ ಕೃಷಿಗೆ ಒಲವು ಕೊಟ್ಟು ವ್ಯೆವಿಧ್ಯಮಯವಾಗಿ ತೋಟ ರಚಿಸಿದ್ದಾರೆ. ಮನೆತನದಿಂದ ಸಿಕ್ಕ ಪಾಲು ಕೇವಲ ನಾಲ್ಕು ಎಕ್ರೆ ಜಾಗ ಇದರಲ್ಲಿ ಯಾವುದಾದರು ಕೃಷಿ ಮಾಡಿ ಕೈ ಸುಟ್ಟುಕೊಳ್ಳುವುದು ಬೇಡ ಎಂದು ಮನಸ್ಸಾಗಲಿಲ್ಲ. ಅದರ ಬದಲಿಗೆ ಇಷ್ಟದ ಸಾವಯವ ಕೃಷಿಯತ್ತ ಮುಖಮಾಡಿದರು.

ಬೆಳೆಗಳ ವಿವರ : ರಾಗಿ 1/2 ಎಕ್ರೆ, ದ್ವಿದಳ ಧಾನ್ಯ 1/2 ಎಕ್ರೆ, ಕಡಲೆಕಾಯಿ 0.5 ಗುಂಟೆ, ಫಾರಂ ಹುಲ್ಲು 15 ಗುಂಟೆ, ನುಗ್ಗೆ 60 ಗಿಡ, ತೊಂಡೆ ಕೃಷಿ 1/2 ಎಕ್ರೆ, ತೆಂಗು 110 ಗಿಡ, ಹಾಗೂ ಆರ್ಕಿಲೇಸ್ 350 ಗಿಡ ಇತ್ಯಾದಿ, ವಿಧದ ಹೂವಿನ ಗಿಡಗಳನ್ನು ಬೆಳೆದು ಹಾಗೂ 2 1/2 ಎಕ್ರೆ, ಸಾವಯವ ಕೃಷಿಮಾಡಿ ಹನಿ ನೀರಾವರಿ ಅಳವಡಿಸಿದ್ದಾರೆ.

ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಪದ್ದತಿಯಲ್ಲಿ ಕೃಷಿ ಮಾಡಲು ಆರಂಭಿಸಿದರು ರಾಸಾಯನಿಕ ಗೊಬ್ಬರದ ಫಲ ತಾತ್ಕಾಲಿಕ ಆದರೆ ಕೊಟ್ಟಿಗೆ ಗೊಬ್ಬರ ಹಾಗಲ್ಲ ಒಂದು ಬಾರಿ ಹಾಕಿದರೆ ಮೂರು ಬಾರಿ ಭೂಮಿಯು ರಸಸಾರವನ್ನು ಉಳಿಸುತ್ತದೆ ಜಮೀನಿನಲ್ಲಿ ಎರೆತೊಟ್ಟ ಘಟಕ, ಬ್ಯೆಯೋಡ್ಯೆಜಿಸರ್, ಜೀವಾಮೃತ ಘಟಕ, ರಚಿಸಿ ಗೊಬ್ಬರ ತಯಾರಿ ಕೃಷಿಗೆ ಹಾಕುತ್ತೇನೆ. ಇಳುವರಿ ಸ್ವಲ್ಟ ಕಡಿಮೆಯಾದರು ಪ್ರಕೃತಿಗೆ ತೊಂದರೆಯಾಗದಂತೆ ಮತ್ತು ಸೇವನೆ ಮಾಡುವ ಜನರಿಗೆ ಹಾನಿಯಾಗದಂತೆ ಬೆಳೆ ತೆಗೆಯುತ್ತೇನೆ ಇದರಲ್ಲಿ ನಮಗೆ ನೆಮ್ಮದೆ ಇದೆ. ಎನ್ನುತ್ತಾರೆ ಎಂ.ಪಿ.ನೀಲಕಂಠಬಾಬು

ತೆಂಗು ಸಮೃದ್ದವಾಗಿ ಬೆಳೆದು ಆದಾಯ ತಂದು ಕೊಡುತ್ತಿದೆ, 4 ವರ್ಷಗಳಿಂದಲೂ ವರ್ಷಕ್ಕೆ 1.20 ಲಕ್ಷದವರೆಗೆ ತೆಂಗಿನ ಗಿಡದಲ್ಲಿ ಆದಾಯ ಬರುತ್ತಿದೆ. ಮತ್ತು ತೊಂಡೆ ಕೃಷಿ ಮೂರು ವರ್ಷಗಳ ಕಾಲ ಫಲ ಬಿಡುವುದು ತಿಂಗಳಿಗೆ ರೂ 1000/ ಖರ್ಚು ತಗುಲಿ ರೂ 5000/ ರ ವರೆಗೆ ಆದಾಯ ಸಿಗುತ್ತದೆ ಮತ್ತು ಮನೆಯ ಜೀವನೊಪಾಯಕ್ಕೆ 1 ವರ್ಷಕ್ಕೆ 5-6 ಚೀಲ ಜಗಳೂರು ತಳಿ ರಾಗಿ ಬೆಳೆಯುತ್ತೇನೆ.ಹಾಗೂ ದ್ವಿದಳ ಧಾನ್ಯಗಳಾದ ತೊಗರಿಯು 1 ವರ್ಷಕ್ಕೆ ರೂ 5000 , ಹಲಸಂದೆ ರೂ 3000, ತರಕಾರಿಯನ್ನು ಮನೆಗೆ ಆಗುವಷ್ಟು ಬೆಳೆದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯ ಅಧ್ಯಯನ ಪ್ರವಾಸ ಮಾಡಿ ತಾಂತ್ರಿಕವಾಗಿ ಜಪಾನ ಮಾದರಿ ಕಾಂಪೊಸ್ಟ ಗುಂಡಿ ಹಾಗೂ ಹಸು ಖರೀದಿಗೆ ರೂ 40000 ಸಾಲ ಪಡೆದು ಹಾಗೂ ಕೃಷಿ ಇಲಾಖೆಯ ಸಹಾಯಧನ ಪಡೆದುಕೊಂಡಿತ್ತೇನೆ. ಹಾಗೂ ಎಲ್ಲರನ್ನೂ ಕೂಡಾ ಸಾವಯವ ಕೃಷಿ ರೈತರನ್ನಾಗಿ ಮಾಡಬೇಕೆಂಬ ಛಲದಿಂದ ಬೇರೆ ಬೇರೆ ತರಬೇತಿ ನೀಡುವುದು. ಬೇರೆಯವರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡುವುದು. ಯೋಜನೆಯ ಮತ್ತು ಕೃಷಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಮಾಹಿತಿ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಭಾರಿಯಾಗಿದ್ದೆನೆಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *