ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಕೇಂದ್ರಕ್ಕೆ NIST, ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೆಂದ್ರ ಹೆಗ್ಡೆಯವರು ಭೇಟಿ ನೀಡಿದರು. ಈ ಒಂದು ಸಂದರ್ಭದಲ್ಲಿ ವಿವಿಧ ಜಿಲ್ಲೆಯಿಂದ ಬಂದ ನಗದು ಸಹಾಯಕರಿಗೆ ಮಾನವೀಯ ಮೌಲ್ಯಗಳ ಕುರಿತು ಮಾತನಾಡುತ್ತಾ, ಒಬ್ಬ ವ್ಯಕ್ತಿಯು ಜೀವನದಲ್ಲಿ ಹಲವಾರು ಸಮಸ್ಯೆಯನ್ನು ಎದುರಿಸುವನು. ಅವು ಯಾವ ವಿಧದಲ್ಲಿಯಾದರೂ ಆಗಿರಬಹುದು. ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ನಡಾವಳಿಕೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯವಾಗಿರುವುದು. ಪರಸ್ಪರ ನಂಬಿಕೆ, ಆತ್ಮವಿಶ್ವಾಸದಿಂದ ಜೀವನವನ್ನು ತೆಗೆದುಕೊಂಡರೆ ಉತ್ತಮವಾಗುವುದು. ಮಾನವೀಯ ಮೌಲ್ಯ ನಮ್ಮಲ್ಲಿ ಇರಬೇಕು. ಮನುಷ್ಯನು ಜನ್ಮ ತಳೆದ ಕ್ಷಣದಿಂದಲೇ ಮಾನವೀಯ ಮೌಲ್ಯಒಳಗಾಗುವವನು. ಜೀವನಕ್ಕೆ ಗಾಳಿ ಹೇಗೆ ಅವಶ್ಯಕವೋ, ಸಾಮಾಜಿಕ ಬದುಕಿಗೆ ಜೀವ ಜಲ ಮಾನವೀಯ ಮೌಲ್ಯವಾಗಿದೆ. ಅನೇಕ ಬಾರಿ ಮಾತುಗಳು ಹೇಳಲಾರದ್ದನ್ನು ಮೌನ ಹೇಳುತ್ತದೆ. ಈ ಮೌನ ಭಾಷೆಯನ್ನು ಸಹ ಮಾನವೀಯ ಮೌಲ್ಯಎಂದು ಕರೆಯಬಹುದು. ಒಬ್ಬ ವ್ಯಕ್ತಿ ಉತ್ತಮ ಮಾನವೀಯ ಮೌಲ್ಯವನ್ನು ಹೊಂದಲು ಈ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು. ಸ್ವಸಹಾಯ ಸಂಘ ಎಂದರೆ ಹಲವು ಮಕ್ಕಳ ತಾಯಿತ ಇದ್ದ ಹಾಗೇ ಎಲ್ಲಾ ಪಾಲುದಾರ ಕುಟುಂಬದವರು ಒಂದೇ ತಾಯಿಯ ಅಡಿಯಲ್ಲಿ ಇರುವರು ಎಂದು ಎಲ್ಲಾ ಕಾರ್ಯಕರ್ತರಿಗೆ ಮಾನವೀಯ ಮೌಲ್ಯವನ್ನು ಒಳಗೊಂಡ ಕೆಲಸವನ್ನು ಮಾಡುವಂತೆ ಕರೆ ನೀಡಿದರು. ಈ ಒಂದು ಕಾರ್ಯಕ್ರದಲ್ಲಿ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವiಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕರಾದ ಶ್ರೀ ಪುರುಷೋತ್ತಮ ಪಿಕೆ. ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಕೇಂದ್ರಕ್ಕೆ, ಡಾ|| ವೀರೆಂದ್ರ ಹೆಗ್ಡೆಯವರು ಭೇಟಿ
